ಜನವರಿ 7, 2024 ರಂದು, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮೂವರು ಸಚಿವರನ್ನು ಅಮಾನತುಗೊಳಿಸಿತು. ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಗ್ಗೆ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪ್ರಧಾನಿ ಮೋದಿ ಅವರ ಪೋಸ್ಟ್ ಅನ್ನು ಮೂವರು ಸಚಿವರು ಟೀಕಿಸಿದ್ದರು, ಪ್ರಧಾನಿ ಮೋದಿ ಮಾಲ್ಡೀವ್ಸ್‌ಗೆ ಹೋಗುವ ಬದಲು ಭಾರತೀಯರಿಗೆ ಪರ್ಯಾಯ ಪ್ರವಾಸಿ ತಾಣವಾಗಿ ಲಕ್ಷದ್ವೀಪವನ್ನು ಬಿಂಬಿಸಲು ಪ್ರಯತ್ನಿಸಿದ್ದರು.
ಈ ಪ್ರಕರಣ ವಿವಾದಕ್ಕೆ ತಿರುಗುತ್ತಿದ್ದಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಸೆಹ್ವಾಗ್ ಸೇರಿದಂತೆ ಹಲವಾರು ಭಾರತೀಯ ಸೆಲೆಬ್ರಿಟಿಗಳು ಭಾರತೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವಂತೆ ಜನರನ್ನು ಪ್ರೋತ್ಸಾಹಿಸುವ ಪೋಸ್ಟ್ ಮಾಡಿದ್ದಾರೆ.
ನಟ ರಣವೀರ್ ಸಿಂಗ್ ಕೂಡ “ಈ ವರ್ಷ 2024 ಅನ್ನು ಭಾರತವನ್ನು ಅನ್ವೇಷಿಸುವ ಮತ್ತು ನಮ್ಮ ಸಂಸ್ಕೃತಿಯನ್ನು ಅನುಭವಿಸೋಣ. ನಮ್ಮ ದೇಶದ ಕಡಲತೀರಗಳು ಮತ್ತು ಸೌಂದರ್ಯ ನೋಡಲು ಮತ್ತು ಅನ್ವೇಷಿಸಲು ತುಂಬಾ ಇದೆ. ನೋಡಿ ಇದು ನಮ್ಮ ಭಾರತದ ಕಡಲತೀರಗಳು. ಚಲೋ ಭಾರತ್ ದೇಖೇ.” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೂ ಬಿಜೆಪಿ ನಾಯಕ ಮತ್ತು ಭೂ ವಿಜ್ಞಾನ ಕ್ಯಾಬಿನೆಟ್ ಸಚಿವ ಕಿರಣ್ ರಿಜಿಜು ಸಹ “#ExploreIndianIslands #Lakshdweep #DekhoApnaDesh #IncredibleIndia” ಎಂಬ ಶೀರ್ಷಿಕೆಯೊಂದಿಗೆ ದ್ವೀಪದ ಬಳಿ ಕಿತ್ತಳೆ ಬಣ್ಣದ ಕಯಾಕ್ಗಳ ಒಳಗೆ ಕುಳಿತಿರುವ ಪ್ರವಾಸಿಗರ ಮತ್ತು ದ್ವೀಪದ ಬಳಿ ಆಳವಿಲ್ಲದ ನೀರಿನಲ್ಲಿ ಸ್ನೋರ್ಕೆಲಿಂಗ್ ಮಾಡುತ್ತಿರುವ ಪ್ರವಾಸಿಗರ ಎರಡು ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.
ಫ್ಯಾಕ್ಟ್‌ಚೆಕ್: ಆದರೆ ಇವು ನಿಜವಾಗಿಯೂ ಭಾರತೀಯ ಅಥವಾ ಲಕ್ಷದ್ವೀಪದ ಚಿತ್ರಗಳೇ ಎಂದು ಪರಿಶೀಲನೆ ನಡೆಸಿದಾಗ, ನಟ ರಣವೀರ್ ಸಿಂಗ್ ಹಂಚಿಕೊಂಡಿರುವ ಮೂರು ದ್ವೀಪಸಮೂಹದ ಫೋಟೋಗಳನ್ನು ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ಇವು ಮಾಲ್ಡಿವ್ಸ್‌ನ ಪೋಟೋಗಳು ಎಂದು ತಿಳಿದುಬಂದಿದೆ. ಛಾಯಾಗ್ರಾಹಕ ‘ಅಸಾದ್.ಫೋಟೋ’ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಫೋಟೋವನ್ನು ಏಪ್ರಿಲ್ 2016 ರಲ್ಲಿ ಪೋಸ್ಟ್ ಮಾಡಿದ್ದರು. ಅದನ್ನೇ ಈಗ ಬಳಸಿಕೊಳ್ಳಲಾಗಿದೆ.
ಇನ್ನೂ ಭೂ ವಿಜ್ಞಾನ ಕ್ಯಾಬಿನೆಟ್ ಸಚಿವ ಕಿರಣ್ ರಿಜಿಜು ಹಂಚಿಕೊಂಡಿವ ಪೋಟೋಗಳು ಸಹ ಮಾಲ್ಡಿವ್ಸ್ ಮತ್ತು ಫ್ರೆಂಚ್ ಪಾಲಿನೇಷ್ಯಾದ ಬೋರ ಬೋರ ದ್ವೀಪದ್ದಾಗಿದೆ. ಮಾಲ್ಡೀವ್ಸ್ ರೆಸಾರ್ಟ್ 2015ರ ಮೇ ತಿಂಗಳಲ್ಲಿ ಪೋಸ್ಟ್ ಮಾಡಿದ ಫೇಸ್ಬುಕ್ ಪೋಸ್ಟ್ ಕೂಡ ನಮಗೆ ಸಿಕ್ಕಿದ್ದು, ಈ ಪೋಟೋ 2013ರಕ್ಕಿಂತ ಹಳೆಯ ಪೋಟೋ ಆಗಿದೆ ಎಂದು ತಿಳಿದುಬಂದಿದೆ.
ಇನ್ನೂ ಮೂರನೇ ಫೋಟೋ ಫ್ರೆಂಚ್ ಪಾಲಿನೇಷ್ಯಾದ ಬೋರ ಬೋರ ದ್ವೀಪದ್ದಾಗಿದೆ. ಈ ಫೋಟೋಗಳು ಭಾರತದ್ದಲ್ಲ ಎಂದು ಹಲವಾರು ಟೀಕಿಸಿದ ನಂತರ ಅವರಿಬ್ಬರು ತಮ್ಮ ಪೋಸ್ಟ್ ಅನ್ನು ಅಳಿಸಿದ್ದಾರೆ.
ಇದನ್ನು ಓದಿ: ನರೇಂದ್ರ ಮೋದಿಯವರ 26 ವಯಸ್ಸಿನ ವಿಡಿಯೋ ಎಂದು ಉತ್ತರಖಂಡದ ಅರ್ಚಕರೊಬ್ಬರ ವಿಡಿಯೋ ಹಂಚಿಕೊಂಡ ಬಿ.ಸಿ ಪಾಟೀಲ್
ವಿಡಿಯೋ ನೋಡಿ: ಬ್ರಿಟೀಷರು 1839ರಲ್ಲಿ ಒಂದಾಣೆ ನಾಣ್ಯದ ಮೇಲೆ ರಾಮ, ಸೀತೆ ಚಿತ್ರ ಬಿಡಿಸಿದ್ದರೆ? ಈ ವಿಡಿಯೋ ನೋಡಿ | ONE ANNA | Rama
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