ಮಾಡೆಲ್ ಹಾಗೂ ಬಾಲಿವುಡ್ ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಎಂದು ಆಕೆಯ ಸೋಷಿಯಲ್ ಮೀಡಿಯಾ ತಂಡ ಶುಕ್ರವಾರ ಬೆಳಗ್ಗೆ ಇನ್ಸ್‌ಟಾಗ್ರಾಮ್‌ನಲ್ಲಿ ಹಾಕಿದ್ದ ಪೋಸ್ಟ್ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಅಲ್ಲದೇ, ಸಾವಿನ ಬಗ್ಗೆ ಹತ್ತಾರು ಗೊಂದಲಗಳು ಸೃಷ್ಟಿಯಾಗಿತ್ತು.
View this post on Instagram
ಪೂನಂ ಪಾಂಡೆ ಅವರ ಇನ್ಸ್ಟಾಗ್ರಾಮ್ನಲ್ಲಿ ಅವರ ಪೋಸ್ಟ್ ಒಂದನ್ನು ಪ್ರಕಟಿಸಿದ್ದ ಅವರ ತಂಡ, “ಇಂದು ಮುಂಜಾನೆ ಸಾಕಷ್ಟು ಕಷ್ಟಕರವಾಗಿತ್ತು. ಸರ್ವಿಕಲ್ ಕ್ಯಾನ್ಸರ್(ಗರ್ಭಕಂಠದ ಕ್ಯಾನ್ಸರ್)ನಿಂದ ನಮ್ಮ ಪ್ರೀತಿಯ ಪೂನಂ ಅವರನ್ನು ಕಳೆದುಕೊಂಡಿದ್ದೇವೆ. ಈ ದುಃಖದ ಸಂದರ್ಭದಲ್ಲಿ ನಮ್ಮ ಖಾಸಗಿತನಕ್ಕೆ ಬೆಲೆ ನೀಡಿ” ಎಂದು ಬರೆಯಲಾಗಿತ್ತು.
ಫ್ಯಾಕ್ಟ್‌ಚೆಕ್
ಈ ಕುರಿತು ಸ್ವತಃ ನಟಿ ಪೂನಂ ಪಾಂಡೆ ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, “ನಾನು ಇನ್ನೂ ಜೀವಂತವಾಗಿದ್ದೇನೆ., ಗರ್ಭಕಂಠದ ಕ್ಯಾನ್ಸರ್ ಬಗ್ಗೆ ‘ಜಾಗೃತಿ’ ಮೂಡಿಸಲು ಈ ರೀತಿ ಮಾಡಿದ್ದೇನೆ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ನಾನು ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗಿಲ್ಲ. ಆದರೆ ಇದರ ಬಗ್ಗೆ ಜನರಲ್ಲಿ ಜಾಗೃತಿ ಇಲ್ಲ. ಅದಕ್ಕಾಗಿ ಈ ರೀತಿ ನಡೆದುಕೊಂಡಿದ್ದೇನೆ. ಈ ರೋಗವು ಸಾವಿರಾರು ಮಹಿಳೆಯರ ಜೀವವನ್ನು ಬಲಿತೆಗೆದುಕೊಂಡಿದೆ. ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಲ್ಲದು. ಅದರ ಜಾಗೃತಿಗಾಗಿ ಈ ರೀತಿಯ ನನ್ನ ನಿಧನದ ಸುದ್ದಿ ಹಬ್ಬಿಸಿದ್ದೆ” ಎಂದು ಪೂನಂ ಪಾಂಡೆ ತಿಳಿಸಿದ್ದಾರೆ.
View this post on Instagram
ಇನ್ನು ಪೂನಂ ಪಾಂಡೆ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತು ಕೊಂಡಿರುವ ನಟಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮತ್ತೊಂದು ವಿಡಿಯೋವನ್ನು ಮಾಡಿದ್ದಾರೆ.
View this post on Instagram
” ನಾನು ಎಲ್ಲರಲ್ಲೂ ಕ್ಷಮೆ ಕೇಳುತ್ತಿದ್ದೇನೆ, ನಿಮ್ಮನ್ನು ಕಣ್ಣೀರು ಹಾಕಿಸಿದ್ದಕ್ಕೆ ಕ್ಷಮೆ ಇರಲಿ, ನನ್ನ ಉದ್ದೇಶ ಎಲ್ಲರನ್ನೂ ಆಘಾತಕ್ಕೆ ಒಳಪಡಿಸುವುದಾಗಿರಲಿಲ್ಲ. ನಾನು ಈ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದೆ” ಎಂದು ಹೇಳಿಕೊಂಡು ಮತ್ತೊಂದು ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : Fact Check | RSS 52 ವರ್ಷ ರಾಷ್ಟ್ರಧ್ವಜ ಹಾರಿಸದರಿಲು ಕಾರಣ ರಾಷ್ಟ್ರವಿರೋಧಿ ಭಾವನೆಯೇ ಹೊರತು ನೆಹರು ಅಲ್ಲ
ವಿಡಿಯೋ ನೋಡಿ : Fact Check | RSS 52 ವರ್ಷ ರಾಷ್ಟ್ರಧ್ವಜ ಹಾರಿಸದರಿಲು ಕಾರಣ ರಾಷ್ಟ್ರವಿರೋಧಿ ಭಾವನೆಯೇ ಹೊರತು ನೆಹರು ಅಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.