Fact Check: 5ನೇ ಕಿಂಗ್ ಜಾರ್ಜ್ ಶ್ಲಾಘಿಸಿ ರವೀಂದ್ರನಾಥ ಟ್ಯಾಗೋರ್‌ರವರು “ಜನ ಗಣ ಮನ” ಗೀತೆ ರಚಿಸಿಲ್ಲ

ರವೀಂದ್ರನಾಥ ಟ್ಯಾಗೋರ್

ರವೀಂದ್ರನಾಥ ಟ್ಯಾಗೋರು ಭಾರತ ಕಂಡ ಪ್ರಖ್ಯಾತ ಲೇಖಕ ಮತ್ತು ದಾರ್ಶನಿಕ. ಇವರು ರಚಿಸಿದ “ಜನ ಗಣ ಮನ” ಗೀತೆಯೂ ನಮ್ಮ  ರಾಷ್ಟ್ರ ಗೀತೆಯಾಗಿ ಮನ್ನಣೆ ಪಡೆದಿದೆ. ಆದರೆ ನಮ್ಮ ರಾಷ್ಟ್ರ ಗೀತೆಯ ಕುರಿತು, ರವೀಂದ್ರನಾಥ ಟ್ಯಾಗೋರ್ ರ ಕುರಿತು ಸಾಕಷ್ಟು ಸುಳ್ಳು ಆಪಾದನೆಗಳು ಮಾಡಲಾಗುತ್ತಿದೆ.

ಇತ್ತೀಚೆಗೆ, 1913 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಿದಾಗ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಕಿಂಗ್ ಜಾರ್ಜ್ V ಅವರನ್ನು ಶ್ಲಾಘಿಸಿ ರವೀಂದ್ರನಾಥ ಟ್ಯಾಗೋರ್ ಅವರು ‘ಜನ ಗಣ ಮನ’ ಹಾಡನ್ನು ಬರೆದಿದ್ದಾರೆ ಎಂದು ರಾಜೀವ್ ದೀಕ್ಷಿತ್ ಎಂಬ ಭಾಷಣಕಾರ ಮತ್ತು ಸಾಮಾಜಿಕ ಕಾರ್ಯಕರ್ತ ತಮ್ಮ ಯೂಟೂಬ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್: 1911ರ ಕಾಂಗ್ರೆಸ್ ಅಧಿವೇಶನದಲ್ಲಿ, ಒಂದೇ ದಿನ ಎರಡು ಹಾಡುಗಳನ್ನು ಪ್ರದರ್ಶಿಸಲಾಯಿತು, ಒಂದು ರವೀಂದ್ರನಾಥ ಟ್ಯಾಗೋರ್ ಅವರ ‘ಜನ ಗಣ ಮನ’. ಮತ್ತೊಂದು ರಾಮಾನುಜ ಚೌಧರಿ ಅವರು ವಿಶೇಷವಾಗಿ 5ನೇ ಕಿಂಗ್ ಜಾರ್ಜ್ ಗಾಗಿ ಬರೆದ ಹಾಡನ್ನು ಪ್ರದರ್ಶಿಸಲಾಯಿತು. ಆದಾಗ್ಯೂ, ಕೆಲವು ಇಂಗ್ಲಿಷ್ ಮಾಧ್ಯಮ ವರದಿಗಳು ಟ್ಯಾಗೋರರ ಹಾಡನ್ನು 5ನೇ ಕಿಂಗ್ ಜಾರ್ಜ್ ಅವರ ಗೌರವಾರ್ಥವಾಗಿ ಹಾಡಲಾಗಿದೆ ಎಂದು ತಪ್ಪಾಗಿ ಹೇಳಿವೆ.

26 ಡಿಸೆಂಬರ್ 1911 ರಂದು ಪ್ರಾರಂಭವಾದ ಕಾಂಗ್ರೆಸ್ ಅಧಿವೇಶನದಲ್ಲಿ ‘ಜನ ಗಣ ಮನ’ ಹಾಡನ್ನು ಮೊದಲ ಬಾರಿಗೆ ಹಾಡಲಾಯಿತು. 1911 ರ ಕಾಂಗ್ರೆಸ್ ಅಧಿವೇಶನದ ದಾಖಲೆಯು ಎರಡನೇ ದಿನದ ಸಭೆ ರವೀಂದ್ರನಾಥ ಟ್ಯಾಗೋರ್ ಸಂಯೋಜಿಸಿದ ದೇಶಭಕ್ತಿ ಗೀತೆಯೊಂದಿಗೆ ಪ್ರಾರಂಭವಾಯಿತು. ಟ್ಯಾಗೋರರ ಹಾಡಿನ ನಂತರ, ರಾಮಾನುಜ ಚೌಧರಿ ಅವರು ಐದನೇ ಜಾರ್ಜ್ ಗಾಗಿ ವಿಶೇಷವಾಗಿ ಸಂಯೋಜಿಸಿದ ಹಾಡನ್ನು 1911 ರಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರದರ್ಶಿಸಲಾಯಿತು. ಇದಲ್ಲದೆ, ‘ದಿ ಹಿಸ್ಟಾರಿಕಲ್ ರೆಕಾರ್ಡ್ ಆಫ್ ದಿ ಇಂಪೀರಿಯಲ್ ವಿಸಿಟ್ ಟು ಇಂಡಿಯಾ 1911‘ ದಾಖಲೆಯಲ್ಲಿ, ರವೀಂದ್ರನಾಥ ಟ್ಯಾಗೋರ್ ರಾಜಮನೆತನವನ್ನು ಸ್ವಾಗತಿಸಲು ನಿರ್ದಿಷ್ಟವಾಗಿ ಹಾಡನ್ನು ಸಂಯೋಜಿಸಿದ್ದಾರೆ ಎಂದು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.

ರವೀಂದ್ರನಾಥ ಟ್ಯಾಗೋರ್ ಅವರು 1937 ಮತ್ತು 1939 ರಲ್ಲಿ ಬರೆದ ಪತ್ರಗಳಲ್ಲಿ, ಐದನೇ ಕಿಂಗ್ ಜಾರ್ಜ್ ಅನ್ನು ಸ್ತುತಿಸುವ ‘ಜನ ಗಣ ಮನ’ ಹಾಡನ್ನು ತಾವು ಬರೆದಿಲ್ಲ ಅಥವಾ ಸಂಯೋಜಿಸಿಲ್ಲ ಎಂದು ಹೇಳಿದ್ದಾರೆ ಮತ್ತು ಹಾಡಿನಲ್ಲಿನ ‘ಅಧಿನಾಯಕ’ ಪದವು ಐದನೇ ಕಿಂಗ್ ಜಾರ್ಜ್ ಅನ್ನು ಉಲ್ಲೇಖಿಸುವುದಿಲ್ಲ ಎಂದು ಹೇಳಿದ್ದಾರೆ.

1913 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ನೀಡಿದಾಗ ಹರಾಲ್ಡ್ ಗೇಬ್ರಿಯಲ್ ಜಾರ್ನೆ ಸ್ವೀಡಿಷ್ ಅಕಾಡೆಮಿಯ ನೊಬೆಲ್ ಸಮಿತಿಯ ಅಧ್ಯಕ್ಷರಾಗಿದ್ದರು. ರವೀಂದ್ರನಾಥ ಟ್ಯಾಗೋರ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ಪ್ರದಾನ ಮಾಡುವಾಗ 1913 ರ ಡಿಸೆಂಬರ್ 10 ರಂದು ಹರಾಲ್ಡ್ ಜಾರ್ನೆ ಮಾಡಿದ ಪ್ರಶಸ್ತಿ ಪ್ರದಾನ ಸಮಾರಂಭದ ಭಾಷಣವನ್ನು ಇಲ್ಲಿ ಕಾಣಬಹುದು. 1913 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಿದಾಗ  ಐದನೇ ಕಿಂಗ್ ಜಾರ್ಜ್ ಸ್ವೀಡಿಷ್ ಅಕಾಡೆಮಿಯ ನೊಬೆಲ್ ಸಮಿತಿಯ ಅಧ್ಯಕ್ಷರಾಗಿರಲಿಲ್ಲ. ಹಾಗಾಗಿ ರಾಜೀವ್ ದೀಕ್ಷಿತ್ ಅವರ ಪ್ರತಿಪಾದನೆ ಸುಳ್ಳು.


ಇದನ್ನು ಓದಿ: Fact Check | ಒಣ ಶುಂಠಿ ಸೇವನೆಯಿಂದ ಗೊರಕೆ ಸಮಸ್ಯೆ ಮತ್ತು ಕೋವಿಡ್ 19 ಕಾಯಿಲೆ ಗುಣವಾಗುವುದಿಲ್ಲ


ವಿಡಿಯೋ ನೋಡಿ: 2014ರ ಫೋಟೋ ಬಳಸಿ ರಾಹುಲ್‌ ಗಾಂಧಿ ಕುರಿತು ಸುಳ್ಳು ಸುದ್ದಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *