Fact Check | 2014ರ ಫೋಟೋ ಬಳಸಿ ರಾಹುಲ್‌ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಂಚಿಕೆ

“5ನೇ ತರಗತಿ ಓದುತ್ತಿದ್ದ ಬಡ ವಿದ್ಯಾರ್ಥಿನಿ ರಾಹುಲ್ ಗಾಂಧಿ ಸಂದರ್ಶನದಲ್ಲಿ ಒಂದು ಪ್ರಶ್ನೆ ಮಾಡುತ್ತಾರೆ ಅದಕ್ಕಾಗಿ ಅವರ ಮೈಕ್ ಕಸಿದುಕೊಂಡು ಆ ಹುಡುಗಿಗೆ ಥಳಿಸುತ್ತಾರೆ ಎಂಬ ಬರಹದೊಂದಿಗೆ ರಾಹುಲ್‌ ಗಾಂಧಿ ಅವರಿಗೆ ಬಾಲಕಿಯೊಬ್ಬಳು ಎದ್ದು ನಿಂತು ಪ್ರಶ್ನಿಸುತ್ತಿರುವ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.

ಇನ್ನು ಈ ಬರಹದಲ್ಲಿ ರಾಹುಲ್‌ ಗಾಂಧಿ ಅವರಿಗೆ ಹಲವು ಪ್ರಶ್ನೆಗಳನ್ನೆ ಕೇಳಲಾಗಿದೆ ಆದರೆ ಅದಕ್ಕೆ ರಾಹುಲ್‌ ಗಾಂಧಿ ಅವರು ಉತ್ತರವನ್ನೇ ನೀಡಲಿಲ್ಲ ಎಂದು ಹಂಚಿಕೊಳ್ಳಲಾಗಿದೆ. ಇನ್ನು ಈ ಫೇಸ್‌ಬುಕ್‌ ಪೋಸ್ಟ್‌ಗೆ ಸಾಕಷ್ಟು ಮಂದಿ ಆಕ್ಷೇಪರ್ಹ ಕಮೆಂಟ್‌ಗಳನ್ನು ಹಾಕುತ್ತಿದ್ದು. ಈ ಪೋಸ್ಟ್‌ನಲ್ಲಿ ಮಾಡಿರುವ ಉಲ್ಲೇಖ ನಿಜವೆಂದು ನಂಬಿದ್ದಾರೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಈ ವೈರಲ್‌ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿ ಪರಿಶೀಲನೆ ನಡೆಸಿತು ಈ ವೇಳೆ ವೈರಲ್‌ ಫೋಟೋಗೆ ಹೋಲಿಕೆಯಾಗುವ ಮತ್ತೊಂದು ಫೋಟೋವನ್ನು ಎಕ್ಸ್‌ ಖಾತೆಯಿಂದ ಪೋಸ್ಟ್‌ ಮಾಡಲಾಗಿತ್ತು. ಆ ಎಕ್ಸ್‌ ಖಾತೆ ಕಾಂಗ್ರೆಸ್‌ ಅಧಿಕೃತ ಖಾತೆಯಾಗಿದ್ದು ಅದರಲ್ಲಿ  “ಮಹಾರಾಷ್ಟ್ರದ ಧುಲೆಯ ಶಿರ್ಪುರದಲ್ಲಿ ನಡೆದ ಜನಶಕ್ತಿ ಸಂವಾದದಲ್ಲಿ ಬುಡಕಟ್ಟು ಯುವಕರೊಂದಿಗೆ ರಾಹುಲ್ ಗಾಂಧಿ ಸಂವಾದ ಎಂದು ಬರೆಯಲಾಗಿದೆ.”

ಇನ್ನು ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋ 2014ರ ಮಾರ್ಚ್‌ 5 ರದ್ದು ಎಂಬುದು ಕಾಂಗ್ರೆಸ್‌ನ ಪೋಸ್ಟ್‌ನಿಂದ ತಿಳಿದು ಬಂದಿದೆ.

ಇನ್ನು ಆ ಯುವತಿಗೆ ಹಲ್ಲೆ ಮಾಡಿದ್ದಾಗಲಿ ಅಥವಾ ರಾಹುಲ್‌ ಗಾಂಧಿ ಪ್ರಶ್ನೆಗಳಿಗೆ ಉತ್ತರ ಕೊಡದಿರುವ ಬಗ್ಗೆ ಪತ್ರಿಕೆಗಳಲ್ಲಿ ಅಥವಾ ಸುದ್ದಿ ವಾಹಿನಿಗಳಲ್ಲಿ ವರದಿಯಾಗಿದೆಯೇ ಎಂದು ಪರಿಶೀಲನೆ ನಡೆಸಿದಾಗ  ಇದಕ್ಕೆ ಸಂಬಂಧ ಪಟ್ಟ ಯಾವುದೇ ವರದಿಗಳು ಕಂಡು ಬಂದಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾಗುತ್ತಿರುವ ಆರೋಪ ಸುಳ್ಳಿನಿಂದ ಕೂಡಿದೆ


ಇದನ್ನೂ ಓದಿ : Fact Check | ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಗೆ ಜಿಹಾದಿಗಳು ನೀರು ಎರಚಿದ್ದಾರೆಂಬುದು ಸುಳ್ಳು


ವಿಡಿಯೋ ನೋಡಿ : Fact Check | ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಗೆ ಜಿಹಾದಿಗಳು ನೀರು ಎರಚಿದ್ದಾರೆಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *