Fact Check: ಮುಸ್ಲಿಮರ ಹೆಸರಿನಲ್ಲಿ ಅಯೋಧ್ಯೆಯ ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದವರು ಸಂಘಪರಿವಾರದ ಕಾರ್ಯಕರ್ತರು ಎಂಬುದು ನಿಜ
ಮುಸ್ಲಿಮರ ಹೆಸರಿನಲ್ಲಿ ರಾಮ ಮಂದಿರ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದ ಇಬ್ಬರು ಹಿಂದೂ ಯುವಕರನ್ನು ಬಂಧಿಸಲಾಗಿದೆ ಎಂಬ ಸುದ್ಧಿಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗೆಯೇ ಚಾಮರಾಜನಗರದಲ್ಲಿ ಭಾಗವಧ್ವಜ ಸುಟ್ಟು ಹಿಂದೂ ಮುಸ್ಲಿಂ ಗಲಭೆ ನಡೆಸಲು ಸಂಚು ರೂಪಿಸಿದ್ದ ಮೂವರು ಹಿಂದೂಗಳನ್ನು ಬಂದಿಸಲಾಗಿದ ಎಂಬ ಪತ್ರಿಕೆಯ ತುಣುಕನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅನೇಕರು ಈ ವರದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕೆಂದು ಕನ್ನಡ ಫ್ಯಾಕ್ಟ್‌ಚೆಕ್ ತಂಡವನ್ನು ಕೇಳಿಕೊಂಡಿದ್ದಾರೆ. ಫ್ಯಾಕ್ಟ್ ಚೆಕ್: ರಾಮ ಮಂದಿರ ಸ್ವೋಟಿಸುವುದಾಗಿ ಬೆದರಿಕೆ ನೀಡಿದ ಕುರಿತು…