“ನೈಲ್ ನದಿಯ ಬಳಿ ಸರೋವರವೊಂದರಲ್ಲಿ ಮಾನವ ಮುಖದ ಮೀನು ಪತ್ತೆಯಾಗಿದೆ. ಇದನ್ನು ಎಲ್ಲರಿಗೂ ಶೇರ್ ಮಾಡಿ” ಎಂಬ ಪೋಸ್ಟ್‌ವೊಂದನ್ನ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ ನೋಡಿದ ಸಾಕಷ್ಟು ಮಂದಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದು, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಈ ವಿಚಿತ್ರ ಜೀವಿಯು ನೋಡಲು ದೇಹಾಕಾರದಲ್ಲಿ ಮಾನವನಂತೆ ಇದ್ದು, ಇದರ ಮುಖ ಮಾತ್ರ ಮೀನಿನಂತೆ ಇರುವುದರಿಂದ ಸಾಕಷ್ಟು ಮಂದಿ ಅಚ್ಚರಿಯನ್ನು ವ್ಯಕ್ತ ಪಡಿಸುವುದರ ಜೊತೆಗೆ ಇದು ನಿಜವಿರಬಹುದು ಎಂದು ನಂಬಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಹೆಡ್‌ಟ್ಯಾಪ್ ಎಂಬ ಯುಟ್ಯೂಬರ್ ಒಬ್ಬರು ಈ ವಿಡಿಯೋ ನಿಜವೆಂಬಂತೆ ತಮ್ಮ ಚಾನಲ್‌ನಲ್ಲಿ ಕೂಡ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು 2 ವಾರಗಳ ಹಿಂದೆ 38 ಸಾವಿರ ಜನ ನೋಡಿದ್ದಾರೆ.
ಸುಳ್ಳು ಪ್ರತಿಪಾದನೆಯೊಂದಿಗೆ ಯೂಟ್ಯುಬ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ
ಫ್ಯಾಕ್ಟ್‌ಚೆಕ್
ವೈರಲ್ ಆಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಇದೇ ರೀತಿಯ ವಿಡಿಯೋ ಮತ್ತು ಫೋಟೋಗಳು ಹೆಚ್ಚು ಹೆಚ್ಚು ಪತ್ತೆಯಾಗಿದ್ದವು. ಇನ್ನೊಂದಷ್ಟು ಹುಡುಕಾಟ ನಡೆಸಿದಾಗ AI- ರಚಿತವಾದ ಹಲವು ಚಿತ್ರಗಳು ಕಂಡು ಬಂದಿವೆ.
ಇನ್ನು ಈ ವಿಡಿಯೋ ಜೊತೆಗೆ ಹಂಚಿಕೊಳ್ಳಲಾಗುತ್ತಿರುವ ಬರಹಗಳ ಅಧಾರದ ಮೇಲೆ ಮನುಷ್ಯನ ಮುಖಕ್ಕೆ ಹೊಂದಿಕೊಳ್ಳುವ ಯಾವುದಾದರೂ ಮೀನು ಪತ್ತೆಯಾಗಿದೆಯೇ ಎಂದು ಹುಡುಕಿದಾಗ ಯಾವುದೇ ರೀತಿಯ ವರದಿಗಳು ಕಂಡು ಬಂದಿಲ್ಲ. ಒಂದು ವೇಳೆ ಮನುಷ್ಯ ಮುಖದ ಮೀನು ನಿಜವಾಗಿ ಪತ್ತೆಯಾಗಿದ್ದರೆ ಹಲವು ಮುಖ್ಯವಾಹಿನಿಯ ಮಾಧ್ಯಮಗಳು ವರದಿ ಮಾಡಬೇಕಾಗಿತ್ತು. ಆದರೆ ಯಾವುದೇ ರೀತಿಯ ವರದಿಗಳು ಕಂಡು ಬಂದಿಲ್ಲ.
ಇನ್ನು ಈ ವೈರಲ್ ವಿಡಿಯೋದಲ್ಲಿ ಕೆಲವೊಂದು ಕ್ಲಿಪ್‌ಗಳನ್ನು ತೆಗೆದು ಹೈ ಎಐ ಡಿಟೆಕ್ಟರ್‌ನಲ್ಲಿ ಪರಿಶೀಲಿಸಿದಾಗ ಇದು ಶೇ.99.4 ಪ್ರತಿಶತಃ ಎಐ ನಿರ್ಮಿತ ಎಂಬುದನ್ನು ಸಾಬೀತಾಗಿದೆ.
ಇದನ್ನೂ ಓದಿ : Fact Check: ಶುಕ್ರವಾರ ನಮಾಜ್ ಮಾಡಲೆಂದು SSLC ಪರೀಕ್ಷೆಯನ್ನು ಮಧ್ಯಾಹ್ನ ಇಡಲಾಗಿದೆ ಎಂಬುದು ಸುಳ್ಳು
ವಿಡಿಯೋ ನೋಡಿ : Fact Check: ಶುಕ್ರವಾರ ನಮಾಜ್ ಮಾಡಲೆಂದು SSLC ಪರೀಕ್ಷೆಯನ್ನು ಮಧ್ಯಾಹ್ನ ಇಡಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.