ಕಳೆದೊಂದು ದಶಕಗಳಿಂದ ಪಂಡಿತ್ ಜವಹರಲಾಲ್ ನೆಹರು ಅವರ ಕುಟುಂಬದ ಮೇಲೆ ಸುಳ್ಳು ಆಪಾದನೆಗಳಿಂದ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ನೆಹರೂ ಅವರ ಕುಟುಂಬ ಕಾಶ್ಮೀರಿ ಪಂಡಿತರಾಗಿರದೆ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಪ್ರತಿಪಾದಿಸಿ ಪ್ರತಿದಿನ ಹಲವಾರು ಸುಳ್ಳುಗಳನ್ನು ಹಂಚಿಕೊಳ್ಳಲಾಗುತ್ತಿದೆ. ಬಿಜೆಪಿ ಬೆಂಬಲಿಗರು ಮತ್ತು ಬಲಪಂಥಿಯರು ಈ ಸುಳ್ಳನ್ನೇ ಜನರ ನಡುವೆ ಹರಿಬಿಡುತ್ತಿದ್ದಾರೆ.
ಇದರ ಭಾಗವಾಗಿ ಇತ್ತೀಚೆಗೆ, “ಬುರ್ಖಾ ಮತ್ತು ಹಿಜಾಬ್‌ನಲ್ಲಿ ಇಂದಿರಾ ಖಾನ್ ಮತ್ತು ಮುಸಲ್ಮಾನರ ಕ್ಯಾಪ್ ಧರಿಸಿರುವ ರಾಹುಲ್ ಖಾನ್ . ಇವರು ಇಡೀ ಹಿಂದೂಗಳನ್ನು ಮೂರ್ಖರನ್ನಾಗಿ ಮಾಡಿದ್ದಾರೆ” ಎಂಬ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫ್ಯಾಕ್ಟ್‌ಚೆಕ್: ಈ ಚಿತ್ರವನ್ನು 2020ರಲ್ಲಿ ಮುಂಬೈ ಮಿರರ್ ಫೋಟೋ ಸ್ಟೋರಿಯಲ್ಲಿ ಸೋನಿಯಾ ಗಾಂಧಿಯವರ ಅಪರೂಪದ ಫೋಟೋಗಳು ಎಂಬ ಶಿರ್ಷಿಕೆ ಅಡಿಯಲ್ಲಿ ಪ್ರಕಟಿಸಲಾಗಿದೆ. ಫೋಟೋವನ್ನು ಡಿ ಕುಮಾರ್ ಮತ್ತು BCCL (ಬೆನೆಟ್, ಕೋಲ್ಮನ್ ಮತ್ತು ಕಂಪನಿ ಲಿಮಿಟೆಡ್) ಟೈಮ್ಸ್ ಆಫ್ ಇಂಡಿಯಾ ಗುಂಪಿನ ಮೂಲ ಕಂಪನಿಗೆ ಕ್ರೆಡಿಟ್ ನೀಡಲಾಗಿದೆ.
ಟೈಮ್ಸ್ ಆಫ್ ಇಂಡಿಯಾ ಫೋಟೋ ಆರ್ಕೈವ್ಸ್‌ನಲ್ಲಿ ಇಂದಿರಾ ಗಾಂಧಿಯವರ ಪೋಟೋಗಳಿಗಾಗಿ ನಾವು ಕಸ್ಟಮ್ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ಇದೇ ಚಿತ್ರದ ಪೂರ್ಣ ಆವೃತ್ತಿಯೊಂದು ಸಿಕ್ಕಿದೆ. ಮೇ 09, 1971 ರಂದು “ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಮೊಮ್ಮಗ ಪುಟಾಣಿ ರಾಹುಲ್ ಜೊತೆಗೆ ಅವರ ತಾಯಿ ಸೋನಿಯಾ ಗಾಂಧಿಯವರು ನವದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಫೋಟೊವನ್ನು ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಇಂದಿರಾಗಾಂಧಿ ಸೀರೆಯನ್ನು ಧರಿಸಿರುವುದನ್ನು ನೋಡಬಹುದಾಗಿದ್ದು, ಅದರ ನೆರಿಗೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅವರ ತಲೆಯ ಮೇಲಿನ ಬಟ್ಟೆಯ ಮಾದರಿಯು ಸೀರೆಯ ಸೆರಗನ್ನು ತಲೆಗೆ ಸುತ್ತಿಕೊಂಡಿರುವುದು ಸ್ಪಷ್ಟವಾಗಿದೆ ಮತ್ತು ಅದು ಸೀರೆಗೆ ಹೊಂದಿಕೆಯಾಗುತ್ತದೆ. ಇದರಿಂದ ಇಂದಿರಾ ಗಾಂಧಿ ಅವರು ಹಿಜಾಬ್ ಅಥವಾ ಬುರ್ಖಾವನ್ನು ಧರಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಪುಟಾಣಿ ರಾಹುಲ್ ಗಾಂಧಿ ಧರಿಸಿರುವ ಕ್ಯಾಪಿನ ಫೋಟೋಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ವೈರಲ್ ಆಗಿರುವ ಚಿತ್ರದಲ್ಲಿ ರಾಹುಲ್ ಗಾಂಧಿ ಧರಿಸಿರುವ ಕ್ಯಾಪ್ ಮಾದರಿಯನ್ನು ಪರಿಶೀಲಿಸಲು ನಮಗೆ ಸಾಧ್ಯವಾಗಲಿಲ್ಲ. ಆದರೆ ಇದಾವುದು ಮುಸ್ಲಿಂ ಓಲೈಕೆಗಾಗಿ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಆಧಾರವೂ ಇಲ್ಲ.
ಆದ್ದರಿಂದ ಸಧ್ಯ ವೈರಲ್ ಆಗುತ್ತಿರುವ ಫೋಟೋದಲ್ಲಿ ಇಂದಿರಾಗಾಂಧಿಯವರು ತನ್ನ ಸೀರೆಯ ಸೆರಗನ್ನೆ ತಲೆಯ ಮೇಲೆ ಹೊದ್ದುಕೊಂಡಿದ್ದಾರೆಯೇ ಹೊರತು ಹಿಜಾಬ್ ಧರಿಸಿಲ್ಲ.
ಇದನ್ನು ಓದಿ: Fact Check : ಮೆಕ್ಕಾದ ಮಸೀದಿ ಅಲ್-ಹರಾಮ್‌ನಲ್ಲಿ ಮುಸಲ್ಮಾನರು ರಾಮ ನಾಮ ಜಪಿಸಿದ್ದಾರೆಂಬುದು ಸುಳ್ಳು
ವಿಡಿಯೋ ನೋಡಿ: ಬಾಲರಾಮ ಮೂರ್ತಿಗೆ ಶಿಲೆ ಕೊಟ್ಟ ರೈತನಿಗೆ ದಂಡ? – ಅಸಲಿ ವಿಷಯ ಇಲ್ಲಿದೆ | Fact Check
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.