ಸಾಮಾಜಿಕ ಜಾಲತಾಣದಲ್ಲಿ “ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೆಡ್ಕಲ್-ಮಲ್ಕಜ್‌ಗಿರಿ ಜಿಲ್ಲೆಯಲ್ಲಿ ಸುಮಾರು 90,040 ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಿದೆ. ಮುಂದೆ ಇಡೀ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲೇ ರೇಷನ್ ಕಾರ್ಡ್ ರದ್ದು ಮಾಡುವ ಸಾಧ್ಯತೆ ಇದೆ.” ಎಂಬ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
మేడ్చల్ జిల్లాలో 95,040 రేషన్ కార్డులు రద్దు.. ఆందోళనలో ప్రజలు
మేడ్చల్ జిల్లాలో మొత్తంగా 95,040 తెల్ల రేషన్ కార్డులు రద్దు కాగా.. బాచుపల్లి మండలం – 2,378
ఘట్ కేసర్ – 2,273
కాప్రా – 2,263
కీసర – 3388
మేడ్చల్ – 2,306
మేడిపల్లి – 4,165
శామీర్పేట – 893
మూడుచింతలపల్లి – 3,208 రేషన్… pic.twitter.com/1dU4T788Pu— Telugu Scribe (@TeluguScribe) January 4, 2024
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸುಳ್ಳಿನಿಂದ ಕೂಡಿದ ಪೋಸ್ಟ್
ಇದನ್ನೇ ನಂಬಿ ಸಾಕಷ್ಟು ಜನ ಆತಂಕಕ್ಕೆ ಒಳಗಾಗುವುದರ ಜೊತೆಗೆ ತಮ್ಮ ಹತ್ತಿರದ ಪಡಿತರ ಚೀಟಿ ವಿತರಣ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ ಎಂಬ ಮಾಹಿತಿಗಳು ಕೂಡ ಲಭ್ಯವಾಗುತ್ತಿದೆ.
ಫ್ಯಾಕ್ಟ್‌ಚೆಕ್
ಈ ಸುದ್ದಿಯ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಿದಾಗ ತೆಲುಗು ಸ್ಕ್ರೈಬ್ ಎಂಬ ಎಕ್ಸ್ ಖಾತೆಯಲ್ಲಿ ಈ ಸುದ್ದಿ ಕಂಡು ಬಂದಿದೆ. ಆದರೆ ಈ ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ಎಲ್ಲಿಯೂ ಸುದ್ದಿಯ ಮೂಲ ಯಾವುದು ಎಂಬ ಉಲ್ಲೇಖವೇ ಕಂಡು ಬಂದಿಲ್ಲ. ಇನ್ನು ಇದೇ ಪೋಸ್ಟ್‌ಗೆ ಸಾಕಷ್ಟು ಮಂದಿ ಕಮೆಂಟ್ ಹಾಕಿದ್ದು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಲ ಕೀವರ್ಡ್‌ಗಳನ್ನ ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಿದಾಗ ತೆಲಂಗಾಣದ ನೀರಾವರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಉತ್ತಮ್ ಕುಮಾರ್ ರೆಡ್ಡಿ ಅವರ ಎಕ್ಸ್ ಪೋಸ್ಟ್‌ವೊಂದು ಕಂಡು ಬಂದಿದೆ.
Sir @UttamINC is this true ? https://t.co/yOxlAOOBv9
— Asaduddin Owaisi (@asadowaisi) January 4, 2024
ಅದರಲ್ಲಿ ಈ ಸುದ್ದಿ ಕಂಡ ಕೂಡಲೆ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ತಮ್ಮ ಎಕ್ಸ್ ಖಾತೆಯಿಂದ ಸಚಿವ ಉತ್ತಮ್ ಕುಮಾರ್ ರೆಡ್ಡಿ ಅವರನ್ನು ಉಲ್ಲೇಖಿಸಿ ವೈರಲ್ ಪೋಸ್ಟ್ ನಿಜವೇ ಎಂದು ಪ್ರಶ್ನಿಸಿದ್ದರು ಇದಕ್ಕೆ ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ತೆಲಂಗಾಣದಲ್ಲಿ ಒಂದೇ ಒಂದು ರೇಷನ್ ಕಾರ್ಡ್ ಅನ್ನು ನಮ್ಮ ಸರ್ಕಾರ ರದ್ದು ಮಾಡಿಲ್ಲ, ಅದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.
Asad, this news of cancellation of ration cards is totally false. Let me assure you, not one single ration card has been cancelled anywhere in the state by our Government. @asadowaisi https://t.co/sOyDEAfEo0
— Uttam Kumar Reddy (@UttamINC) January 4, 2024
ಇನ್ನು ಇದೇ ಸುದ್ದಿಯನ್ನು ನ್ಯೂಸ್ ಮೀಟರ್ ತಂಡ ಕೂಡ ಪರಿಶೀಲನೆ ನಡೆಸಿದ್ದು ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಆಹಾರ ಸರಬರಾಜು ಅಧಿಕಾರಿ ಎಂ.ಕೆ ರಾಥೋಡ್ ಅವರಿಗೆ ಕರೆ ಮಾಡಿ ವಿಚಾರಿದೆ. ಈ ವೇಳೆ ಅವರು ತೆಲಂಗಾಣದಲ್ಲಿ ಇದುವರೆಗೂ ಯಾವುದೇ ರೇಷನ್ ಕಾರ್ಡ್ ರದ್ದಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಮುಂಬರುವ ದಿನಗಳಲ್ಲಿ ರೇಷನ್ ಕಾರ್ಡ್ ರದ್ದು ಮಾಡುವ ಕುರಿತು ಯಾವುದಾದರು ಮಾರ್ಗಸೂಚಿ ಸಿಕ್ಕಿದೆಯೇ ಎಂದು ಪ್ರಶ್ನಿಸಿದಾಗ ಆ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಒಟ್ಟಾರೆಯಾಗಿ ಈ ಎಲ್ಲಾ ಮಾಹಿತಿಗಳ ಆಧಾರದಲ್ಲಿ ಹೇಳುವುದಾದರೆ ತೆಲಂಗಾಣದಲ್ಲಿ ರೇಷನ್ ಕಾರ್ಡ್ ರದ್ದಾಗಲಿದೆ ಎಂಬುದು ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : Fact Check | ಮದರಸ ಶಿಕ್ಷಕರ ಸಂಬಳ ಪಾವತಿಗೆ ಕೇರಳ ಸರ್ಕಾರವು ಅನುದಾನ ಮಂಜೂರು ಮಾಡುವುದಿಲ್ಲ
ವಿಡಿಯೋ ನೋಡಿ : Fact Check | ಮದರಸ ಶಿಕ್ಷಕರ ಸಂಬಳ ಪಾವತಿಗೆ ಕೇರಳ ಸರ್ಕಾರವು ಅನುದಾನ ಮಂಜೂರು ಮಾಡುವುದಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