Fact Check: ಹತ್ತು ದಿನಗಳಲ್ಲಿ ಭಾರತ ತೊರೆಯುವಂತೆ UNMOGIPಗೆ ಪ್ರಧಾನಿ ಮೋದಿ ತಾಕಿತು ಮಾಡಿಲ್ಲ

ಭಾರತ-ಪಾಕಿಸ್ತಾನದ ಸಂಘರ್ಷಕ್ಕೆ ಸಂಬಂಧಿಸಿದಂತೆ ಅನೇಕ ಸುಳ್ಳು ಸುದ್ದಿಗಳು ಹಲವಾರು ವರ್ಷಗಳಿಂದ ಹರಿದಾಡುತ್ತಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂದಿಸಿದಂತೆ ಅನುಚ್ಚೇದ 370 ರದ್ದು ಗೊಳಿಸಿದ ಬಳಿಕ ಜಮ್ಮ ಮತ್ತು ಕಾಶ್ಮೀರದ ಭದ್ರತೆಗೆ ಸಂಬಂದಿಸಿದಂತೆ ಮತ್ತು ಭಾರತದ ಭದ್ರತೆಗೆ ಸಂಬಂಧಿಸಿದಂತೆ ಕೂಡ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ.

ಇತ್ತೀಚೆಗೆ, “74 ವರ್ಷಗಳ ಕಳಂಕವನ್ನು ಕೇವಲ 30 ನಿಮಿಷಗಳಲ್ಲಿ ತೆಗೆದುಹಾಕಲಾಗಿದೆ. ಭಾರತವು ಕಳೆದ 74 ವರ್ಷಗಳಿಂದ ವಿಷಕಾರಿ ಕೀಟದಿಂದ ಬಳಲುತ್ತಿದೆ, ಇದರ ಹೆಸರು ಯುನೈಟೆಡ್ ನೇಷನ್ಸ್ ಮಿಲಿಟರಿ ಅಬ್ಸರ್ವರ್ ಗ್ರೂಪ್ ಇನ್ ಇಂಡಿಯಾ ಅಂಡ್ ಪಾಕಿಸ್ತಾನ್ UNMOGIP. ಈಗ ಮೋದಿ ಸರ್ಕಾರ ಅದನ್ನು ರದ್ದು ಮಾಡಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಇದರಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ. ಕೇವಲ 30 ನಿಮಿಷಗಳಲ್ಲಿ ಈ ಸಂಪೂರ್ಣ ಸಮಿತಿಯು ಮುಂದಿನ ಹತ್ತು ದಿನಗಳಲ್ಲಿ ಭಾರತವನ್ನು ತೊರೆಯುವಂತೆ ಆದೇಶಿಸಲಾಗಿದೆ!” ಎಂಬ ಸಂದೇಶದ ಸುದ್ದಿಯೋಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಫ್ಯಾಕ್ಟ್‌ಚೆಕ್: ಜುಲೈ 8, 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಭಾರತ ಮತ್ತು ಪಾಕಿಸ್ತಾನದಲ್ಲಿನ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕ ಗುಂಪಿಗೆ (ಯುಎನ್ಎಂಜಿಐಪಿ) ರಾಜಧಾನಿಯ ಹೃದಯಭಾಗದಲ್ಲಿ ತನ್ನ ಕಚೇರಿಯನ್ನು ಹೊಂದಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಕೇಳಿತ್ತು. “ಭಾರತಕ್ಕೆ UNMOGIP ಪ್ರಸ್ತುತತೆ ಇಲ್ಲ: ದೆಹಲಿ ಕಚೇರಿ ಖಾಲಿ ಮಾಡುವಂತೆ ವಿಶ್ವಸಂಸ್ಥೆ ನಿಯೋಗಕ್ಕೆ ಸೂಚಿಸಿದ್ದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಜುಲೈ 1949 ರ ಕರಾಚಿ ಒಪ್ಪಂದದ ಅಡಿಯಲ್ಲಿ ಸ್ಥಾಪಿಸಲಾದ ಕದನ ವಿರಾಮ ರೇಖೆಯ ಮೇಲ್ವಿಚಾರಣೆಯನ್ನು ಯುಎನ್ಎಂಜಿಐಪಿ ಹೊಂದಿತ್ತು. ಶಿಮ್ಲಾ ಒಪ್ಪಂದ ಮತ್ತು 1971 ರಲ್ಲಿ ನಿಯಂತ್ರಣ ರೇಖೆ (ಎಲ್ಒಸಿ) ಸ್ಥಾಪನೆಯ ನಂತರ, ಯುಎನ್ಎಂಜಿಐಪಿ ತನ್ನ ಉಪಯುಕ್ತತೆಯನ್ನು ಮೀರಿದೆ ಮತ್ತು ಇನ್ನು ಮುಂದೆ ಪ್ರಸ್ತುತವಲ್ಲ ಎಂದು ಭಾರತ ಹೇಳಿಕೊಂಡಿದೆ.
ಶಿಮ್ಲಾ ಒಪ್ಪಂದದಲ್ಲಿ, ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ರೇಖೆಯನ್ನು ನಿಯಂತ್ರಣ ರೇಖೆಗೆ ಸ್ಥಳಾಂತರಿಸಲು ಮತ್ತು ತಮ್ಮ ವಿವಾದಗಳನ್ನು ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲದೆ ದ್ವಿಪಕ್ಷೀಯವಾಗಿ ಪರಿಹರಿಸಲು ಒಪ್ಪಿಕೊಂಡವು.

