Fact Check | ಜಟಾಯು ಪಕ್ಷಿಗಳು ಅಯೋಧ್ಯೆಗೆ ಬಂದಿವೆ ಎಂದು 2021ರ ರಣಹದ್ದುಗಳ ಫೋಟೋ ಹಂಚಿಕೆ

“ರಾಮಮಂದಿರದ ಉದ್ಘಾಟನೆಗೆ ಸಾಕ್ಷಿಯಾಗಲು ಜಟಾಯು ಪಕ್ಷಿಗಳು ಆಗಮಿಸಿವೆ. ಈ ವಿಚಾರವನ್ನು ಎಲ್ಲಾ ಹಿಂದೂಗಳಿಗೆ ಶೇರ್‌ ಮಾಡಿ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ಅಚ್ಚರಿಯನ್ನು ವ್ಯಕ್ತ ಪಡಿಸಿತ್ತಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ಮೊದಲ ಹಂತ ಮುಕ್ತಾಯವಾಗಿ ಜನವರಿ 22 ರಂದು ಲೋಕಾರ್ಪಣೆಗೊಳ್ಳಲಿರುವ ಈ ಸಂದರ್ಭದಲ್ಲೇ ಸಾಕಷ್ಟು ರೀತಿಯ ಸುಳ್ಳು ಸುದ್ದಿಗಳನ್ನು ಹೆಚ್ಚು ಹೆಚ್ಚು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ವೈರಲ್‌ ವಿಡಿಯೋದ ಕೆಲ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಅವುಗಳನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಲಾಯಿತು. ಈ ವೇಳೆ ಸಾಕಷ್ಟು ಪಕ್ಷಿಗಳ ಫೋಟೋಗಳು ಕಾಣಿಸಿಕೊಂಡಿತ್ತು. ಈ ವೇಳೆ 8 ಅಕ್ಟೋಬರ್‌ 2021ರಲ್ಲಿ ಫೇಸ್‌ಬುಕ್‌ ಖಾತೆಯಿಂದ ಹಂಚಿಕೊಳ್ಳಲಾಗಿದ್ದ ಪೋಸ್ಟ್‌ ಒಂದು ಕಂಡು ಬಂದಿದೆ.

ಅದರಲ್ಲಿ ಅಯೋಧ್ಯೆಯಲ್ಲಿ ಜಟಾಯು ಎಂದು ಹೇಳಲಾಗುತ್ತಿರುವ ವಿಡಿಯೋವನ್ನೇ ಹಂಚಿಕೊಳ್ಳಲಾಗಿದೆ. ಆ ವಿಡಿಯೋದಲ್ಲಿರುವ ಪಕ್ಷಿಯ ಪ್ರಭೇದ ಯಾವುದು ಎಂದು ಪರಿಶೀಲಿಸಿದಾಗ ಇದು ಆಕ್ಸಿಪಿಟ್ರಿಡೆ ಪ್ರಭೇದಕ್ಕೆ ಸೇರಿದ ರಣಹದ್ದುಗಳು ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳ ಆಧಾರದ ಮೇಲೆ ರಾಮಮಂದಿರ ಉದ್ಘಾಟನೆಗೆ ಸಾಕ್ಷಿಯಾಗಲು ಜಟಾಯು ಪಕ್ಷಿಗಳು ಆಗಮಿಸಿವೆ ಎಂಬುದು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact check | ತೆಲಂಗಾಣದಲ್ಲಿ ಕಾಂಗ್ರೆಸ್‌ ಸರ್ಕಾರ 90,040 ರೇಷನ್‌ ಕಾರ್ಡ್‌ ರದ್ದುಗೊಳಿಸಲಾಗಿಲ್ಲ


ವಿಡಿಯೋ ನೋಡಿ : Fact check | ತೆಲಂಗಾಣದಲ್ಲಿ ಕಾಂಗ್ರೆಸ್‌ ಸರ್ಕಾರ 90,040 ರೇಷನ್‌ ಕಾರ್ಡ್‌ ರದ್ದುಗೊಳಿಸಲಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *