Fact Check : ಮೆಕ್ಕಾದ ಮಸೀದಿ ಅಲ್-ಹರಾಮ್‌ನಲ್ಲಿ ಮುಸಲ್ಮಾನರು ರಾಮ ನಾಮ ಜಪಿಸಿದ್ದಾರೆಂಬುದು ಸುಳ್ಳು

“ಮುಸಲ್ಮಾನರ ಶ್ರದ್ಧಾ ಕೇಂದ್ರ ಮೆಕ್ಕಾದ ಮಸೀದಿ ಅಲ್-ಹರಾಮ್‌ನಲ್ಲಿಯೂ ಕೂಡ ರಾಮಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಕೆಲವರು ಕೇಸರಿ ಬಣ್ಣದ ನಿಲವಂಗಿಯನ್ನು ಧರಿಸಿ, ರಾಮ ನಾಮವನ್ನು ಜಪ ಮಾಡಿದ್ದಾರೆ. ಜೊತೆಗೆ ಹಿನ್ನಲೆ ಸಂಗೀತದಲ್ಲಿ ರಾಮನ ಹಾಡನ್ನು ಕೇಳ ಬಹುದು” ಎಂಬ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಿಗೆ, ವಾಟ್ಸ್‌ಆಪ್‌ಗಳಲ್ಲಿ, ವಿವಿಧ ಅಂತರ್ಜಾಲ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆಯನ್ನ ನಡೆಸಿದಾಗ ಅಸಲಿ ವಿಚಾರ…

Read More

Fact Check | ರಾಮ ಭಕ್ತರ ಮೇಲೆ ದಾಳಿ ಮಾಡಿದವರನ್ನು ಪೊಲೀಸರು ಮನೆಗೆ ನುಗ್ಗಿ ಎಳೆದೊಯ್ದಿದ್ದಾರೆ ಎಂಬುದು ಸುಳ್ಳು

“ಮುಂಬೈನ ಮೀರಾ ನಾಯರ್ ಪ್ರದೇಶದಲ್ಲಿ ಜನವರಿ 22ರಂದು ರಾಮ ಯಾತ್ರೆ ಮೇಲೆ ದಾಳಿ ಮಾಡಿದವರನ್ನುಅವರ ಮನೆಯಿಂದ ಎಳೆದೊಯ್ಯಲಾಗಿದೆ. ಇದು ತುಂಬಾ ಹೆಮ್ಮೆಯ ಸಂಗತಿ. ಈಗ ಅವರಿಗೆ ಉತ್ತಮ ಬಹುಮಾನ ಸಿಗಲಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ Those who attacked Ram Yatra on 22nd in Mira Nair area of Mumbai were picked up from their home today.Much respect! Now there…

Read More

Fact Check | ಫೋಟೋಗ್ರಾಫರ್‌ ಅಳುತ್ತಿರುವ ವಿಡಿಯೋ ಬಾಲರಾಮ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಅಲ್ಲ

“ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಬಾಲರಾಮ ಪ್ರಾಣ ಪ್ರತಿಷ್ಠೆಯ ವೇಳೆ ಬಾಲರಾಮನ ವಿಗ್ರಹವನ್ನು ನೋಡಿ ಭಾವುಕರಾಗಿ ಫೋಟೋಗ್ರಾಫರ್ ಒಬ್ಬರು ಅಳುತ್ತಿರುವ ಫೋಟೋ ಇದು.” ಎಂಬ ಫೋಟೋವೊಂದನ್ನು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಫೋಟೋಗ್ರಾಫರ್‌ವೊಬ್ಬ ಏನನ್ನೋ ನೋಡಿ ಫೋಟೋ ಕ್ಲಿಕ್ಕಿಸುತ್ತಾ ಅಳುತ್ತಿರುವುದನ್ನು ಕಾಣ ಬಹುದಾಗಿದೆ. ಇದೇ ಫೋಟೋವನ್ನು ಬಳಸಿಕೊಂಡು ಬಾಲರಾಮನ ವಿಗ್ರಹದ ಪೋಟೋದೊಂದಿಗೆ ಸೇರಿಸಿ ಬಾಲರಾಮನ ವಿಗ್ರಹವನ್ನೇ ನೋಡಿ ಫೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಈ ಛಾಯಾಗ್ರಾಹಕ ಅಳುತ್ತಿದ್ದ ಎಂದು ಸಾಕಷ್ಟು ಮಂದಿ ಹಲವು ಬರಹಗಳನ್ನು ಬರೆದುಕೊಂಡು ಹಂಚಿಕೊಳ್ಳುತ್ತಿದ್ದಾರೆ….

Read More

Fact Check | ರಾಮಮಂದಿರದಲ್ಲಿ ದೇಣಿಗೆಯ ಮಹಾಪೂರ ಎಂದು ರಾಜಸ್ತಾನದ ವಿಡಿಯೋ ಹಂಚಿಕೆ!

“ಈ ವಿಡಿಯೋ ನೋಡಿ ಇದು ಅಯೋಧ್ಯೆಯಲ್ಲಿ ಮೊದಲ ದಿನ ಹರಿದು ಬಂದ ದೇಣಿಗೆ. ದೇವಾಲಯದ ಹುಂಡಿಗಳಲ್ಲಿ ಕಂತೆ ಕಂತೆ ನೋಟುಗಳನ್ನು ಭಕ್ತರು ನೀಡಿದ್ದಾರೆ. ಈ ವಿಡಿಯೋ ಅದಕ್ಕೆ ಸಾಕ್ಷಿ..” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಹಲವು ಸುಳ್ಳು ಸುದ್ದಿಗಳು ರಾಮ ಮಂದಿರ ಉದ್ಘಾಟನೆಯ ನಂತರ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಹಲವು ಮಂದಿ ಅಯೋಧ್ಯೆಗೆ ಸಂಬಂಧ ಪಡದ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಕೂಡ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ನಿಜವೆಂದು ನಂಬಿದ ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು…

Read More

Fact Check | ಸಿಖ್ಖರು ರಾಮನ ಸ್ಮರಣೆ ಮಾಡಿದ್ದಾರೆ ಎಂಬುದು ಸುಳ್ಳು ಪ್ರತಿಪಾದನೆಯಾಗಿದೆ

“ಈ ವಿಡಿಯೋ ನೋಡಿ ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಸಿಖ್ಖರು ಮತ್ತು ಹಿಂದೂಗಳು ಒಟ್ಟಾಗಿ ಪ್ರಭು ರಾಮ್ ಮತ್ತು ಗುರುನಾನಕ್ ದೇವ್ ಜಿ ಅವರನ್ನು ರಾಮ್ ಕಿ ಪೇಧಿಯಲ್ಲಿ ನೆನಪಿಸಿಕೊಂಡು ಹಾಡಿದ್ದಾರೆ, ಗುರು ಗೋವಿಂದ್ ಸಿಂಗ್ ಜಿ ಅವರಿಗೆ ಗೌರವ ಸಲ್ಲಿಸಿದರು” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಈ ಕುರಿತು ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಹೀಗೆ ಶೇರ್‌ ಮಾಡಲಾಗುತ್ತಿರುವ  ವಿಡಿಯೋಗಳಿಗೆ ಸಾಕಷ್ಟು ಮಂದಿ ನಕಾರಾತ್ಮಕ ಕಮೆಂಟ್‌ಗಳನ್ನು ಕೂಡ ಮಾಡುತ್ತಿದ್ದಾರೆ….

Read More

Fact Check | ಬುರ್ಜ್‌ ಖಲೀಫಾ ಮೇಲೆ ಶ್ರೀ ರಾಮನ ಫೋಟೋ ಪ್ರದರ್ಶಿಸಲಾಗಿದೆ ಎಂದು ಸುಳ್ಳು ಸುದ್ದಿ ಪ್ರಕಟಿಸಿದ ಉದಯವಾಣಿ

ಸಾಮಾಜಿಕ ಜಾಲತಾಣದಲ್ಲಿ “ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಯ ಬೆಳಕಿನಲ್ಲಿ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಭಗವಾನ್ ರಾಮನ ಚಿತ್ರ ಮೂಡಿ ಬಂದಿದೆ.” ಎಂದು ಸಾಕಷ್ಟು ಮಂದಿ ಪೋಟೋವೊಂದನ್ನು ಶೇರ್‌ ಮಾಡುತ್ತಿದ್ದಾರೆ. ಅದರಲ್ಲೂ  “22 ಜನವರಿ 2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಗೆ” ಮುಸ್ಲಿಂ ರಾಷ್ಟ್ರವೂ ಸಂತಸವನ್ನು ವ್ಯಕ್ತ ಪಡಿಸಿದೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಸುಳ್ಳು ಸುದ್ದಿ ಹಬ್ಬುತ್ತಿದ್ದರೆ ಕನ್ನಡದ ಖ್ಯಾತ ದಿನ ಪತ್ರಿಕೆಯಾದ ಉದಯವಾಣಿ ಕೂಡ ತನ್ನ ಪತ್ರಿಕೆಯ 5ನೇ ಪುಟದಲ್ಲಿ…

Read More

Fact Check | ನಟ ಪ್ರಭಾಸ್ ರಾಮ ಮಂದಿರಕ್ಕೆ 50 ಕೋಟಿ ರೂ ದೇಣಿಗೆ ನೀಡಿಲ್ಲ

“ರಾಮ ಮಂದಿರ ಉದ್ಘಾಟನಾ ದಿನವಾದ ಜನವರಿ 22 ರಂದು ಬರುವ ಭಕ್ತರಿಗೆ ಊಟದ ವ್ಯವಸ್ಥೆಗೆಂದು ತೆಲುಗು ನಟ ಪ್ರಭಾಸ್ 50 ಕೋಟಿ ರೂ ದೇಣಿಗೆ ನೀಡುತ್ತಿದ್ದಾರೆ” ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸಾಕಷ್ಟು ಮಂದಿ ನಿಜವೆಂದು ನಂಬಿ ತಮ್ಮ ವೈಯಕ್ತಿಕ ಖಾತೆಗಳಲ್ಲೂ ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ. ಇನ್ನು, ಇದೇ ವೈರಲ್‌ ಪೋಸ್ಟ್‌ ಅನ್ನು ಆಧಾರವಾಗಿಟ್ಟುಕೊಂಡು ಕನ್ನಡದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕೂಡ  “ಅಯೋಧ್ಯೆ ರಾಮಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ರೂ….

Read More

Fact Check | ಜಪಾನ್‌ನಲ್ಲಿ ರಾಮನ ಶ್ಲೋಕ ಪಠಿಸಲಾಗುತ್ತಿದೆ ಎಂಬುದು ಸುಳ್ಳು

“ರಾಮ ಮಂದಿರದ ಉದ್ಘಾಟನೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಜಗತ್ತಿನಾದ್ಯಂತ ರಾಮನ ಜಪ ಆರಂಭವಾಗಿದೆ.. ಈಗ ಜಪಾನ್‌ನಲ್ಲಿ ಅಲ್ಲಿನ ನಾಗರೀಕರು ರಾಮಾಯಣದ ವಾಚನವನ್ನು ಮಾಡಲು ಆರಂಭಿಸಿದ್ದಾರೆ. ಈ ವಿಡಿಯೋವನ್ನು ನೋಡಿ ಮತ್ತು ಎಲ್ಲರಿಗೂ ಶೇರ್‌ ಮಾಡಿ” ಎಂಬ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ತಾಯಿ ಮತ್ತು ಮಗ ಇಬ್ಬರೂ ರಾಮನ ಶ್ಲೋಕವನ್ನು ಕಂಠಪಾಠ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಮತ್ತು ಇವರ ಜೊತೆ ಇನ್ನಷ್ಟು ಮಂದಿ ಈ ಶ್ಲೋಕವನ್ನು ಹೇಳುತ್ತಿರುವುದು ಕೂಡ ಕಂಡು ಬಂದಿದೆ. ಫ್ಯಾಕ್ಟ್‌ಚೆಕ್‌ ಈ ವಿಡಿಯೋ…

Read More

Fact Check | ಒನ್‌ ಅನ್ನಾ ನಾಣ್ಯದಲ್ಲಿ ಎಲ್ಲಿಯೂ ಹಿಂದೂ ದೇವರುಗಳ ಚಿತ್ರವನ್ನು ಮುದ್ರಣ ಮಾಡಿಲ್ಲ

“ಕಿಡಿಗೇಡಿಗಳು ರಾಮನ ಅಸ್ತಿತ್ವದ ಬಗ್ಗೆ ಮಾತಾಡ್ತವೆ.. 1839ರಲ್ಲಿದ್ದ ನಾಣ್ಯದಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮನ ಭಾವಚಿತ್ರವಿರುವ ಸುಂದರ ನಾಣ್ಯಗಳು ಶೇರ್‌ ಮಾಡಿ.” ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವಿರಬಹುದು ಎಂದು ಸಾಕಷ್ಟು ಜನ ಊಹಿಸಿಕೊಂಡು ಈ ಹಿಂದಿನ ಸರ್ಕಾರಗಳನ್ನು ಟೀಕಿಸುತ್ತಿದ್ದಾರೆ. ಆದರೆ ಈ ಆರೋಪಗಳು ಕೇವಲ ಇಂದು ನಿನ್ನೆಯಿಂದ ನಡೆದಿಲ್ಲ. ಬದಲಾಗಿ ಕಳೆದ ಹಲವು ವರ್ಷಗಳಿಂದಲೂ ಇದೇ ರೀತಿಯಾದ ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈಗ ರಾಮಮಂದಿರದ ಉದ್ಘಾಟನೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಈ…

Read More

Fact Check | ಅಯೋಧ್ಯೆಯ ರಾಮಮಂದಿರಕ್ಕಾಗಿ BHEL ಸಂಸ್ಥೆ ಗಂಟೆಗಳನ್ನು ನಿರ್ಮಿಸಿಲ್ಲ

“ಈ ವಿಡಿಯೋ ನೋಡಿ ಇದು ಅಯೋಧ್ಯೆಯ ರಾಮ ಮಂದಿರಕ್ಕಾಗಿ ಭಾರತ್‌ ಹೇವಿ ಎಲೆಕ್ಟ್ರಿಕಲ್‌ ಲಿಮಿಟೆಡ್‌ ( BHEL ) ಸಂಸ್ಥೆ ನಿರ್ಮಿಸಿರುವ ಗಂಟೆಗಳು. ಈ 42 ಗಂಟೆಗಳನ್ನು ದೊಡ್ಡ ದೊಡ್ಡ ಟ್ರಕ್‌ಗಳಲ್ಲಿ ಅಯೋಧ್ಯೆಗೆ ಕೊಂಡೊಯ್ಯಲಾಗುತ್ತಿದೆ. ” ಎಂಬ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್‌ ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋದ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಮೋಜೋ ಸುದ್ದಿ…

Read More