
Fact Check | ಭಾರತೀಯರು ಚೀನಾದಲ್ಲಿ ಹೋಳಿ ಆಚರಿಸಿದ್ದಾರೆ ಎಂದು ಚೀನೀ ಲ್ಯಾಂಟರ್ನ್ ಉತ್ಸವದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಇದರಲ್ಲಿ “ಚೀನಾದಲ್ಲಿ ಭಾರತೀಯರು, ಈ ಬಾರಿಯ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಈ ಮೂಲಕ ಹಿಂದೂಗಳು ತಮ್ಮ ಹಬ್ಬವನ್ನು ಜಗತ್ತಿನ ಯಾವ ದೇಶದಲ್ಲಾದರೂ ಆಚರಿಸಕೊಳ್ಳಬಹುದೆಂಬುದು ಸಾಬೀತಾಗಿದೆ. ಎಲ್ಲಾ ಹಿಂದೂಗಳು ಈ ವಿಡಿಯೋವನ್ನು ಶೇರ್ ಮಾಡಿ” ಎಂದು ಹಲವರು ಪೋಸ್ಟ್ ಮಾಡುತ್ತಿದ್ದಾರೆ ವೈರಲ್ ವಿಡಿಯೋದಲ್ಲಿ ಕೂಡ ಚೀನಿಯರಂತೆ ಕಂಡು ಬರುವ ಜನರು ಇರುವುದು ದೃಶ್ಯದಲ್ಲಿ ಕಾಣಿಸಿದೆ. ಇದರ ಜೊತೆಗೆ ರಸ್ತೆಯ ಮಧ್ಯದಲ್ಲಿ ಪಟಾಕಿಗಳನ್ನು ಸಿಡಿಸುತ್ತಿರುವುದು ಮತ್ತು ಅವುಗಳಿಂದ ಬಣ್ಣದ ಹೊಗೆಗಳು…