Fact Check | ಒನ್‌ ಅನ್ನಾ ನಾಣ್ಯದಲ್ಲಿ ಎಲ್ಲಿಯೂ ಹಿಂದೂ ದೇವರುಗಳ ಚಿತ್ರವನ್ನು ಮುದ್ರಣ ಮಾಡಿಲ್ಲ

“ಕಿಡಿಗೇಡಿಗಳು ರಾಮನ ಅಸ್ತಿತ್ವದ ಬಗ್ಗೆ ಮಾತಾಡ್ತವೆ.. 1839ರಲ್ಲಿದ್ದ ನಾಣ್ಯದಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮನ ಭಾವಚಿತ್ರವಿರುವ ಸುಂದರ ನಾಣ್ಯಗಳು ಶೇರ್‌ ಮಾಡಿ.” ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವಿರಬಹುದು ಎಂದು ಸಾಕಷ್ಟು ಜನ ಊಹಿಸಿಕೊಂಡು ಈ ಹಿಂದಿನ ಸರ್ಕಾರಗಳನ್ನು ಟೀಕಿಸುತ್ತಿದ್ದಾರೆ.

ಆದರೆ ಈ ಆರೋಪಗಳು ಕೇವಲ ಇಂದು ನಿನ್ನೆಯಿಂದ ನಡೆದಿಲ್ಲ. ಬದಲಾಗಿ ಕಳೆದ ಹಲವು ವರ್ಷಗಳಿಂದಲೂ ಇದೇ ರೀತಿಯಾದ ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈಗ ರಾಮಮಂದಿರದ ಉದ್ಘಾಟನೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಈ ರೀತಿಯಾದ ಹಲವು ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿದ್ದು, ಹಲವು ಮಂದಿ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೇ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಕನ್ನಡ ಫ್ಯಾಕ್ಟ್‌ಚೆಕ್‌ ತಂಡಕ್ಕೆ ಈ ಸುದ್ದಿ  ತಿಳಿದ ಬಳಿಕ ಇದರ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಮುಂದಾಯಿತು. ಅದಕ್ಕಾಗಿ ಮೊದಲು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ವೈರಲ್‌ ಆಗಿರುವ ಈ ಫೋಟೋವನ್ನು ಹುಡುಕಲಾಯಿತು. ಈ ವೇಳೆ ಈಸ್ಟ್ ಇಂಡಿಯಾ ಕಂಪನಿ ಮತ್ತು ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಬಿಡುಗಡೆಯಾದ ನಾಣ್ಯಗಳ ಸಂಪೂರ್ಣ ಸಂಗ್ರಹವು ಭಾರತೀಯ ರಿಸರ್ವ್ ಬ್ಯಾಂಕ್ (RBI) ವೆಬ್‌ಸೈಟ್‌ನಲ್ಲಿ ಕಂಡು ಬಂದಿವೆ.

ವಿಲಿಯಂ IV (1830-37) ಮತ್ತು ರಾಣಿ ವಿಕ್ಟೋರಿಯಾ (1837-1901) ಆಳ್ವಿಕೆಯಲ್ಲಿ ಬಿಡುಗಡೆಯಾದ ನಾಣ್ಯಗಳನ್ನು ಕಂಡು ಬಂದಿದ್ದು, ಅದರಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ರಾಣಿಯಾಗಿ ವಿಕ್ಟೋರಿಯಾ ಆಳ್ವಿಕೆಯಲ್ಲಿ, ಈಸ್ಟ್ ಇಂಡಿಯಾ ಕಂಪನಿಯು ಹನ್ನೆರಡನೇ ಅನ್ನಾ, ಕ್ವಾರ್ಟರ್ ಅನ್ನಾ, ಅರ್ಧ ಅನ್ನಾ ಮತ್ತು ಎರಡು ಅನ್ನಾಗಳ ಮೌಲ್ಯದ ನಾಣ್ಯಗಳನ್ನು ಬಿಡುಗಡೆ ಮಾಡಿತು. ರಾಣಿ ವಿಕ್ಟೋರಿಯಾ ಆಳ್ವಿಕೆಯಲ್ಲಿ ‘ಒಂದು ಅನ್ನ’ ನಾಣ್ಯಗಳು ಬಳಕೆಯಲ್ಲಿಲ್ಲ. ರಾಣಿ ವಿಕ್ಟೋರಿಯಾ ಆಳ್ವಿಕೆಯಲ್ಲಿ ಬಿಡುಗಡೆಯಾದ ಈ ಎಲ್ಲಾ ನಾಣ್ಯಗಳು ರಾಣಿ ವಿಕ್ಟೋರಿಯಾ ಅವರ ಭಾವಚಿತ್ರವನ್ನು ಹೊಂದಿದ್ದವು. 

