Fact Check | ಅಯೋಧ್ಯೆಯಲ್ಲಿ ಪ್ಲಾಸ್ಟಿಕ್‌ ಕೊಟ್ರೆ ಉಚಿತವಾಗಿ 5 ರೂ. ಸಿಗುತ್ತದೆ ಎಂಬುದು ಸುಳ್ಳು..!

“ಅಯೋಧ್ಯೆಯಲ್ಲಿ ಜನರು ತಾವು ಬಳಸಿ ಖಾಲಿಯಾದ ನೀರಿನ ಬಾಟಲಿಯನ್ನು ಹಿಂದಿರುಗಿಸಿದ್ರೆ ಉಚಿತವಾಗಿ 5 ರೂಪಾಯಿ ಪಡೆಯುತ್ತಾರೆ” ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅದರಲ್ಲೂ ಅಯೋಧ್ಯೆಯಿಂದ ಕ್ರಾಂತಿಕಾರಿ ನಡೆ ಎಂದು ಕೂಡ ಸಾಕಷ್ಟು ಮಂದಿ ಪೋಸ್ಟ್‌ ಮಾಡುತ್ತಿದ್ದು, ಪ್ಲಾಸ್ಟಿಕ್‌ ಮಾಲಿನ್ಯ ತಡೆಯಲು ಹಾಗೂ ಪ್ಲಾಸ್ಟಿಕ್‌ ಪುನರ್‌ ಬಳಕೆಗೆ ಈ ಕ್ರಮ ಎಂದು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ.

ಪ್ಲಾಸ್ಟಿಕ್‌ ನೀಡಿದರೆ ಉಚಿತವಾಗಿ 5 ರೂ. ನೀಡುತ್ತಾರೆ ಎಂಬುದು ಸುಳ್ಳು
ಪ್ಲಾಸ್ಟಿಕ್‌ ನೀಡಿದರೆ ಉಚಿತವಾಗಿ 5 ರೂ. ನೀಡುತ್ತಾರೆ ಎಂಬುದು ಸುಳ್ಳು

ಹೀಗೆ ವೈರಲ್‌ ಆಗುತ್ತಿರುವ ಪೋಸ್ಟ್‌ ಪ್ರಕಾರ ಅಯೋಧ್ಯೆಯಲ್ಲಿ ಪ್ಲಾಸ್ಟಿಕ್‌ ಬಳಕೆಗೆ ನಿಯಂತ್ರಣ ಹೇರಲಾಗಿದೆ ಮತ್ತು ಪ್ಲಾಸ್ಟಿಕ್‌ ಮರುಬಳಕೆಗೆ ಉತ್ತೇಜನ ನೀಡಲು ಈ ರೀತಿಯ ತಂತ್ರವನ್ನು ಹೆಣೆಯಲಾಗಿದೆ ಎಂದು ಪ್ರತಿಪಾದನೆ ಮಾಡಲಾಗುತ್ತಿದೆ. ಹಾಗಾದರೆ ನಿಜಕ್ಕೂ ಅಯೋಧ್ಯೆಯಲ್ಲಿ ಪ್ಲಾಸ್ಟಿಕ್‌ ಬಾಟಲಿ ಮತ್ತು ಪ್ಲಾಸ್ಟಿಕ್‌ ಪೊಟ್ಟಣಗಳು ವಾಪಸ್‌ ಕೊಟ್ಟರೆ  5 ರೂ ಉಚಿತವಾಗಿ ನೀಡಲಾಗುತ್ತದೆಯೇ ಎಂಬುದನ್ನ ಪರಿಶೀಲಿಸೋಣ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಪೋಸ್ಟ್‌
                                          ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಪೋಸ್ಟ್‌

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋವನ್ನು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಿದ್ದು, ಈ ವೇಳೆ ವಿವಿಧ ರೀತಿಯ ಪೋಸ್ಟ್‌ಗಳು ಕೂಡ ಕಂಡು ಬಂದಿದೆ. ಅದರಲ್ಲಿ ಕಬಡಿವಾಲಾ ಎಂಬ ಎಕ್ಸ್‌ ( ಈ ಹಿಂದಿನ ಟ್ವಿಟರ್‌ ) ಖಾತೆ ಕಂಡು ಬಂದಿದ್ದು, ಈ ಫೋಟೋ ಕುರಿತು ಅಧಿಕೃತ ಮಾಹಿತಿ ಕಂಡು ಬಂದಿದೆ. ಇನ್ನು ಈ ಕಬಡಿವಾಲಾದಲ್ಲಿ ಕಂಡು ಬಂದ ಫೋಟೋ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋಗಳು ಒಂದೇ ರೀತಿಯಲ್ಲಿ ಕಂಡು ಬಂದಿದ್ದು ಮೂಲ ಫೋಟೋವನ್ನು ಎಡಿಟ್‌ ಮಾಡಿರುವುದು ಸ್ಪಷ್ಟವಾಗಿದೆ.

ಅಸಲಿಗೆ ಈ ಕಬಡಿವಾಲ ಸಂಸ್ಥೆ ಹೊಸ ಸ್ಟಾರ್ಟ್‌ಅಪ್‌ ಕಂಪನಿಯಾಗಿದ್ದು,  ಕಸ ಮುಕ್ತ ಅಯೋಧ್ಯೆಯನ್ನು ಉತ್ತೇಜಿಸಲು ಅಯೋಧ್ಯಾ ನಗರ ನಿಗಮದ ಸಹಭಾಗಿತ್ವದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.. ಇದಕ್ಕಾಗಿ ಡಿಪಾಸಿಟ್‌ ರೀಫಂಡ್‌ ಸಿಸ್ಟಮ್‌ ( DRS ) ಅನ್ನು ಜಾರಿಗೆ ತಂದಿದ್ದು. ಇದರ ಅಡಿಯಲ್ಲಿ ಗ್ರಾಹಕರು ನೀರನ್ನು, ಚಿಪ್ಸ್‌ನಂತಹ ಪಾಸ್ಟಿಕ್‌ನಿಂದ ಆವೃತ್ತವಾಗಿರುವ ಆಹಾರವನ್ನು ಖರೀದಿಸಲು ಹೆಚ್ಚುವರಿಯಾಗಿ 5 ರೂಪಾಯಿಯನ್ನು ಸಾರ್ವಜನಿಕರು  ನೀಡಬೇಕಾಗುತ್ತದೆ.

ಇದನ್ನು ಸಂಸ್ಥೆಯೇ ಮತ್ತೆ ಮರು ಪವಾತಿ ಮಾಡಲು ಕ್ಯೂಆರ್‌ ಕೋಡ್‌ ಅನ್ನು ನೀಡುತ್ತದೆ. ಆಹಾರ ಸೇವನೆಯ ಬಳಿಕ ಪಾಸ್ಟಿಕ್‌ ಕಸವನ್ನು ನಿಗಧಿತ ಕೌಂಟರ್‌ಗೆ ನೀಡಿ, ತಮ್ಮ ಬಳಿ ಇರುವ ಕ್ಯೂಆರ್‌ ಕೋಡ್‌ ಅನ್ನು ತೋರಿಸಿದರೆ ಗ್ರಾಹಕರು ಹೆಚ್ಚುವರಿಯಾಗಿ ಪಾವತಿಸಿದ 5 ರೂ. ಹಿಂದಿರುಗಿಸಲಾಗುತ್ತದೆ.  ಈ ನಿಯಮದಲ್ಲಿ 5 ರೂ ಉಚಿತವಾಗಿ ನೀಡಲಾಗುವುದಿಲ್ಲ.  ಹಾಗಾಗಿ ಅಯೋಧ್ಯೆಯಲ್ಲಿ ಪಾಸ್ಟಿಕ್‌ ಬಾಟಲ್‌ ಮತ್ತು ಆಹಾರಗಳಿಗಾಗಿ ಬಳಸಿದ ಪ್ಲಾಸ್ಟಿಕ್‌ ಪೊಟ್ಟಣಗಳನ್ನು ನೀಡಿದರೆ ಉಚಿತವಾಗಿ 5 ರೂ ನೀಡಲಾಗುತ್ತದೆ ಎಂಬುದು ಸುಳ್ಳು.


ಇದನ್ನೂ ಓದಿ : Fact Check: ಫೆ. 14 ಪ್ರೇಮಿಗಳ ದಿನದಂದು ಭಗತ್ ಸಿಂಗ್ ಮತ್ತು ಸಂಗಡಿಗರನ್ನು ಗಲ್ಲಿಗೇರಿಸಲಾಯಿತು ಎಂಬುದು ಸುಳ್ಳು


ವಿಡಿಯೋ ನೋಡಿ : Fact Check: ಫೆ. 14 ಪ್ರೇಮಿಗಳ ದಿನದಂದು ಭಗತ್ ಸಿಂಗ್ ಮತ್ತು ಸಂಗಡಿಗರನ್ನು ಗಲ್ಲಿಗೇರಿಸಲಾಯಿತು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *