Fact Check | RSS 52 ವರ್ಷ ರಾಷ್ಟ್ರಧ್ವಜ ಹಾರಿಸದರಿಲು ಕಾರಣ ರಾಷ್ಟ್ರವಿರೋಧಿ ಭಾವನೆಯೇ ಹೊರತು ನೆಹರು ಅಲ್ಲ

“1950ರಲ್ಲಿ ನೆಹರು ಧ್ವಜ ಸಂಹಿತೆ ಜಾರಿಗೊಳಿಸಿ ಖಾಸಗಿ ಸ್ಥಳಗಳಲ್ಲಿ ರಾಷ್ಟ್ರಧ್ವಜ ಹಾರಿಸಿದರೆ 6 ತಿಂಗಳ ಶಿಕ್ಷೆ ಕಾನೂನು ತಂದಿದ್ದರು. ಆ ಕಾರಣಕ್ಕೆ RSS ತನ್ನ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸಿರಲಿಲ್ಲ. 2002 ರಲ್ಲಿ ವಾಜಪೇಯಿಯವರು ಪರಿಷ್ಕೃತ ಧ್ವಜ ಸಂಹಿತೆಯನ್ನು ಘೋಷಿಸಿದ ನಂತರ RSS ತನ್ನ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸುತ್ತಿದೆ.” ಎಂಬ ಸುಳ್ಳು ಸುದ್ದಿಯೊಂದು ವ್ಯಾಪಕವಾಗಿ ಸದ್ದು ಮಾಡುತ್ತಿದೆ.

ಆರ್‌ಎಸ್‌ಎಸ್‌ ಸಂಘಟನೆ ಕಳೆದ 52 ವರ್ಷಗಳಿಂದ ತನ್ನ ಶಾಖೆಯ ಪ್ರಧಾನ ಕಚೇರಿಯ ಮೇಲೆ ರಾಷ್ಟ್ರ ಧ್ವಜ ಹಾರಿಸದಿರುವ ಬಗ್ಗೆ ಪ್ರಶ್ನೆಗಳು ಉದ್ಭವವಾಗುತ್ತಿದ್ದಂತೆ ಇದೀಗ ಇಂತಹದೊಂದು ಸುಳ್ಳು ಸುದ್ದಿಯನ್ನ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿಬಿಡಲಾಗ್ತಾ ಇದೆ. ಹೀಗಾಗಿ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್‌

ಈ ಕುರಿತು ಸುದ್ದಿ ಹಬ್ಬುತ್ತಿದ್ದಂತೆ ಈ ಬಗ್ಗೆ ವಿವಿಧ ಕೀ ವರ್ಡ್ಸ್‌ಗನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ 2002ಕ್ಕೂ ಮೊದಲು ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಚಾರಣೆ ಮತ್ತು ಗಾಂಧಿ ಜಯಂತಿ ದಿನಗಳಲ್ಲಿ ಯಾರು, ಎಲ್ಲಿ ಬೇಕಾದರೂ ರಾಷ್ಟ್ರಧ್ವಜ ಹಾರಿಸಬಹುದು ಎಂದು ಫ್ಲ್ಯಾಗ್ ಕೋಡ್-ಇಂಡಿಯಾ 15-06-1971ರ ದಿನಾಂಕದ ಗೃಹ ವ್ಯವಹಾರಗಳ ಸಚಿವರ ಪತ್ರದಲ್ಲಿ ತಿಳಿಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಹೀಗಿದ್ದರೂ ಕೂಡ RSS ಗೆ ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಗಣರಾಜ್ಯದ ಬಗ್ಗೆ ನಂಬಿಕೆಯಿಲ್ಲದ ಕಾರಣ ರಾಷ್ಟ್ರಧ್ವಜ ಹಾರಿಸದೇ ತನ್ನ ಧ್ವಜ ಹಾರಿಸುತ್ತಿತ್ತು. ಜನವರಿ 15, 2002 ರಂದು, ಕೇಂದ್ರ ಸಚಿವ ಸಂಪುಟವು ಡಾ.ಪಿ.ಡಿ ಅವರ ವರದಿಯ ಪ್ರಕಾರ ಎಲ್ಲಾ ದಿನ ರಾಷ್ಟ್ರಧ್ವಜ ಹಾರಿಸಬಹುದು ಎಂಬು ನಿರ್ಣಯ ಅಂಗೀಕರಿಸಿತು ಅಷ್ಟೇ.

2001ರಲ್ಲಿ ಮೊಟ್ಟ ಮೊದಲ ಬಾರಿಗೆ ರಾಷ್ಟ್ರಪ್ರೇಮಿ ಯುವ ದಳ ಸಂಘಟನೆಯ ಕೆಲವರು ನಾಗ್‌ಪುರದಲ್ಲಿನ ಆರ್‌ಎಸ್‌ಎಸ್‌ ಕಚೇರಿಗೆ ತೆರಳಿ ಒತ್ತಾಯ ಪೂರ್ವಕವಾಗಿ ಆರ್‌ಎಸ್‌ಎಸ್‌ ಧ್ವಜವನ್ನು ಹಾರಿಸಿದ್ದರು, ಇದಾದ ಬಳಿಕ 2002ರಲ್ಲಿ ಮೊದಲ ಬಾರಿಗೆ ಸ್ವಯಂ ಪ್ರೇರಿತವಾಗಿ ಆರ್‌ಎಸ್‌ಎಸ್‌ ರಾಷ್ಟ್ರ ಧ್ವಜವನ್ನು ಹಾರಿಸಿತ್ತೆ ವಿನಃ ಅದಕ್ಕಿಂತ ಹಿಂದೆ ಎಂದಿಗೂ ಸಂಘ ಪರಿವಾರ ಅದರ ಪ್ರಧಾನ ಕಚೇರಿಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿರಲಿಲ್ಲ.


ಇದನ್ನೂ ಓದಿ : ಮುಸ್ಲಿಂ ಒಲೈಕೆಗಾಗಿ ಇಂದಿರಾ ಗಾಂಧಿಯವರು ಹಿಜಾಬ್ ಧರಿಸಿದ್ದರು ಎಂಬುದು ಸುಳ್ಳು


ಈ ವಿಡಿಯೋ ನೋಡಿ :  ಮುಸ್ಲಿಂ ಒಲೈಕೆಗಾಗಿ ಇಂದಿರಾ ಗಾಂಧಿಯವರು ಹಿಜಾಬ್ ಧರಿಸಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *