
Fact Check : ಮೆಕ್ಕಾದ ಮಸೀದಿ ಅಲ್-ಹರಾಮ್‌ನಲ್ಲಿ ಮುಸಲ್ಮಾನರು ರಾಮ ನಾಮ ಜಪಿಸಿದ್ದಾರೆಂಬುದು ಸುಳ್ಳು
“ಮುಸಲ್ಮಾನರ ಶ್ರದ್ಧಾ ಕೇಂದ್ರ ಮೆಕ್ಕಾದ ಮಸೀದಿ ಅಲ್-ಹರಾಮ್‌ನಲ್ಲಿಯೂ ಕೂಡ ರಾಮಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಕೆಲವರು ಕೇಸರಿ ಬಣ್ಣದ ನಿಲವಂಗಿಯನ್ನು ಧರಿಸಿ, ರಾಮ ನಾಮವನ್ನು ಜಪ ಮಾಡಿದ್ದಾರೆ. ಜೊತೆಗೆ ಹಿನ್ನಲೆ ಸಂಗೀತದಲ್ಲಿ ರಾಮನ ಹಾಡನ್ನು ಕೇಳ ಬಹುದು” ಎಂಬ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಿಗೆ, ವಾಟ್ಸ್‌ಆಪ್‌ಗಳಲ್ಲಿ, ವಿವಿಧ ಅಂತರ್ಜಾಲ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆಯನ್ನ ನಡೆಸಿದಾಗ ಅಸಲಿ ವಿಚಾರ…