“ಗುಬ್ಬಿ ತಾಲೂಕು ದೊಡ್ಡಗುಣಿ ಬಳಿ ಇರುವ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಕಾಣಿಸಿಕೊಂಡ ವಿಚಿತ್ರ ಪ್ರಾಣಿ. ಈ ಸೃಷ್ಟಿಯಲ್ಲಿ ಇನ್ನೂ ಏನೇನಿದೆಯೋ ಬಲ್ಲವರಾರು? ಕನಕಪುರ ಭಾಗದ ಕಾಡುಗಳಲ್ಲಿ ಕೂಡ ಈ ಮುಳ್ಳುಹಂದಿಯ ಮತ್ತೊಂದು ಪ್ರಬೇಧ ಇದೆ ಎಂದು ತಿಳಿದುಬಂದಿದೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬಿಸಲಾಗುತ್ತಿದೆ.
ಇನ್ನೂ ಕೆಲವರು ಈ ಸುದ್ದಿಯಿಂದಾಗಿ ತುಮಕೂರು ಅರಣ್ಯವಲಯದ ಸುತ್ತಮುತ್ತಲು ವಾಸಿಸುವ ಜನರಲ್ಲಿ ಆತಂಕ ಮನೆ ಮಾಡಿದೆ ಎಂದು ಬರೆದುಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಪ್ರಾಣಿ ಯಾವುದು? ಇದು ನಿಜಕ್ಕೂ ವಿಚಿತ್ರ ಪ್ರಾಣಿಯೇ ಎಂಬುದನ್ನು ಪರಿಶೀಲಿಸೋಣ
ಫ್ಯಾಕ್ಟ್‌ಚೆಕ್
ಅಸಲಿ ಈ ವಿಡಿಯೋ ನೋಡಿದ ತಕ್ಷಣವೇ ಇದು ಯಾವ ಪ್ರಾಣಿ ಎಂಬುದು ಗೊತ್ತಾಗುತ್ತದೆ. ಆದರೆ ವಿಚಿತ್ರವೆಂದರೆ ಈ ಪ್ರಾಣಿ ಭಾರತದಲ್ಲಿ ಕಂಡು ಬರಲು ಸಾಧ್ಯವೇ ಇಲ್ಲ ಇದೇ ಕಾರಣದಿಂದಾಗಿ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಈ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿತ್ತು ಅಲ್ಲಿಯೂ ಕೂಡ ನಮ್ಮ ಊಹೆ ಸರಿಯಾಗಿತ್ತು. ಈ ಪ್ರಾಣಿಯ ಹೆಸರು ಜೈಂಟ್ ಆಂಟ್‌ಈಟರ್ ( ಧೈತ್ಯ ಇರುವೆ ಭಕ್ಷಕ).
ಹಾಗಾಗಿ ಮೊದಲಿಗೆ ಇದು ವಿಚಿತ್ರ ಪ್ರಾಣಿಯಲ್ಲ ಎಂಬುದು ಖಚಿತವಾಗಿತ್ತು. ಆದರೆ ಈ ಪ್ರಾಣಿ ಇಲ್ಲಿ ಹೇಗೆ ಕಂಡು ಬಂದಿದೆ ಎಂಬ ಪ್ರಶ್ನೆ ಕಾಡೋದಕ್ಕೆ ಪ್ರಾರಂಭವಾಗಿತ್ತು. ಏಕೆಂದರೆ ಈ ಜೈಂಟ್ ಆಂಟ್‌ಈಟರ್ ಭಾರತದಲ್ಲಿ ಕಂಡು ಬಂದ ಬಗ್ಗೆ ಎಲ್ಲಿಯೂ ಪುರಾವೆಗಳೇ ಇಲ್ಲ. ಈ ಪ್ರಾಣಿ ಒಂದಷ್ಟು ವೈಶಿಷ್ಟ್ಯತೆಗಳನ್ನ ಹೊಂದಿದೆ. ಇದರ ವೈಜ್ಞಾನಿಕ ಹೆಸರು Myrmecophaga tridactyla.
ಉದ್ದ ಮೂತಿಯ ದೈತ್ಯ ಇರುವೆ ಭಕ್ಷಕ ನೋಡಲು ವಿಶಿಷ್ಟವಾಗಿದ್ದು, ಇದರಲ್ಲಿ ಮೂರು ತಳಿಗಳಿವೆ. ಒಂದೇ ಬಾರಿಗೆ ಗುಂಪು ಗುಂಪು ಇರುವೆಗಳನ್ನು ತಿನ್ನುವ ಈ ಭಕ್ಷಕ Myrmecophagidae ಗುಂಪಿಗೆ ಸೇರಿದೆ. ವೈಜ್ಞಾನಿಕ ಹೆಸರು ಮೈರಿಮ್‌ಕೊಗಾ ಟೈಡಸಿಟಿಲ್ Myrmecophaga tridactyla. ಈ ದೈತ್ಯ ಇರುವೆ ಭಕ್ಷಕಕ್ಕೆ ಹಲ್ಲಿರುವುದಿಲ್ಲ. 30 ಸಾವಿರ ಇರುವೆಗಳನ್ನು ಒಂದೇ ಬಾರಿಗೆ ಎಳೆದುಕೊಳ್ಳುವಷ್ಟು ಇದರ ನಾಲಿಗೆ ಉದ್ದ ಹಾಗೂ ತೀಕ್ಷವಾಗಿರುತ್ತದೆ.
ದಕ್ಷಿಣ ಅಮೆರಿಕದ ಬೊಲಿವಿಯಾ, ಮಧ್ಯ ಅಮೆರಿಕದ ಅರಣ್ಯಗಳು, ಹುಲ್ಲುಗಾವಲು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಕುರಿತು animal planet, discovery, national geographic ಚಾನೆಲ್‌ಗಳಲ್ಲಿ ಹಲವಾರು ವರದಿ ಪ್ರಕಟಿಸಲಾಗಿದೆ. ಇದರ ಕುರಿಗು ವಿಕಿಪೀಡಿಯಾದಲ್ಲಿ ಮಾಹಿತಿ ಪಡೆಯಬಹುದು. ಇನ್ನು ಈ ಪ್ರಾಣಿ ಗುಬ್ಬಿ ಪ್ರದೇಶದಲ್ಲಿ ಕಂಡು ಬಂದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಅಸಲಿಗೆ ಇದು ಭಾರತದಲ್ಲಿ ಕಂಡು ಬರಲು ಸಾಧ್ಯವೇ ಇಲ್ಲ. ಒಂದು ವೇಳೆ ಕಂಡು ಬಂದರು ಅದಕ್ಕೆ ಆತಂಕ ಪಡುವ ಅವಶ್ಯಕತೆಯೂ ಇಲ್ಲ ಎಂದು ತಜ್ಞರು ವಿವಿರಗಳನ್ನ ನೀಡಿದ್ದಾರೆ.
ಇದನ್ನೂ ಓದಿ : Fact Check | ಪ.ಬಂಗಾಳದ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಕೇವಲ ಮುಸ್ಲಿಂ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿಲ್ಲ
ಈ ವಿಡಿಯೋ ನೋಡಿ : Fact Check | ಪ.ಬಂಗಾಳದ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಕೇವಲ ಮುಸ್ಲಿಂ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.