Fact Check | ಮಾಲ್ಡೀವ್ಸ್ ಅಧ್ಯಕ್ಷ ಭಾರತೀಯರ ಕ್ಷಮೆಯಾಚಿಸಿದ್ದಾರೆಂಬ ಟ್ವೀಟ್‌ ಎಡಿಟೆಡ್ ಹೊರತು ನಿಜವಲ್ಲ

“ನನ್ನ ಸಚಿವರು, ಪ್ರಧಾನಿ ನರೇಂದ್ರ ಮೋದಿ ಕುರಿತು ನೀಡಿದ ಬೇಜವಾಬ್ದಾರಿ ಹೇಳಿಕೆಯಿಂದಾಗಿ ನನ್ನ ಭಾರತೀಯ ಸ್ನೇಹಿತರಲ್ಲಿ ಕೈಮುಗಿದು ಕ್ಷಮೆಯಾಚಿಸುತ್ತಿದ್ದೇನೆ. ಭಾರತೀಯ ಸ್ನೇಹಿತರನ್ನು ಸ್ವಾಗತಿಸಲು ಎದುರು ನೋಡುತ್ತೇನೆ ಮತ್ತು ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಬಲಗೊಳಿಸಲು ಪ್ರಯತ್ನಿಸುತ್ತೇನೆ” ಎಂದು ಮಾಲ್ಡೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎಂಭ ಸ್ಕ್ರೀನ್‌ಶಾಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇನ್ನು ಇದೇ ಫೋಟೋವನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ಶೇರ್‌ ಕೂಡ ಮಾಡುತ್ತಿದ್ದಾರೆ. ಇನ್ನೂ ಕೆಲವರು ಜನವರಿ 7ರಂದು 10.09 ಗಂಟೆ ಸಮಯದಲ್ಲಿ ಈ ಟ್ವೀಟ್‌ ಮಾಡಲಾಗಿದೆ. ಈಗ ಟ್ವೀಟ್‌ ಡಿಲೀಟ್‌ ಮಾಡಲಾಗಿದೆ ಎಂದು ಸ್ಕ್ರೀನ್‌ ಶಾಟ್‌ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಬಾರತೀಯರಲ್ಲಿ ಕ್ಷಮೆಯಾಚಿಸಿದ್ದಾರೆಯೇ ಎಂದು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಯಿಝು ಅವರು ಟ್ವೀಟ್ ಮಾಡಿದ್ದಾರೆ ಎನ್ನಲಾದ ಪೋಸ್ಟ್‌ ಅನ್ನು ಹುಡುಕಲು ಆರಂಭಿಸಿತು. ಹೀಗಾಗಿ ಅವರ  ಎಕ್ಸ್‌ ಖಾತೆಯನ್ನು ಪರಿಶೀಲಿಸಿತು, ಅಧ್ಯಕ್ಷ ಮುಯಿಝು ಅವರ ಟೈಮ್‌ನಲ್ಲಿ ಕಡೆಯದಾಗಿ ಟ್ವೀಟ್‌ ಆಗಿರುವುದು ಜ. 5ರಂದು ರಾತ್ರಿ 11.04ಕ್ಕೆ ಎಂಬುದು ತಿಳಿದು ಬಂತು.

ಎಕ್ಸ್‌ನಲ್ಲಿ ಟ್ವೀಟ್‌ ಮಾಡಿ ಡಿಲೀಟ್‌ ಮಾಡಿದರೂ, ಆ ಟ್ವೀಟ್‌ಗೆ ಬಂದ ಪ್ರತಿಕ್ರಿಯೆಗಳು ಹಾಗೇ ಇರುತ್ತವೆ. ಮುಯಿಝು ಅವರ ಟ್ವೀಟ್‌ಗೆ ಅಂತಹ ಯಾವುದೇ ಪ್ರತಿಕ್ರಿಯೆ ಬಂದ ದಾಖಲೆಗಳು ಇಲ್ಲ. ಮೊಹಮ್ಮದ್ ಮುಯಿಝು ಅವರ ಎಕ್ಸ್‌ ಖಾತೆಯಲ್ಲಿ  ಕಳೆದ ಎರಡು ವಾರಗಳ ಮಾಡಲಾಗಿರುವ ಟ್ವೀಟ್‌ಗಳನ್ನು  ಪರಿಶೀಲಿಸಲಾಗಿದ್ದು, ಅದರ ಪ್ರಕಾರ ಜನವರಿ 5ರ ನಂತರ ಯಾವುದೇ ಟ್ವೀಟ್‌ ಪ್ರಕಟವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಂದು ವೇಳೆ ಮಾಲ್ಡೀವ್ಸ್‌ ಅಧ್ಯಕ್ಷರು ಕ್ಷಮೆಯಾಚಿಸಿದ್ದರೆ ಯಾವುದಾದರು ಒಂದು ಮಾಧ್ಯಮವಾದರೂ ಸುದ್ದಿ ಮಾಡಬೇಕಿತ್ತು. ಆದರೆ ಯಾವುದೇ ಸುದ್ದಿ ಮಾಧ್ಯಮಗಳಲ್ಲಿ ಕೂಡ ಈ ಕುರಿತು ವರದಿಯಾಗಿಲ್ಲ. ಇನ್ನು, ಮಾಲ್ಡೀವ್ಸ್‌ ಸರ್ಕಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ” ಮಾಲ್ಡೀವ್ಸ್‌ ಸರ್ಕಾರ ಸೋಷಿಯಲ್ ಮೀಡಿಯಾದಲ್ಲಿ ವಿದೇಶ ನಾಯಕರು ಮತ್ತು ಗಣ್ಯ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಗಮನಿಸಿದೆ.ಇವು ವ್ಯಕ್ತಿಗತ ಅಭಿಪ್ರಾಯಗಳೇ ಹೊರತು ಮಾಲ್ಡೀವ್ಸ್‌ ಸರ್ಕಾರದ ಅಭಿಪ್ರಾಯಗಳಲ್ಲ ಎಂದು ಸ್ಪಷ್ಟಪಡಿಸಿದೆ.


ಇದನ್ನೂ ಓದಿ : Fact Check | ಒನ್‌ ಅನ್ನಾ ನಾಣ್ಯದಲ್ಲಿ ಎಲ್ಲಿಯೂ ಹಿಂದೂ ದೇವರುಗಳ ಚಿತ್ರವನ್ನು ಮುದ್ರಣ ಮಾಡಿಲ್ಲ


ವಿಡಿಯೋ ನೋಡಿ : Fact Check | ಒನ್‌ ಅನ್ನಾ ನಾಣ್ಯದಲ್ಲಿ ಎಲ್ಲಿಯೂ ಹಿಂದೂ ದೇವರುಗಳ ಚಿತ್ರವನ್ನು ಮುದ್ರಣ ಮಾಡಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *