Fact Check | ಸಂಜಯ್ ರಾವತ್ ಉದ್ಧವ್ ಠಾಕ್ರೆ ಅವರನ್ನು ‘ಮುಸ್ಲಿಂ ಹೃದಯ ಸಾಮ್ರಾಟ್’ ಎಂದು ಕರೆದಿದ್ದಾರೆ ಎಂಬುದು ಸುಳ್ಳು

ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದಂತೆ, ಅಲ್ಲಿಗೆ ಸಂಬಂಧಿಸಿದಂತೆ ಹಲವು ರೀತಿ ಕೋಮು ಆಯಾಮದ ಸುದ್ದಿಗಳು ಅಂತರ್ಜಾಲದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲಿ ಬಹುತೇಖ ಸುಳ್ಳು ಸುದ್ದಿಗಳೇ ಹೆಚ್ಚಾಗಿದೆ. ಹೀಗಾಗಿ ಹಲವು ಅಲ್ಲಿನ ಹಲವು ಸುದ್ದಿಗಳು ಅನುಮಾನ ಹುಟ್ಟಿಸುತ್ತವೆ. ಇದೀಗ ಅಂತಹದ್ದೆ ಸುದ್ದಿಯೊಂದು ವೈರಲ್‌ ಆಗಿದೆ. ಅದರಲ್ಲಿಯೂ ಪ್ರಮುಖವಾಗಿ ಉದ್ಧವ್‌ ಠಾಕ್ರೆ ಬಣದ ಶಿವಸೇನೆಗೆ ಸಂಬಂಧಿಸಿದ ಸುದ್ದಿಯೊಂದು ಹೆಚ್ಚು ಸದ್ದು ಮಾಡುತ್ತಿದೆ. ಮರಾಠಿಯ ಲೋಕ್‌ಮತ್‌ ಪತ್ರಿಕೆಯಲ್ಲಿ ಉದ್ದವ್‌ ಠಾಕ್ರೆ ಬಣದ ಶಿವಸೇನೆಯ ನಾಯಕ ಸಂಜಯ್‌ ರಾವತ್‌ ಅವರು…

Read More

Fact Check | ಯುವಕನೊಬ್ಬ ಹಸುವನ್ನು ಹಿಂಸಿಸಿದ್ದಕ್ಕೆ ಪೊಲೀಸರು ಆತನಿಗೆ ಥಳಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಅದರಲ್ಲಿ ” ಈ ವಿಡಿಯೋವನ್ನು ಸರಿಯಾಗಿ ಗಮನವಿಟ್ಟು ನೋಡಿ, ಆ ಯುವಕ ಹಸುವಿಗೆ ಚಿತ್ರಹಿಂಸೆ ನೀಡಿದ್ದಾನೆ, ಇದನ್ನು ವಿಡಿಯೋ ಮಾಡಿ ಹಂಚಿಕೊಂಡು ವಿಕೃತವಾಗಿ ಆನಂದಿಸಿದ್ದಾನೆ. ಆದರೆ ಇದಾದ ಬಳಿಕ ಆತನಿಗೆ ಬಂದ ಪರಿಸ್ಥಿತಿ ಹೇಗಿದೆ ಎಂಬುದನ್ನು ಕೂಡ ನೀವು ಈ ವಿಡಿಯೋದಲ್ಲಿ ನೋಡಬಹುದು, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಇಂತಹ ಕಿಡಿಗೇಡಿಗಳಿಗೆ ಪೊಲೀಸರು ಇದೇ ರೀತಿಯ ಶಿಕ್ಷೆಯನ್ನು ನೀಡಬೇಕು” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ….

Read More

Fact Check | ಆಜಾನ್ ಸಮಯದಲ್ಲಿ ಧ್ವನಿವರ್ಧಕದ ಮೂಲಕ ‘ಭಜನೆ ಮತ್ತು ಕೀರ್ತನೆ’ ಹಾಕುವಂತಿಲ್ಲ ಎಂಬ ಪ್ರತಿಪಾದನೆ ಸುಳ್ಳು

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಆಜಾನ್ ಸಮಯದಲ್ಲಿ ಭಜನೆ ಮತ್ತು ಕೀರ್ತನೆಗಳಂತಹ ಧಾರ್ಮಿಕ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರ ವಿಡಿಯೋವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವರು ಈ ವಿಡಿಯೋವನ್ನು ನೋಡಿ ಮಹಾರಾಷ್ಟ್ರದ ಪೊಲೀಸ್‌ ಇಲಾಖೆ ಮುಸಲ್ಮಾನರ ಪರವಾಗಿ ನಿಂತಿದೆ. ಇದರಿಂದ ಮುಂದೆ ಹಿಮಧುಗಳು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹಲವರು ಬರೆದುಕೊಳ್ಳುತ್ತಿದ್ದಾರೆ. ये क्या हो रिया… ??? हिंदू…आप सोते रहो 😠😡👇अभी तो नाशिक से आदेश आया सनातनियों…आने वाले…

Read More

Fact Check | ರಾಜಸ್ತಾನದಲ್ಲಿ RSS ಕಾರ್ಯಕರ್ತನ ಮೇಲೆ ಮುಸ್ಲಿಮರಿಂದ ಹಲ್ಲೆ ಎಂಬುದು ಸುಳ್ಳು

“ಅಕ್ಟೋಬರ್ 17 ರಂದು ರಾಜಸ್ತಾನದ ಜೈಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನೊಬ್ಬ ಅನ್ಯಕೋಮಿನ ಪುರುಷರ ಗುಂಪು ನಡೆಸಿದ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ದಾಳಿಯ ಉದ್ದೇಶ ಬಹಳ ಸ್ಪಷ್ಟ ಮುಸ್ಲಿಂ ಬಾಹುಲ್ಯವುಳ್ಳ ಪ್ರದೇಶದಲ್ಲಿ ಹಿಂದೂಗಳು ಯಾವುದೇ ಕಾರ್ಯಕ್ರಮವನ್ನು ನಡೆಸಬಾರದು,  ಅಷ್ಟಕ್ಕೂ ಆ ದಿನ ಶರದ್ ಪೂರ್ಣಿಮೆಯ ಆಚರಣೆಯಲ್ಲಿ ಪ್ರಸಾದವಾಗಿ ಖೀರ್ ವಿತರಿಸುತ್ತಿದ್ದಾಗ ದಾಳಿಕೋರರಲ್ಲಿ ಒಬ್ಬನಾದ ನಸೀಬ್ ದೇವಾಲಯವನ್ನು ಪ್ರವೇಶಿಸಿದ್ದಾನೆ ಇವನ ಜೊತೆ ಬಂದ ಅವನ ಕೋಮಿನ ಪುರುಷರು ದಾಳಿ ನಡೆಸಿದ್ದಾರೆ” ಎಂದು ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗುತ್ತಿದೆ. Rajasthan:…

Read More

Fact check | ಯೋಗಿ ಆದಿತ್ಯನಾಥ್ ವಿರುದ್ಧ ಯೇತಿ ನರಸಿಂಹಾನಂದರು ಟೀಕಿಸಿರುವ ಹಳೆಯ ವಿಡಿಯೋ ಮತ್ತೆ ವೈರಲ್‌

“ಯುಪಿಯ ಗಾಜಿಯಾಬಾದ್‌ನಲ್ಲಿರುವ ದಸ್ನಾದೇವಿ ದೇವಸ್ಥಾನದ ಮಹಂತ್ ಯತಿ ನರಸಿಂಹಾನಂದ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ಈ ಆಕ್ರೋಶಕ್ಕೂ ಕಾರಣವಿದೆ. ಹಿಂದೂ ರಕ್ಷಣಾ ದಳದ ಅಧ್ಯಕ್ಷ ಭೂಪೇಂದ್ರ ತೋಮರ್ ಅಲಿಯಾಸ್ ಪಿಂಕಿ ಚೌಧರಿ ವಿರುದ್ಧ ಗೂಂಡಾ ಕಾಯ್ದೆ ವಿರುದ್ಧ ಗಾಜಿಯಾಬಾದ್‌ನ ಡಿಎಂ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಇಲ್ಲಿ ಪಿಂಕಿ ಚೌಧರಿ ಅವರನ್ನು ಬೆಂಬಲಿಸಲು ದಸ್ನಾದೇವಿ ದೇವಸ್ಥಾನದಿಂದ ಡಿಎಂ ಕಚೇರಿಗೆ ಹೋಗುತ್ತಿದ್ದ ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಗಿರಿ ಅವರನ್ನು ಪೊಲೀಸರು…

Read More

Fact Check | 2024ರಲ್ಲಿ ಉತ್ತರಾಖಂಡ್‌ನಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ.16ರಷ್ಟು ಹೆಚ್ಚಾಗಿದೆ ಎಂಬುದು ಸುಳ್ಳು

“ದಯವಿಟ್ಟು ಗಮನಿಸಿ, ದೇಶಾದ್ಯಂತ ಮುಸಲ್ಮಾನರ ಜನಸಂಖ್ಯೆ ಪ್ರತಿ ವರ್ಷ ಭಯಾನಕವಾಗಿ ಏರಿಕೆಯಾಗುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕು ಇದಕ್ಕೆ ಉತ್ತಮ ಉದಾಹರಣೆಯೆಂದರೆ ಉತ್ತರಖಂಡದಲ್ಲಿ ಮುಸ್ಲಿಂ ಜನಸಂಖ್ಯೆಯು 2024ರ ಆರಂಭದಿಂದ ಕೇವಲ 10 ತಿಂಗಳಲ್ಲಿಯೇ ಶೇಕಡ 16ರಷ್ಟು ಏರಿಕೆಯಾಗಿದೆ. ಈ ಹಿಂದೆ ಮುಸಲ್ಮಾನರ ಜನಸಂಖ್ಯೆಯಲ್ಲಿ ಶೇಕಡ 1.5 ರಷ್ಟು ಇತ್ತು. ಇದು ಹಿಂದೂಗಳಿಗೆ ಅಪಾಯ” ಎಂಬ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ALARMING- Muslim Population in Uttarakhand Year 2000 : 1.5%Year 2024 :…

Read More

Fact Check | ಮಣಿಪುರದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯಿಂದ ಕ್ರಿಶ್ಚಿಯನ್ ಮಹಿಳೆಯ ಮೇಲೆ ಹಲ್ಲೆ ನಡೆದಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಮಣಿಪುರದಲ್ಲಿನ ಗಲಭೆಯಲ್ಲಿ ಕ್ರೈಸ್ತರ ಮಾರಣಹೋಮ ನಡೆಯುತ್ತಿದೆ. ಅವರ ರಕ್ಷಣೆಗೆ ಯಾರು ಧಾವಿಸುತ್ತಿಲ್ಲ. ಈಗಾಗಲೇ ಸಾವಿರಾರು ಕ್ರೈಸ್ತರು ಮಣಿಪುರದಲ್ಲಿನ ಸಶಸ್ತ್ರ ಪಡೆಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ. ಈಗ ಅಮಾಯಕ ಕ್ರಿಶ್ಚಿಯನ್ ಮಹಿಳೆಯೊಬ್ಬರನ್ನು, ಇದೇ ಸಶಸ್ತ್ರ ಪಡೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಂದಿದ್ದಾರೆ. ಈ‌ ಮೂಲಕ ಈಗ ಅಲ್ಲಿ ಉಳಿದಿರುವ ಕೆಲವೇ ಕೆಲವು ಕ್ರೈಸ್ತರಲ್ಲೂ ಭಯದ ವಾತಾವರಣವನ್ನು ನಿರ್ಮಿಸಲು ಮುಂದಾಗುತ್ತಿದ್ದಾರೆ. ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರನ್ನು ಥಳಿಸುತ್ತಿರುವುದು ಮತ್ತು ತನ್ನನ್ನು ಹೊಡೆಯದಂತೆ ಮಹಿಳೆ ಅಂಗಲಾಚುತ್ತಿರುವುದನ್ನು…

Read More

Fact Check | ಬಾಂಗ್ಲಾದಲ್ಲಿ ದುರ್ಗಾ ಪೂಜೆ ವಿರೋಧಿಸಿ ಮುಸ್ಲಿಮರಿಂದ ದೇವಸ್ಥಾನದ ಒಳಗೆ ನಮಾಜ್ ಎಂಬುದು ಎಡಿಟೆಡ್‌ ಫೋಟೋ

“ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಭೀಕರ ದಾಳಿಯನ್ನು ಅಲ್ಲಿನ ಮೂಲಭೂತವಾದಿ ಮುಸಲ್ಮಾನರು ನಡೆಸುತ್ತಿದ್ದಾರೆ. ಈಗ ದಸರಾ ಹಬ್ಬದ ಸಂದರ್ಭದಲ್ಲಿ ಯಾವುದೇ ಹಿಂದೂಗಳು ದುರ್ಗ ಪೂಜೆ ನಡೆಸದಂತೆ ನೋಡಿಕೊಳ್ಳುತ್ತಿದ್ದಾರೆ. ಇದೀಗ ಅಲ್ಲಿನ ಕೆಲ ಮುಸಲ್ಮಾನರು ದುರ್ಗಾ ಮಾತೆಯ ದೇವಸ್ಥಾನಕ್ಕೆ ನುಗ್ಗಿ ವಿಗ್ರಹದ ಮುಂದೆ ನಮಾಜ್‌ ಮಾಡಿ ಪ್ರಾರ್ಥನೆ ಮಾಡಿದ್ದಾರೆ. ಹೀಗೆ ಅಲ್ಲಿನ ಹಿಂದೂಗಳು ಈ ರೀತಿಯ ಕಿರುಕುಳವನ್ನು ಪ್ರತಿನಿತ್ಯ ಅನುಭವಿಸುತ್ತಿದ್ದಾರೆ” ಎಂದು ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋದಲ್ಲಿ ಕೂಡ ಮುಸಲ್ಮಾನರು ದುರ್ಗಾ ದೇವಿಯ ವಿಗ್ರಹದ ಮುಂದೆ…

