ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಎಲ್ಲಾ ನಡೆಗಳನ್ನು ಮುಸ್ಲಿಂ ಓಲೈಕೆಗಾಗಿ ಎಂದು ಆರೋಪಿಸಿ ಅಪಪ್ರಚಾರ ಮಾಡಲಾಗುತ್ತಿದೆ.
ಇದರ ಭಾಗವಾಗಿ, “ಎಸ್ ಎಸ್ ಎಲ್ ಸಿ ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿಯಲ್ಲೂ ಸಹ ಮುಸ್ಲಿಂ ತುಷ್ಟೀಕರಣ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರದ ನಿರ್ದೇಶನದಂತೆ, ರಾಜ್ಯ ಶಿಕ್ಷಣ ಇಲಾಖೆ ಬೆಳಿಗ್ಗೆಯ ನಮಾಜ್ ಮಾಡಲು ಅನುಕೂಲ ಮಾಡಿಕೊಡಲು ಉಳಿದೆಲ್ಲ ದಿನದ ವೇಳಾಪಟ್ಟಿಯ ಸಮಯಕ್ಕೆ ಬದಲಾಗಿ ಶುಕ್ರವಾರದಂದು ಮಧ್ಯಾಹ್ನ ಪರೀಕ್ಷೆ ನಡೆಸಲು ನಿರ್ಧರಿಸಿದೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ಪ್ರತಿಪಾದಿಸಿ ಮೊದಲು ಪೋಸ್ಟ್ ಹಂಚಿಕೊಂಡಿರುವವರು ಬಿಜೆಪಿ ವಕ್ತಾರ ಹರಿಪ್ರಕಾಶ್ ಕೊಣೆಮನೆಯವರು.
ನಂತರ ಈ ಸುದ್ದಿಯನ್ನು ವಿಸ್ತಾರ ಚಾನೆಲ್ ನವರು ಪ್ರಕಟಿಸಿದ್ದಾರೆ ಮತ್ತು ಬಿಜೆಪಿ ತನ್ನ ಅಧಿಕೃತ ಖಾತೆಯಲ್ಲಿ ಇದನ್ನು ಖಂಡಿಸಿದೆ. ಹಾಗೆಯೇ ಬಲಪಂಥೀಯ ವಿವಾದಿತ ಭಾಷಣಕಾರ ಚಕ್ರವರ್ತಿ ಸುಲಿಬೆಲೆ ಸೇರಿದಂತೆ ಅನೇಕ ಜನ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಈ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್: ಮಾರ್ಚ್ 1 ರ ಶುಕ್ರವಾರದಂದು ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು ಅಂದು ಕನ್ನಡ ಮತ್ತು ಅರೇಬಿಕ್ ಪರೀಕ್ಷೆ ನಡೆಯಲಿದೆ. ಹಾಗಾಗಿ ಅ ದಿನದ SSLC ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ. ಮಾರನೇ ದಿನ ಶನಿವಾರ ಪಿಯುಸಿ ಪರೀಕ್ಷೆ ಇಲ್ಲದ ಕಾರಣ SSLC ಪರೀಕ್ಷೆ ಬೆಳ್ಳಿಗೆಯೇ ಆರಂಭವಾಗುತ್ತದೆ. ಪರೀಕ್ಷಾ ಕೇಂದ್ರಗಳ ಕೊರತೆ ಹಾಗೂ ಗೊಂದಲ ಉಂಟಾಗುವುದನ್ನು ತಪ್ಪಿಸಲು ಈ ಕ್ರಮ ವಹಿಸಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ ಪುಟದಲ್ಲಿ ಸ್ಪಷ್ಟಪಡಿಸಿದೆ ಮತ್ತು ಈ ಸುಳ್ಳನ್ನು ಹರಿಬಿಟ್ಟ ಬಿಜೆಪಿ ವಕ್ತಾರರಾದ ಹರಿಪ್ರಕಾಶ್ ಕೋಣೆಮನೆಯವರ ವಿರುದ್ಧ ಹರಿಹಾಯ್ದಿದ್ದಾರೆ. ಹಾಗಾಗಿ ನಮಾಜ್‌ಗಾಗಿ ಪರೀಕ್ಷೆ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ ಎಂದು ಹಂಚಿಕೊಳ್ಳುತ್ತಿರುವ ಸುದ್ದಿ ಸುಳ್ಳು.
ಇದನ್ನು ಓದಿ: ಬಜೆಟ್ ಕುರಿತ ಪ್ರಶ್ನೆಗೆ ಸಿಟ್ಟಾದ ನಿರ್ಮಲ ಸೀತಾರಾಮನ್ ಎಂದು ಹಿಂದಿನ ವರ್ಷದ ವಿಡಿಯೋ ಹಂಚಿಕೆ
ವಿಡಿಯೋ ನೋಡಿ: ಇದರ ಹೆಸರು ಜೈಂಟ್ ಆಂಟ್‌ಈಟರ್.. ಗುಬ್ಬಿಗೆ ಬಂದಿದೆ ಎಂಬುದು ಸುಳ್ಳು! | Kannada Fact Check
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.