2014 ರಲ್ಲಿ, ಯುಎನ್ಎಂಜಿಐಪಿ ಕಾಶ್ಮೀರದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಭಾರತ ವಿನಂತಿಸಿತು, ಮತ್ತು ವಿದೇಶಾಂಗ ಸಚಿವಾಲಯ (ಎಂಇಎ) 2017 ರಲ್ಲಿ ಕಾಶ್ಮೀರದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಯುಎನ್ಎಂಜಿಐಪಿಗೆ ಯಾವುದೇ ಅಧಿಕಾರ ಮತ್ತು ಆದೇಶವಿಲ್ಲ ಎಂದು ಪುನರುಚ್ಚರಿಸಿತು. ಮತ್ತೊಂದೆಡೆ, ಪಾಕಿಸ್ತಾನವು ಯುಎನ್ಎಂಜಿಐಪಿ ಮಿಷನ್ ತಮ್ಮಲ್ಲಿ ನೆಲೆಗೊಂಡಿರುವುದನ್ನು ಸ್ವಾಗತಿಸುತ್ತಲೇ ಇದೆ.

ಭಾರತದ ವಿರೋಧಕ್ಕೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ, UNMOGIP ಯ ಆದೇಶ ಮತ್ತು ಕಾರ್ಯಗಳ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಭಿನ್ನಾಭಿಪ್ರಾಯವನ್ನು ಗಮನಿಸಿದರೆ, ಅದನ್ನು ಯುಎನ್ ಭದ್ರತಾ ಮಂಡಳಿಯ ನಿರ್ಧಾರದಿಂದ ಮಾತ್ರ ಕೊನೆಗೊಳಿಸಬಹುದು ಎಂದು ಹೇಳಿದ್ದಾರೆ.

ಆದ್ದರಿಂದ ಸಧ್ಯ ಹತ್ತು ದಿನಗಳಲ್ಲಿ ಭಾರತ ತೊರೆಯುವಂತೆ UNMOGIPಗೆ ಪ್ರಧಾನಿ ಮೋದಿ ತಾಕಿತು ಮಾಡಿದ್ದಾರೆ ಎಂಬುದು ಸುಳ್ಳು ಪ್ರತಿಪಾದನೆಯಾಗಿದೆ.


ಇದನ್ನು ಓದಿ: Fact Check | ವರಹಾ ಗೋಳಾಕಾರದ ಭೂಮಿಯನ್ನು ಎತ್ತಿದ್ದರು ಎಂಬುದಕ್ಕೆ ಸ್ಪಷ್ಟ ಆಧಾರಗಳಿಲ್ಲ


ವಿಡಿಯೋ ನೋಡಿ: ಮುಸ್ಲಿಂ ಒಲೈಕೆಗಾಗಿ ಇಂದಿರಾ ಗಾಂಧಿಯವರು ಹಿಜಾಬ್ ಧರಿಸಿದ್ದರು ಎಂಬುದು ಸುಳ್ಳು | Indira Gandhi


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *