Fact Check: ಅಯೋಧ್ಯೆಯ ರಾಮ ಮಂದಿರವೆಂದು ಜಾರ್ಖಂಡ್‌ನ ಜೈನ ಮಂದಿರದ ವಿಡಿಯೋ ಹಂಚಿಕೆ

ಅಯೋಧ್ಯೆಯ ಬಾಲ ರಾಮನ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮ ಜರುಗಿದರೂ ಇನ್ನೂ ರಾಮ ಮಂದಿರದ ಕಟ್ಟುವ ಕಾರ್ಯ ಮುಂದುವರೆಯುತ್ತಲೇ ಇದೆ. ಹೀಗಾಗಲೇ ರಾಮ ಮಂದಿರದ ದೇವಾಲಯಕ್ಕೆ ಸಂಬಂದಿಸಿದಂತೆ ಹಲವಾರು ವಿಡೀಯೋಗಳು, ಪೋಟೋಗಳು ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವುಗಳಲ್ಲಿ ಕೆಲವು ಇತರ ದೇವಾಲಯದ ವಿಡಿಯೋಗಳು ಸೇರಿವೆ. ಇದಕ್ಕೆ ನಿದರ್ಶನವೆಂಬಂತೆ.

ಈಗ “ಹೊಸದಾಗಿ ನಿರ್ಮಿಸಲಾದ ಅಯೋಧ್ಯೆಯ ರಾಮ ಮಂದಿರದ ದೃಶ್ಯಗಳು” ಎಂಬ ವಿಡಿಯೋ ಒಂದು ಇನ್ಟಾಗ್ರಾಮ್ ನಲ್ಲಿ ಹರಿದಾಡುತ್ತಿದೆ. ಇದನ್ನು ಏಳುವರೆ ಸಾವಿರದಷ್ಟು ಜನ ವೀಕ್ಷಿಸಿದ್ದಾರೆ.

ಫ್ಯಾಕ್ಟ್‌ಚೆಕ್: ವೈರಲ್ ವೀಡಿಯೊವನ್ನು ರೋಹನ್ ಜೈನ್ ಎಂಬ ಇನ್ಟಾಗ್ರಾಮ್ ಬಳಕೆದಾರರು ಮೊದಲು ಡಿಸೆಂಬರ್ 29, 2023 ರಂದು ಅಪ್ಲೋಡ್ ಮಾಡಿದ್ದಾರೆ. ಇದು ಜಾರ್ಖಂಡ್‌ನ ಮಧುಬನ್‌ನಲ್ಲಿರುವ ಶ್ರೀ ಸಮ್ಮೇದ್ ಶಿಖರ್ಜಿ ತಲೇಟಿ ತೀರ್ಥ ಎಂಬ ಜೈನ ಮಂದಿರವಾಗಿದ್ದು, ಜೈನರ 23ನೇ ತೀರ್ಥಕಂರರಾದ ಪಾರ್ಶ್ವನಾಥರಿಗೂ ಸಹ ಈ ದೇವಸ್ಥಾನವನ್ನು ಸಮರ್ಪಿಸಲಾಗಿದೆ ಎಂದು ರಾಹುಲ್ ಜೈನ್ ವಿವರಣೆಯಲ್ಲಿ ಹೇಳಿದ್ದಾರೆ.

ಶ್ರೀ ಸಮ್ಮೇದ್ ಶಿಖರ್ಜಿ ತಲೇಟಿ ತೀರ್ಥವು ಜಾರ್ಖಂಡ್‌ನ ಪರಸ್ನಾಥ್ ಬೆಟ್ಟಗಳ ತಪ್ಪಲಿನಲ್ಲಿ ಹೊಸದಾಗಿ ನಿರ್ಮಿಸಲಾದ ಜೈನ ದೇವಾಲಯವಾಗಿದೆ. ಈ ಸ್ಥಳವು 31 ದೇವಾಲಯಗಳನ್ನು ಒಳಗೊಂಡಿದ್ದು, ಪ್ರತಿಯೊಂದೂ ವಿಭಿನ್ನ ತೀರ್ಥಂಕರ ಅಥವಾ ಜೈನ ಸಂತರಿಗೆ ಸಮರ್ಪಿತವಾಗಿದೆ. 23 ನೇ ತೀರ್ಥಂಕರರಾದ ಪಾರ್ಶ್ವನಾಥನು ಮೋಕ್ಷವನ್ನು ಪಡೆದ ಜಲ ಮಂದಿರವು ಪ್ರಾಥಮಿಕ ದೇವಾಲಯವಾಗಿದೆ. ದೇವಾಲಯದ ಸಾಮಾಜಿಕ ಮಾಧ್ಯಮ ಖಾತೆಗಳು ಈ ಹಿಂದೆ ವೈರಲ್ ವೀಡಿಯೊದಲ್ಲಿ ಕಂಡುಬರುವ ತಿರುಗುವ ಕಂಬಗಳ ವೀಡಿಯೊಗಳನ್ನು (ಇಲ್ಲಿ ಮತ್ತು ಇಲ್ಲಿ) ಹಂಚಿಕೊಂಡಿವೆ.

ಆದ್ದರಿಂದ ಸಧ್ಯ ಅಯೋಧ್ಯೆಯ ರಾಮ ಮಂದಿರ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಜಾರ್ಖಂಡಿನ ಜೈನ ಮಂದಿರವಾಗಿದೆ.


ಇದನ್ನು ಓದಿ: Fact Check | ಬಾಲರಾಮ ಮೂರ್ತಿಗೆ ಶಿಲೆ ಕೊಟ್ಟ ರೈತನಿಗೆ ದಂಡ? – ಅಸಲಿ ವಿಷಯ ಇಲ್ಲಿದೆ


ವಿಡಿಯೋ ನೋಡಿ: ಮುಸ್ಲಿಂ ಒಲೈಕೆಗಾಗಿ ಇಂದಿರಾ ಗಾಂಧಿಯವರು ಹಿಜಾಬ್ ಧರಿಸಿದ್ದರು ಎಂಬುದು ಸುಳ್ಳು | Indira Gandhi


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *