“5ನೇ ಶತಮಾನದವರೆಗು ಜಗತ್ತಿನ ಜನರು ಭೂಮಿ ಚಪ್ಪಟೆಯಾಗಿದೆ ಎಂದು ನಂಬಿದ್ದರು. ಆದರೆ ಭೂಮಿ ಗೋಳಾಕಾರದಲ್ಲಿದೆ ಎಂದು ಪ್ರಾಚೀನ ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿದೆ,” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಇದು ಇತ್ತೀಚೆಗೆ ಈ ರೀತಿಯಾದ ಸುದ್ದಿ ಹೆಚ್ಚು ಹೆಚ್ಚು ಹಬ್ಬುತ್ತಿದ್ದು, ಈ ಕುರಿತು ಫ್ಯಾಕ್ಟ್‌ಲೀ ಕೂಡ ಈ ಹಿಂದೆ ವರದಿ ಮಾಡಿತ್ತು.
ಇನ್ನೂ ಕೆಲವರು ತಮ್ಮ ಆರೋಪಕ್ಕೆ ಸಾಕ್ಷಿಗಳು ಇವೆ ಎಂಬಂತೆ “ವರಹಾ ಗೋಳಾಕಾರದ ಭೂಮಿಯನ್ನು ಎತ್ತಿರುವ ವಿಗ್ರಹಗಳನ್ನು, ಚಿತ್ರಗಳನ್ನು ನೀವು ದೇವಾಲಯಗಳಲ್ಲಿ ನೋಡಬಹುದು” ಎಂದು ಕೂಡ ಹಂಚಿಕೊಳ್ಳುತ್ತಿದ್ದಾರೆ. ಮತ್ತು ಇದನ್ನೇ ತಮ್ಮ ಬಳಿ ಇರುವ ಸಾಕ್ಷಿಗಳು ಎಂದು ಬಿಂಬಿಸುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ಅಸಲಿಗೆ ಈ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ ಇದಕ್ಕೆ ಸಂಬಂಧಿಸಿದ ಹಲವಾರು ಕಪೋ ಕಲ್ಪಿತ ಕತೆಗಳು ಪತ್ತೆಯಾಗಿದ್ದವು. ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಹಲವಾರು ಚರ್ಚಾ ವಿಚಾರಗಳು ಕೂಡ ಪತ್ತೆಯಾಗಿದ್ದಾವೆ. ಇನ್ನು ಎಲ್ಲಾ ರೀತಿಯ ಪುರಾಣಗಳ ಬಗ್ಗೆ ಅನ್ವೇಶಣೆಯನ್ನ ನಡೆಸಿದಾಗ ಹಿಂದೂ ಪುರಾಣಗಳಲ್ಲಿ ಎಲ್ಲಿಯೂ ಭೂಮಿ ಚಪ್ಪಟೆ ಅಥವಾ ಗೋಳಾಕಾರದಲ್ಲಿರುವುದರ ಬಗ್ಗೆ ಉಲ್ಲೇಖವಿಲ್ಲ.
ಅದರಲ್ಲೂ ಭೂಮಿಯ ಆಕಾರ ಹೀಗೆಯೇ ಇದೆ ಎಂದು ಎಲ್ಲಿಯೂ ಉಲ್ಲೇಖವೇ ಆಗಿಲ್ಲ. ಬದಲಾಗಿ ಭೂದೇವಿಯನ್ನು ಹಿರಣ್ಯಾಕ್ಷನಿಂದ ರಕ್ಷಿಸಲು ಬರುವ ವರಹಾ ಭೂದೇವಿಯನ್ನು ಕೈಯಲ್ಲಿ ಹಿಡಿದು ಹಿರಣ್ಯಾಕ್ಷನನ್ನು ಸಂಹರಿಸುವ ಕತೆಗಳಿವೆ. ಇನ್ನು 17 ನೇ ಶತಮಾನಕ್ಕಿಂತ ಹಿಂದಿನ ದೇವಾಲಯಗಳಲ್ಲಿ ಪುರಾತನ ಶೀಲ್ಪಕಲೆಗಳು ಮತ್ತು ಅಲ್ಲಿನ ಗರ್ಭಗುಡಿಯ ವಿಗ್ರಹಗಳಲ್ಲಿಯೂ ಈ ಕುರಿತು ಮಾಹಿತಿಯಿಲ್ಲ. ಬಹುತೇಕ ದೇವಾಲಯಗಳಲ್ಲಿ ವರಹಾ ಭೂದೇವಿ ಸಮೇತ ಆಸಿನರಾಗಿರುವ ವಿಗ್ರಹಗಳೇ ಇವೆ. ಮತ್ತು ಅವುಗಳಿಗೇ ಇಂದಿಗೂ ಪೂಜೆಗಳು ನಡೆಯುತ್ತಿವೆ.
ಹೆಚ್ಚಿನ ಮಾಹಿತಿಗಾಗಿ ಹಲವು ದೇವಾಲಯಗಳ ಶಿಲ್ಪಕಲೆಗಳನ್ನು ಪರಿಶೀಲಿಸಿದಾಗ, 17ನೇ ಶತಮಾನಕ್ಕಿಂತ ಹಿಂದಿನ ದೇವಾಲಯಗಳಲ್ಲಿ ಭೂದೇವಿಯನ್ನು ಕೈಯಲ್ಲಿ ಹಿಡಿದು ವರಹಾ ರಕ್ಷಿಸುವ ಶಿಲ್ಪಕಲೆಗಳೇ ಪತ್ತೆಯಾಗಿದೆ. ಇನ್ನು ಇದೇ ರೀತಿಯ ಪೇಟಿಂಗ್‌ಗಳು ಬ್ರಿಟಿಷ್ ಮ್ಯೂಸಿಯಂನಲ್ಲಿವೆ. ಇನ್ನು ಕೆಲವೊಂದು ಕಡೆ ಅರ್ಧ ಭೂಮಿಯನ್ನ ಎತ್ತಿರುವ ವರಹಾನ ಚಿತ್ರಗಳು ಕಂಡು ಬಂದಿದ್ದು ಅದು ಕೂಡ ಇತ್ತೀಚೆಗಿನ ಶತಮಾನದ್ದಾಗಿದೆಯೇ ಹೊರತು ಪುರಾಣ ಕತೆಗಳದ್ದಲ್ಲ.ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ನಾಲ್ಕನೇ ಶತಮಾನಕ್ಕೂ ಮುನ್ನವೇ ಗೋಳಾಕಾರದ ಭೂಮಿಯನ್ನು ವರಹಾ ಎತ್ತಿದ್ದಾರೆ ಎಂಬುದಕ್ಕೆ ಯಾವುದೇ ಸ್ಪಷ್ಟ ಆಧಾರಗಳಿಲ್ಲ.
ಇದನ್ನೂ ಓದಿ : Fact Check | RSS 52 ವರ್ಷ ರಾಷ್ಟ್ರಧ್ವಜ ಹಾರಿಸದರಿಲು ಕಾರಣ ರಾಷ್ಟ್ರವಿರೋಧಿ ಭಾವನೆಯೇ ಹೊರತು ನೆಹರು ಅಲ್ಲ
ವಿಡಿಯೋ ನೋಡಿ : Fact Check | RSS 52 ವರ್ಷ ರಾಷ್ಟ್ರಧ್ವಜ ಹಾರಿಸದರಿಲು ಕಾರಣ ರಾಷ್ಟ್ರವಿರೋಧಿ ಭಾವನೆಯೇ ಹೊರತು ನೆಹರು ಅಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.