ಭಾರತದ ಸ್ವಾತಂತ್ರ್ಯದ ಮೊದಲು ಇತರ ಬ್ರಿಟಿಷ್ ರಾಜನ ಆಳ್ವಿಕೆಯಲ್ಲಿ ಬಿಡುಗಡೆಯಾದ ನಾಣ್ಯಗಳ ರಾಜರುಗಳ ಮುದ್ರಣವಿರುವ ನಾಣ್ಯಗಳು ಕಂಡು ಬಂದಿವೆ..

ಆದರೆ ಬ್ರಿಟೀಷರ ಆಳ್ವೀಕೆ ಶುರುವಾಗಿ ಅವರ ಆಳ್ವಿಕೆಯ ಅಂತ್ಯದವರೆಗೆ ಬ್ರಿಟಿಷ್ ಸರ್ಕಾರ ಬಿಡುಗಡೆ ಮಾಡಿದ ಯಾವುದೇ ನಾಣ್ಯಗಳಲ್ಲಿ ಶ್ರೀರಾಮನ ಭಾವಚಿತ್ರ ಇರಲಿಲ್ಲ. ಮತ್ತು ರಾಮ, ಸೀತೆ, ಲಕ್ಷ್ಮಣ, ಅಂಜನೇಯನ ಚಿತ್ರಗಳ ಮುದ್ರಣವೂ ಕಂಡು ಬಂದಿಲ್ಲ.. 

ಇನ್ನು ಖಾಸಗಿ ಕಂಪನಿಗಳು ಹಿಂದೂ ದೇವರ ಭಾವಚಿತ್ರಗಳನ್ನು ಚಿತ್ರಿಸುವ ಇದೇ ರೀತಿಯ ನಾಣ್ಯಗಳನ್ನು ವಿನ್ಯಾಸಗೊಳಿಸುತ್ತಿವೆ ಮತ್ತು ಅವುಗಳನ್ನು ವಿವಿಧ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡುತ್ತಿವೆ. ಎಂಬ  ಮಾಹಿತಿಯೊಂದು ಲಭ್ಯವಾಗಿದೆ. ‘ಕಾಯಿನ್‌ಕ್ವೆಸ್ಟ್’ ವೆಬ್‌ಸೈಟ್ ಪ್ರಕಟಿಸಿದ ಲೇಖನದ ಪ್ರಕಾರ, ಈಸ್ಟ್ ಇಂಡಿಯಾ ಕಂಪನಿಯ ಶಾಸನವನ್ನು ಹೊಂದಿರುವ ತಾಮ್ರದ ನಾಣ್ಯಗಳು ಮತ್ತು ಸಾಮಾನ್ಯವಾಗಿ 1839 ಅಥವಾ ಅದಕ್ಕಿಂತ ಹಿಂದಿನ ದಿನಾಂಕದಂದು ಹೆಚ್ಚಾಗಿ ‘ಆಧ್ಯಾತ್ಮಿಕವಾಗಿ ಆಧಾರಿತ ಟೋಕನ್ ಇತ್ತೀಚೆಗೆ ತಯಾರಿಸಲಾಗಿದೆ ಮತ್ತು ಪ್ರವಾಸಿಗರಿಗೆ ಮಾರಾಟವಾಗಿದೆ.’ ಎಂಬ ಮಾಹಿತಿ ಲಭ್ಯವಾಗಿದೆ.

 


ಇದನ್ನೂ ಓದಿ :Fact check | ತೆಲಂಗಾಣದಲ್ಲಿ ಕಾಂಗ್ರೆಸ್‌ ಸರ್ಕಾರ 90,040 ರೇಷನ್‌ ಕಾರ್ಡ್‌ ರದ್ದುಗೊಳಿಸಲಾಗಿಲ್ಲ


ವಿಡಿಯೋ ನೋಡಿ :Fact check | ತೆಲಂಗಾಣದಲ್ಲಿ ಕಾಂಗ್ರೆಸ್‌ ಸರ್ಕಾರ 90,040 ರೇಷನ್‌ ಕಾರ್ಡ್‌ ರದ್ದುಗೊಳಿಸಲಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *