“ಮುಂಬೈನ ಮೀರಾ ನಾಯರ್ ಪ್ರದೇಶದಲ್ಲಿ ಜನವರಿ 22ರಂದು ರಾಮ ಯಾತ್ರೆ ಮೇಲೆ ದಾಳಿ ಮಾಡಿದವರನ್ನುಅವರ ಮನೆಯಿಂದ ಎಳೆದೊಯ್ಯಲಾಗಿದೆ. ಇದು ತುಂಬಾ ಹೆಮ್ಮೆಯ ಸಂಗತಿ. ಈಗ ಅವರಿಗೆ ಉತ್ತಮ ಬಹುಮಾನ ಸಿಗಲಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್
Those who attacked Ram Yatra on 22nd in Mira Nair area of Mumbai were picked up from their home today.
Much respect! Now there is a reward for breaking the backyard!
#planecrash #ICCAwards #MiraRoad #TejRan #AusOpen #INDvENG
#Saipallavi #हेमंता_की_ले_ली #MiraRoadRiots pic.twitter.com/PSncOmP9bm— Lokesh Yadav (@Lokeshy49599209) January 24, 2024
ವಿವಿಧ ಬರಹಗಳೊಂದಿಗೆ ಕೂಡ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದ್ದು, ಈ ವಿಡಿಯೋದಲ್ಲಿ ಪೊಲೀಸರು ಕೆಲವರ ಮನೆಗೆ ನಗ್ಗಿ ಯುವಕರನ್ನು ತಪ್ಪಿತಸ್ಥರೆ, ಅಲ್ಲವೇ ಎಂಬುದನ್ನೂ ಪರಿಶೀಲಿಸದೆ, ಹಲ್ಲೆ ನಡೆಸಿ ಮನೆಯಿಂದ ಎಳೆದೊಯ್ಯುತ್ತಿರುವುದನ್ನು ಕಾಣಬಹದಾಗಿದೆ.
Those who attacked Ram Yatra on 22nd in Mira Nair area of Mumbai were picked up from their home today.
Much respect! Now there is a reward for breaking the backyard!
#planecrash #ICCAwards #MiraRoad #TejRan #AusOpen #INDvENG
#Saipallavi #हेमंता_की_ले_ली #MiraRoad pic.twitter.com/aEFaLKhywr— Nirdosh Shirvastva (@NirdoshSrivast4) January 25, 2024
ಫ್ಯಾಕ್ಟ್‌ಚೆಕ್
ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವನ್ನು ಪರಿಶೀಲನೆ ನಡೆಸಲು ವಿಡಿಯೋವನ್ನು ಕೆಲ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಲಾಯಿತು, ಈ ವೇಳೆ ಹಲವಾರು ವಿಡಿಯೋಗಳು ಕೂಡ ಕಂಡು ಬಂದಿವೆ. ಅದರಲ್ಲಿ ಒಂದು ವಿಡಿಯೋ 2022 ರದ್ದಾಗಿದ್ದು. ಆ ಕುರಿತು ಪರಿಶೀಲನೆ ನಡೆಸಿದಾಗ ಈ ಕುರಿತು ಎನ್‌ಡಿಟಿವಿ ವರದಿಯನ್ನ ಮಾಡಿದ್ದು ಕಂಡು ಬಂದಿದೆ.
Telangana | Protestors gathered at Shalibanda in Hyderabad last night over alleged remarks of suspended BJP leader T Raja Singh on #ProphetMuhammad; police used force to restrain them pic.twitter.com/Wjs1Epvvwb
— NDTV (@ndtv) August 25, 2022
25 ಆಗಸ್ಟ್ 2022 ರಂದು “ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಪ್ರವಾದಿ ಮುಹಮ್ಮದರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವುದನ್ನು ಖಂಡಿಸಿ ಹೈದರಾಬಾದ್‌ನ ಶಾಲಿಬಂದಾದಲ್ಲಿ ಜನರು ಜಮಾಯಿಸಿದ್ದರು. ಅವರನ್ನು ಪೊಲೀಸರು ಚದುರಿಸಿದ್ದಾರೆ” ಎಂದು ತನ್ನ ವರದಿಯಲ್ಲಿ ತಿಳಿಸಿತ್ತು ಹಲವು ಮಾಧ್ಯಮಗಳು ಕೂಡ ಇದನ್ನೇ ಉಲ್ಲೇಖಿಸಿವೆ.
ಇನ್ನು ವೈರಲ್ ವಿಡಿಯೋವನ್ನು ಗಮನಿಸಿದಾಗ ಅದರಲ್ಲಿನ ಪೊಲೀಸ್ ವಾಹನ ನಂಬರ್ ಪ್ಲೇಟ್‌ಗಳಲ್ಲಿ, TS ಎಂದು ರಿಜಿಸ್ಟರ್ ಆಗಿರುವುದು ಕಂಡು ಬಂದಿದೆ. ಇದರಿಂದ ಈ ಘಟನೆ ಹೈದರಾಬಾದ್‌ನಲ್ಲಿ ನಡೆದಿರುವುದು ಖಚಿತವಾಗಿದೆ. ಹಾಗಾಗಿ ವೈರಲ್ ವಿಡಿಯೋದೊಂದಿಗಿನ ಪ್ರತಿಪಾದನೆ ಸುಳ್ಳಾಗಿದೆ.
ಇದನ್ನೂ ಓದಿ : Fact Check | ಫೋಟೋಗ್ರಾಫರ್ ಅಳುತ್ತಿರುವ ವಿಡಿಯೋ ಬಾಲರಾಮ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಅಲ್ಲ
ವಿಡಿಯೋ ನೋಡಿ : Fact Check | ಫೋಟೋಗ್ರಾಫರ್ ಅಳುತ್ತಿರುವ ವಿಡಿಯೋ ಬಾಲರಾಮ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಅಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.