Fact Check | ಒಣ ಶುಂಠಿ ಸೇವನೆಯಿಂದ ಗೊರಕೆ ಸಮಸ್ಯೆ ಮತ್ತು ಕೋವಿಡ್ 19 ಕಾಯಿಲೆ ಗುಣವಾಗುವುದಿಲ್ಲ

“ಒಣ ಶುಂಠಿಯನ್ನು ಬಳಸುವುದರಿಂದ ಗೊರಕೆ ಮತ್ತು ಕೋವಿಡ್ 19 ಸಮಸ್ಯೆಗಳನ್ನು ಬಗೆಹರಿಸಬಹುದು. ಹಾಗಾಗಿ ನಿಮಗೆ ಈ ಸಮಸ್ಯೆಗಳಿದ್ದರೆ ಇಂದಿನಿಂದಲೇ ಒಣ ಶುಂಠಿಯ ಪುಡಿಗಳನ್ನು ಬಳಸಲು ಆರಂಭಿಸಿ.” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲೂ ಇದು ಆರ್ಯುವೇದದಲ್ಲೂ ಹೇಳಲಾಗಿದೆ ಎಂದು ಸಾಕಷ್ಟು ಮಂದಿ ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಈ ರೀತಿಯ ಸುದ್ದಿ ಕೊರೋನಾ ಸಂದರ್ಭದಿಂದಲೂ ಹಂಚಿಕೊಳ್ಳಲಾಗುತ್ತಿದೆ. ಸಾಕಷ್ಟು ಮಂದಿ ಇದು ಪ್ರಯೋಜನಕಾರಿಯಾಗಲಿದೆ. ಹಲವಾರು ಜನ ಈ ಒಣ ಶುಂಠಿಯ ಹುಡಿಗಳಿಂದ ಲಾಭವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನೀವು ಇದನ್ನು ಬಳಸಿ ನೋಡಿ ಎಂದು ಬರೆದುಕೊಂಡು ಸುಳ್ಳು ಹರಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌  ಅನ್ನು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಈ ವೇಳೆ ವೈರಲ್‌ ಆಗಿರುವ ವಿಡಿಯೋದ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಈ ಹಿಂದೆ ಇದೇ ರೀತಿಯ ಸುದ್ದಿಯೊಂದರ ಕುರಿತು ಬೂಮ್‌ ಮಾಧ್ಯಮ ಮಾಡಿದ್ದ ಫ್ಯಾಕ್ಟ್‌ಚೆಕ್‌ನ ಅಧಿಕೃತ ಮಾಹಿತಿಗಳು ಲಭ್ಯವಾಗಿದೆ. ಇದೇ ವಿಚಾರದ ಕುರಿತು ಇನ್ನಷ್ಟು ಮಾಹಿತಿಗಳನ್ನು ಹುಡಿಕಿದಾಗ ಹಲವಾರ ಸಂಗತಿಗಳು ತಿಳಿದು ಬಂದಿವೆ.

ಈ ಹಿಂದೆ WHO ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಡಾ. ಪ್ಯಾಟ್ರಿಕ್ ಅಮೋತ್ ಅವರು ನಿಂಬೆ ಮತ್ತು ಶುಂಠಿಯನ್ನು ರೋಗನಿರೋಧಕ ಶಕ್ತಿ ವರ್ಧಕ ಎಂದು ವಿವರಿಸಿದ್ದಾರೆ. ಆದರೆ ಕೋವಿಡ್ ವೈರಸ್‌ಗೆ ಚಿಕಿತ್ಸೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದಲ್ಲದೆ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಎಂಜಿನಿಯರಿಂಗ್ ಮತ್ತು ಮೆಡಿಸಿನ್‌ನ ಲೇಖನವು ಯಾವುದೇ ಆಹಾರ, ಪಾನೀಯಗಳು ಅಥವಾ ಪೂರಕಗಳು COVID-19 ಗೆ ಚಿಕಿತ್ಸೆಯಾಗಿಲ್ಲ ಎಂದು ಉಲ್ಲೇಖಿಸುತ್ತದೆ. ಇದರ ಜೊತೆಗೆ ಹಲವು ಅಧ್ಯಯನಗಳು ಒಣ ಶುಂಟಿ ಸೇವನೆಯಿಂದ ಗೊರಕೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿವೆ.


ಇದನ್ನೂ ಓದಿ : Fact Check | 2014ರ ಫೋಟೋ ಬಳಸಿ ರಾಹುಲ್‌ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಂಚಿಕೆ


ವಿಡಿಯೋ ನೋಡಿ :Fact Check | 2014ರ ಫೋಟೋ ಬಳಸಿ ರಾಹುಲ್‌ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *