ಅಯೋಧ್ಯೆಯ ರಾಮ ಮಂದಿರದ ಪ್ರಾಣಪ್ರತಿಷ್ಟಾಪನೆಯ ನಂತರವು ದೇಣಿಗೆಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ, ಸೌದಿಯ ರಾಜ ಅಯೋಧ್ಯೆಯ ರಾಮ ಮಂದಿರಕ್ಕೆ 50 ಕೆ.ಜಿ ಚಿನ್ನವನ್ನು ದೇಣಿಗೆ ನೀಡಿದ್ದಾರೆ, ಇದು ಬರೋಬರಿ 34 ಕೋಟಿ ಮೊತ್ತವಾಗುತ್ತದೆ ಎಂದು ಪ್ರತಿಪಾದಿಸಿ “ಕನ್ನಡ ಯೂ ಟೂಬ್” ಎಂಬ ಯೂಟೂಬ್ ಚಾನೆಲ್ ವಿಡಿಯೋ ಒಂದನ್ನು ಹಂಚಿಕೊಂಡಿದೆ.
ಇದೇ ರೀತಿ ಇನ್ನೊಂದು ಸುದ್ದಿ ಹರಿದಾಡುತ್ತಿದ್ದು “ಅಮೆರಿಕದ ಆರ್ಯವೈಶ್ಯ ವಾಸವಿ ಅಸೋಸಿಯೇಷನ್ ಅಯೋಧ್ಯೆ ರಾಮ ಮಂದಿರದಲ್ಲಿ ಭಗವಾನ್ ರಾಮನಿಗೆ ದಾನ ಮಾಡಿದ 12 ಚಿನ್ನದ ವಾಹನಗಳ ವೀಡಿಯೊ.” ಎಂಬ ಹೇಳಿಕೆ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.ಫ್ಯಾಕ್ಟ್‌ಚೆಕ್: ಸೌದಿ ಅರೇಬಿಯಾದ ಪ್ರಸ್ತುತ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅಯೋಧ್ಯೆಯ ರಾಮಮಂದಿರಕ್ಕೆ 50 ಕೆ.ಜಿ ಚಿನ್ನವನ್ನು ದೇಣಿಗೆಯಾಗಿ ನೀಡಿರುವ ಕುರಿತು ಯಾವುದೇ ವರದಿಗಳು ಪ್ರಕಟವಾಗಿಲ್ಲ. ರಾಮ ಮಂದಿರಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದವರ ಪಟ್ಟಿಯಲ್ಲಿ ಸಹ ಸೌದಿ ರಾಜನ ಹೆಸರಿಲ್ಲ. ಆದ್ದರಿಂದ ಸೌದಿಯ ರಾಜ ಅಯೋಧ್ಯೆಯ ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ ಎಂಬುದು ಸುಳ್ಳು
ಇನ್ನೂ, 21 ಮಾರ್ಚ್ 2023ರಂದು ಅಮೆರಿಕದ ಆರ್ಯವೈಶ್ಯ ವಾಸವಿ ಅಸೋಸಿಯೇಷನ್ ತೆಲಂಗಾಣದ ಭದ್ರಾಚಲಂನಲ್ಲಿರುವ ಶ್ರೀ ರಾಮಚಂದ್ರ ಸ್ವಾಮಿ ದೇವಸ್ಥಾನಕ್ಕೆ ಚಿನ್ನದ ಲೇಪಿತ ವಾಹನಗಳನ್ನು ದಾನವಾಗಿ ನೀಡಿದೆ. ಆದ್ದರಿಂದ ವೈರಲ್ ವಿಡಿಯೋಗೂ ಅಯೋಧ್ಯೆ ರಾಮ ಮಂದಿರಕ್ಕೂ ಯಾವುದೇ ಸಂಬಂಧವಿಲ್ಲ.
ಭದ್ರಾಚಲಂ ದೇವಸ್ಥಾನದಲ್ಲಿ ತಿರುವೀಡಿ ಸೇವೆಗೆ ದೇಣಿಗೆ ನೀಡಿದ ಈ ಸುದ್ದಿಯನ್ನು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇದನ್ನು ಓದಿ: Fact Check | ನೈಲ್ ನದಿ ಬಳಿಯ ಸರೋವರದಲ್ಲಿ ಮಾನವ ಮುಖದ ಹೋಲಿಕೆಯ ಮೀನು ಪತ್ತೆಯಾಗಿಲ್ಲ
ವಿಡಿಯೋ ನೋಡಿ: ಶುಕ್ರವಾರ ನಮಾಜ್ ಮಾಡಲೆಂದು SSLC ಪರೀಕ್ಷೆಯನ್ನು ಮಧ್ಯಾಹ್ನ ಇಡಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.