
Fact Check | ಬುರ್ಖಾ ಧರಿಸಿ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಇರುವ ಫೋಟೋ AI ನಿಂದ ನಿರ್ಮಿಸಲಾಗಿದೆ
ಬಾಲಿವುಡ್‌ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಅವರು ಕಳೆದ ವರ್ಷ ಜೂನ್‌ನಲ್ಲಿ ನಟ ಜಹೀರ್ ಇಕ್ಬಾಲ್ ಅವರನ್ನು ವಿವಾಹವಾಗಿದ್ದರು. ಇದಾದ ನಂತರ ಈ ದಂಪತಿಗಳ ಕುರಿತು ಹಲವು ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದವು. ಇದೀಗ ಸೋನಾಕ್ಷಿ ಸಿನ್ಹಾ ಅವರು ಮತಾಂತರಗೊಂಡಿದ್ದಾರೆ ಮತ್ತು ಸಂಪೂರ್ಣವಾಗಿ ಇಸ್ಲಾಂ ಪದ್ಧತಿಗಳನ್ನು ಪಾಲನೆ ಮಾಡುತ್ತಿದ್ದಾರೆ ಎಂದು ಹಲವರು ವಿವಿಧ ಬರಹಗಳೊಂದಿಗೆ ಫೋಟೋ ಒಂದನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಈ ಫೋಟೋದಲ್ಲಿ ಸೋನಾಕ್ಷಿ ಸಿನ್ಹಾ ಅವರು ಬುರ್ಖಾ ಧರಿಸಿರುವುದು ಕಂಡುಬಂದಿದ್ದು, ಹಲವರು ಇದನ್ನು…