ಉತ್ತರಾಖಂಡದ ಕೇದಾರನಾಥ ದೇವಾಲಯದ ಹೊರ ಆವರಣದ ಸುತ್ತಲೂ ವ್ಯಕ್ತಿಯೊಬ್ಬ ಕೈಗಳ ಮೇಲೆ ನಡೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, 26 ವರ್ಷದವರಾಗಿದ್ದಾಗ ನರೇಂದ್ರ ಮೋದಿಯವರು ಯೋಗ ಮಾಡಿದ್ದ ದೃಶ್ಯ ಇದು ಎಂಬ ಪ್ರತಿಪಾದನೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ.ಸಿ ಪಾಟೀಲ್ ಅವರು ಸಹ “ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರು 26 ವರ್ಷ ವಯಸ್ಸಿನವರಾಗಿದ್ದಾಗ ಕೇದಾರನಾಥವನ್ನು ಹೇಗೆ ಪ್ರದಕ್ಷಿಣೆ ಮಾಡಿದ್ದರು, ನೀವೆಲ್ಲರೂ ಒಮ್ಮೆ ನೋಡಿ” ಎಂಬ ಬರಹದೊಂದಿಗೆ ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್: ಇದು ಉತ್ತರಖಾಂಡದ ಕೇದಾರನಾಥ ದೇವಾಲಯದಲ್ಲಿ ಸಂತೋಷ್ ತ್ರಿವೇದಿ ಎಂಬ ಅರ್ಚಕರೊಬ್ಬರು 21 ಜೂನ್ 2021ರ ವಿಶ್ವ ಯೋಗ ದಿನದ ಅಂಗವಾಗಿ ಮಾಡಿದ ಪ್ರದಕ್ಷಿಣೆಯ ವಿಡಿಯೋ ಇದಾಗಿದೆ. ಇದನ್ನು ಈಟಿವಿ ಭಾರತ್ ಅವರು 2021ರಂದೇ ವರದಿ ಮಾಡಿದ್ದರು. ಈ ವರದಿಯಲ್ಲಿ “ಕೈಗಳ ಮೇಲೆ ನಡೆದು ಕೇದಾರನಾಥ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿದ ಅರ್ಚಕ.”
“ಕೇದಾರನಾಥ ದೇವಾಲಯದ ಅರ್ಚಕರೊಬ್ಬರು ತಮ್ಮ ಕೈಗಳ ಮೇಲೆ ಕೇದಾರನಾಥ ದೇವಾಲಯವನ್ನು ಪ್ರದಕ್ಷಿಣೆ ಹಾಕಿದ್ದಾರೆ. ಕಳೆದ ಏಳು ದಿನಗಳಿಂದ ಹ್ಯಾಂಡ್ ಸ್ಟಾಂಟ್ ಚಳವಳಿ ನಡೆಸುತ್ತಿರುವ ಅರ್ಚಕ ಸಂತೋಷ್ ತ್ರಿವೇದಿ, ದೇವಸ್ತಾನಂ ನಿರ್ವಹಣಾ ಮಂಡಳಿ ಕಾಯ್ದೆಯನ್ನು ಜಾರಿಗೆ ತರುವ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.” ಎಂದು ತನ್ನ ವರದಿಯಲ್ಲಿ ತಿಳಿಸಿದ್ದಾರೆ.
ಬೂಮ್ ಲೈವ್ ಸುದ್ದಿ ಮಾಧ್ಯಮದವರು ಸಂತೋಷ್ ತ್ರಿವೇದಿಯವರನ್ನು ಸಂಪರ್ಕಿಸಿದಾಗ ವಿಡಿಯೋದಲ್ಲಿರುವ ವ್ಯಕ್ತಿ ತಾನೆ ಎಂದು ಒಪ್ಪಿಕೊಂಡಿದ್ದಾರೆ ಮತ್ತು ಮೂಲ ವಿಡಿಯೋವನ್ನು ಕಳಿಸಿಕೊಟ್ಟಿದ್ದಾರೆ.
ಈ ಹಿಂದೆ 2020 ರ ನವೆಂಬರ್‌ನಲ್ಲಿ ಬಿಕೆಎಸ್ ಅಯ್ಯಂಗಾರ್ ಅವರು ಯೋಗ ಮಾಡುತ್ತಿರುವ ಕಪ್ಪು ಮತ್ತು ಬಿಳುಪು ವೀಡಿಯೊ ಪ್ರಧಾನಿ ನರೇಂದ್ರ ಮೋದಿ ಯೋಗ ಮಾಡುತ್ತಿರುವ ವಿಡಿಯೋ ಎಂದು ವೈರಲ್ ಆಗಿತ್ತು. ಆದ್ದರಿಂದ ಸಧ್ಯ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ.ಸಿ ಪಾಟೀಲ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿರುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರಲ್ಲ.
ಇದನ್ನು ಓದಿ: Fact Check: ಗಾಂಧಿ ಮತ್ತು ನೆಹರು ತೋರಿದ ನಿಷ್ಕ್ರೀಯತೆಯು ಭಗತ್ ಸಿಂಗ್ ಅವರ ಸಾವಿಗೆ ಕಾರಣವಾಯಿತು ಎಂಬುದು ಸುಳ್ಳು
ವಿಡಿಯೋ ನೋಡಿ: Fact Check | ಒನ್ ಅನ್ನಾ ನಾಣ್ಯದಲ್ಲಿ ಎಲ್ಲಿಯೂ ಹಿಂದೂ ದೇವರುಗಳ ಚಿತ್ರವನ್ನು ಮುದ್ರಣ ಮಾಡಿಲ್ಲ | Video
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