Read More

Fact Check | ಡಿಸ್ಕೌಂಟ್ ಜಿಹಾದ್ ಎಂಬುದು ಸುಳ್ಳು, ಇದು ತೆಲಂಗಾಣದ ಹಳೆಯ ಬ್ಯಾನರ್

“ಹಿಂದೂ ಮಹಿಳೆಯರೊಂದಿಗೆ ಶಾಪಿಂಗ್‌ಗೆ ಬರುವ ಮುಸ್ಲಿಂ ಪುರುಷರಿಗೆ ಶೇಕಡಾ 10 ರಿಂದ 50 ರಷ್ಟು ರಿಯಾಯಿತಿ ನೀಡಲಾಗುವುದು. ಇದು ಕರ್ನಾಟಕದ ಮಾಲ್‌ವೊಂದರಲ್ಲಿ ಅಳವಡಿಸಿದ್ದ ಬ್ಯಾನರ್‌ನಲ್ಲಿ ನೀಡಲಾದ ವಿಶೇಷ ಆಫರ್‌ನ ಮಾಹಿತಿ. ಹೀಗೆ ಅವರು ಬಹಿರಂಗವಾಗಿಯೇ ಲವ್‌ ಜಿಹಾದ್‌ಗೆ ಕರ್ನಾಟಕದಲ್ಲಿ ಕರೆ ನೀಡಿದ್ದಾರೆ. ಇದು ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಅವರಿಗೆ ನೀಡಿದ ಬೆಂಬಲದ ಪರಿಣಾಮ. ಇಂದು ಹಿಂದೂಗಳು ಅವರ ಹೆಣ್ಣು ಮಕ್ಕಳನ್ನು ಅವರೇ ರಕ್ಷಿಸಿಕೊಳ್ಳಬೇಕಾಗಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ध्यान से देखो और आँखें…

Read More
ತಾಲಿಬಾನ್

Fact Check: RSS, BJP ಬಗ್ಗೆ ಪಾಕಿಸ್ತಾನದ ಇಸ್ಲಾಮಿಕ್ ಬೋಧಕ ಮಾತನಾಡಿದ್ದಾರೆಯೇ ಹೊರತು ತಾಲಿಬಾನ್ ಪ್ರಧಾನ ಕಾರ್ಯದರ್ಶಿ ಅಲ್ಲ

ಸಾಂಪ್ರದಾಯಿಕ ಇಸ್ಲಾಮಿಕ್ ಉಡುಪನ್ನು ಧರಿಸಿದ ವ್ಯಕ್ತಿಯೊಬ್ಬ ಆರ್‌ಎಸ್ಎಸ್, ಬಿಜೆಪಿ ಮತ್ತು ಮರಾಠರ ಬಗ್ಗೆ ಮಾತನಾಡುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ವೀಡಿಯೋದಲ್ಲಿರುವ ವ್ಯಕ್ತಿ ತಾಲಿಬಾನ್ ಪ್ರಧಾನ ಕಾರ್ಯದರ್ಶಿ ಎಂದು ಹೇಳಲಾಗುತ್ತಿದೆ. “ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಯಾವುದೇ ದೇಶವು ಭಾರತದ ಮೇಲೆ ದಾಳಿ ಮಾಡುವುದಿಲ್ಲ ಮತ್ತು ಬಿಜೆಪಿ ಮತ್ತು ಆರ್‌ಎಸ್ಎಸ್ ಅತ್ಯಂತ ಶಕ್ತಿಶಾಲಿ” ಎಂದು ಅವರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಭಾರತದ ಮೇಲೆ ದಾಳಿ ಮಾಡಲು, ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕು ಎಂದು ತಾಲಿಬಾನ್ ಮುಖ್ಯಸ್ಥರು ಹೇಳಿದ್ದಾರೆ ಎಂದು…

Read More