ಸಾಮಾಜಿಕ ಜಾಲತಾಣದಲ್ಲಿ “ಪಶ್ಚಿಮ ಬಂಗಾಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ 2019 ರಲ್ಲಿ, ಯಾವುದೇ ಹಿಂದೂ ಆಯ್ಕೆಯಾಗಿಲ್ಲ, ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಮುಸ್ಲಿಮರು” ಎಂಬ ಸುದ್ದಿಯೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರಿನ ಪಟ್ಟಿಯನ್ನು ಕೂಡ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಸಾಕಷ್ಟು ಮಂದಿ ಈ ಬಗ್ಗೆ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಹಲವಾರು ಮಂದಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಹಾಗೂ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಾಕಷ್ಟು ಮಂದಿ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಈ ಹಲವು ಮಾಹಿತಿಗಳು ಹೊರಬಂದಿದ್ದು ವಾಸ್ತವ ಸುದ್ದಿಯನ್ನೇ ಇಲ್ಲಿ ತಿರುಚಿರುವುದು ಸ್ಪಷ್ಟವಾಗಿದೆ.
ಫ್ಯಾಕ್ಟ್‌ಚೆಕ್
ವೈರಲ್ ಆಗುತ್ತಿರುವ ಪಟ್ಟಿಯು ಪಶ್ಚಿಮ ಬಂಗಾಳದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯದ್ದೇ ಆಗಿದ್ದು, 2019 ರಲ್ಲಿ OBC-A ವರ್ಗದ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಮಾತ್ರ ಈ ವೈರಲ್ ಪಟ್ಟಿಯಲ್ಲಿ ತೋರಿಸಲಾಗಿದೆ. ಪಶ್ಚಿಮ ಬಂಗಾಳದ OBC-A ವರ್ಗದ ಅಡಿಯಲ್ಲಿ ಒಟ್ಟು 80 ಉಪ-ಜಾತಿಗಳನ್ನು ಹೊಂದಿದೆ, ಅದರಲ್ಲಿ 72 ಉಪ-ಜಾತಿಗಳು ಮುಸ್ಲಿಂ ಧರ್ಮಕ್ಕೆ ಸೇರಿದೆ ಅನ್ನೋದು ತಿಳಿದು ಬಂದಿದೆ.
ಆದ್ದರಿಂದ, OBC-A ವರ್ಗದ ಅಡಿಯಲ್ಲಿ ಆಯ್ಕೆಯಾದವರಲ್ಲಿ ಹೆಚ್ಚಿನವರು ಮುಸ್ಲಿಮರಿದ್ದಾರೆ. ಈಗ ಕೇವಲ OBC-A ವರ್ಗದ ಪಟ್ಟಿಯನ್ನು ಮಾತ್ರ ಹಂಚಿಕೊಂಡು ಇಡೀ ಪಶ್ಚಿಮ ಬಂಗಾಳದಲ್ಲಿ ಕರೆಯಲಾಗಿದ್ದ ಪೊಲೀಸ್ ಎಸ್‌ಐ ಹುದ್ದೆಗಳನ್ನು ಮುಸ್ಲಿಮರಿಗೆ ನೀಡಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.
ಆದರೆ ಸಂಪೂರ್ಣವಾಗಿ ಈ ಮಾಹಿತಿಯ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಿದಾಗ ಈ ನೇಮಕಾತಿಯಲ್ಲಿ ಇತರೆ ವರ್ಗಗಳ ಅಂದ್ರೆ OBC-B, SC, ST, UR ಅಡಿಯಲ್ಲಿ ಆಯ್ಕೆಯಾದವರಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ ಎಂಬುದು ತಿಳಿದು ಬಂದಿದೆ.
ಇದಲ್ಲದೆ, ಈ ನೇಮಕಾತಿಯಲ್ಲಿನ ಒಟ್ಟು ಆಯ್ಕೆಯಲ್ಲಿ ಹಿಂದೂಗಳು ಮುಸ್ಲಿಮರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿಯೇ ಆಯ್ಕೆಯಾಗಿದ್ದಾರೆ ಎಂಬುದು ಕೂಡ ತಿಳಿದು ಬಂದಿದೆ. ಹಾಗಾಗಿ ವೈರಲ್ ಪೋಸ್ಟ್‌ನ ಪ್ರತಿಪಾದನೆ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : Fact Check | ತನ್ನ ಸಾವಿನ ಬಗ್ಗೆ ತಾನೆ ಸುಳ್ಳು ಸುದ್ದಿ ಹರಡಿದ ನಟಿ ಪೂನಂ ಪಾಂಡೆ
ಈ ವಿಡಿಯೋ ನೋಡಿ : Fact Check | ತನ್ನ ಸಾವಿನ ಬಗ್ಗೆ ತಾನೆ ಸುಳ್ಳು ಸುದ್ದಿ ಹರಡಿದ ನಟಿ ಪೂನಂ ಪಾಂಡೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.