Fact Check: ಸೋನಿಯಾ ಗಾಂಧಿ ಯೌವ್ವನದ ಪೋಟೋ ಎಂದು ಜೇಮ್ಸ್ ಬಾಂಡ್ ಸರಣಿಯ ಉರ್ಸುಲಾ ಆಂಡ್ರೆಸ್ ನಟಿಯ ಕೊಲಾಜ್ ಹಂಚಿಕೆ

ಎರಡು ಚಿತ್ರಗಳ ಕೊಲಾಜ್ ಒಂದು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಒಂದು ಕಡೆ ರಾಜ್ಯಸಭಾ ಸಂಸದೆ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಚಿತ್ರವನ್ನು ಬಳಸಲಾಗಿದೆ. ಮತ್ತೊಂದೆಡೆ, ವಿದೇಶಿ ನಟಿಯ ಚಿತ್ರವನ್ನು ಬಳಸಲಾಗಿದೆ. ಈ ಕೊಲಾಜ್ ವೈರಲ್ ಆಗುತ್ತಿದ್ದಂತೆ, ಅದರಲ್ಲಿನ ಮೊದಲ ಚಿತ್ರ ಸೋನಿಯಾ ಗಾಂಧಿ ಅವರದು ಎಂದು ಹೇಳಲಾಗುತ್ತಿದೆ. ಮೊದಲ ಚಿತ್ರವು ಅವರ ಯೌವನದದು ಎಂದು ಸಹ ಹೇಳಲಾಗುತ್ತಿದೆ. ಎರಡು ಚಿತ್ರಗಳ ಕೊಲಾಜ್ ಅನ್ನು ನೇಷನ್ ಫಸ್ಟ್ ಎಂಬ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ….

Read More

Fact Check: ಸೋನಿಯಾ ಗಾಂಧಿಯವರ AI ರಚಿತ ಪೋಟೋವನ್ನು ನಿಜವೆಂದು ಹಂಚಿಕೊಳ್ಳಲಾಗುತ್ತಿದೆ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಿಗರೇಟ್ ಹಿಡಿದಿರುವ ಕಪ್ಪು-ಬಿಳುಪು ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ಬಳಕೆದಾರ ಸರ್ವೇಶ್ ಕುಟ್ಲೆಹ್ರಿಯಾ ಜುಲೈ 12 ರಂದು ಹಿಂದಿಯಲ್ಲಿ ಚಿತ್ರವನ್ನು ಹಂಚಿಕೊಂಡಿದ್ದು, “ಇದನ್ನು ಗುರುತಿಸುವ ವ್ಯಕ್ತಿಗೆ 8500 ಖಾತಾ ಖಟ್ ಟಕಾ ತಕ್ ಸಿಗುತ್ತದೆ” ಎಂದು ಬರೆದಿದ್ದಾರೆ. ಈ ಪೋಸ್ಟ್‌ಗೆ 20,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 5,900 ಶೇರ್‌ಗಳು ಬಂದಿವೆ. ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಹಲವಾರು ಇತರ ಬಳಕೆದಾರರು ಅದೇ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕೆಲವು ಉದಾಹರಣೆಗಳು ಈ ಕೆಳಗಿನಂತಿವೆ.   ಫ್ಯಾಕ್ಟ್ ಚೆಕ್:…

Read More
ದೆಹಲಿ ವಿಮಾನ ನಿಲ್ದಾಣ

Fact Check: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರ ಉದ್ಘಾಟನೆ ಚಿತ್ರವನ್ನು ಎಡಿಟ್ ಮಾಡಿ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಮಾಜಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರು ನವದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡಿರುವ ಚಿತ್ರವು ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐಎ) ಟರ್ಮಿನಲ್ 1 ಅನ್ನು ಜಿಎಂಆರ್ ನಿರ್ಮಿಸಿದೆ ಮತ್ತು ಜುಲೈ 3, 2010 ರಂದು ಅವರು ಉದ್ಘಾಟಿಸಿದರು…

Read More

Fact Check | ಅನುರಾಗ್ ಠಾಕೂರ್ ಪ್ರಶ್ನೆಗೆ ಉತ್ತರಿಸಲು ರಾಹುಲ್ ಗಾಂಧಿ ವಿಫಲ ಎಂಬುದು ಎಡಿಟೆಡ್‌ ವಿಡಿಯೋವಾಗಿದೆ

ಸಾಮಾಜಿ ಜಾಲತಾಣದಲ್ಲಿ ” ಈ ವಿಡಿಯೋ ನೋಡಿ ಅನುರಾಗ್‌ ಠಾಕೂರ್‌ ಅವರು ವಿಪಕ್ಷಗಳಿಗೆ ಅದರಲ್ಲೂ ಪ್ರಮುಖವಾಗಿ ರಾಹುಲ್‌ ಗಾಂಧಿ ಅವರಿಗೆ ಮೊನಚಾದ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಯಲ್ಲಿ ಅವರು ” ನಾನು ನಿಮಗೆ ಒಂದು ವಿಷಯ ಕೇಳಲು ಬಯಸುತ್ತೇನೆ, ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಈ ಹಲವು, ಈ ಹಲವು ಎಂದು ಹೇಳಬೇಡಿ, ಎಷ್ಟು ಪುಟಗಳಿವೆ ಎಂದು ಹೇಳಿ? ನೀವು ಅದನ್ನು (ಸಂವಿಧಾನದ ಪ್ರತಿ) ಪ್ರತಿದಿನ ಒಯ್ಯುತ್ತೀರಿ, ನೀವು ಎಂದಾದರೂ ಅದನ್ನು ತೆರೆದು ಓದುತ್ತೀರಾ? ನೀವು ಅದನ್ನು ಓದುವುದಿಲ್ಲ,…

Read More

Fact Check | ಎಡಿಟ್ ವಿಡಿಯೋ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿ ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ.!

ಸಾಮಾಜಿಕ ಜಾಲತಾಣದಲ್ಲಿ ” ಮಲ್ಲಿಕಾರ್ಜುನ ಖರ್ಗೆಯವರನ್ನು ಸದನಕ್ಕೆ ಆರಿಸಿ ಕಳುಹಿಸಿದ ಮತದಾರರಿಗೆ ಮಲ್ಲಿಕಾರ್ಜುನ ಖರ್ಗೆ ಅವರೇ ಅವಮಾನ ಮಾಡಿದ್ದಾರೆ. ಈ ವಿಡಿಯೋ ನೋಡಿ. ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ನಾನು ಈ ಸ್ಥಾನಕ್ಕೆ ಬರಲು ಸೋನಿಯಾ ಗಾಂಧಿ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ಇವರನ್ನು ಆರಿಸಿ ಕಳುಹಿಸಿದ ಮತದಾರರಿಗೆ ಇವರು ಅವಮಾನ ಮಾಡಿದ್ದಾರೆ.” ಎಂಬ ರೀತಿಯ ಹಲವು ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನೇ ಆಧಾರವಾಗಿರಿಸಿಕೊಂಡು ಟಿವಿ ವಿಕ್ರಮ ತನ್ನ ಯುಟ್ಯುಬ್‌…

Read More

Fact Check | 2007ರ T-20 ವಿಶ್ವಕಪ್ ವಿಜೇತ ಭಾರತ ತಂಡವನ್ನು ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಭೇಟಿ ಮಾಡಿಲ್ಲವೆಂಬುದು ಸುಳ್ಳು

“ಭಾರತ ಕ್ರಿಕೆಟ್ ತಂಡ 2007ರಲ್ಲಿ ವಿಶ್ವಕಪ್ ಗೆದ್ದಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದರು ಮತ್ತು ರಾಜೀವ್ ಶುಕ್ಲಾ ಅವರು ಬಿಸಿಸಿಐನ ಹಂಗಾಮಿ ಅಧ್ಯಕ್ಷರಾಗಿದ್ದರು. ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಬದಲಿಗೆ ಸೂಪರ್ ಪಿಎಂ ಸೋನಿಯಾ ಗಾಂಧಿ ಅವರೊಂದಿಗೆ ಅಂದು ಫೋಟೋ ಶೂಟ್ ಮಾಡಿಸಲಾಗಿದೆ. ಆಗ ಯಾವ ಪತ್ರಕರ್ತರೂ ಭಾರತದ ಕ್ರಿಕೆಟ್ ತಂಡದ ಜೊತೆ ಫೋಟೋ ಶೂಟ್ ಮಾಡಿಕೊಳ್ಳುತ್ತಿರುವ ಸೋನಿಯಾ ಗಾಂಧಿ ಯಾರು ಎಂಬ ಪ್ರಶ್ನೆಯನ್ನು ಎತ್ತಲಿಲ್ಲ. ತುಚ್ಛವಾದ ಕಾಂಗ್ರೆಸ್ ಭಾರತದಲ್ಲಿ ಎಷ್ಟು ಸರ್ವಾಧಿಕಾರವನ್ನು ತೋರಿಸಿದೆ ಮತ್ತು ಅದು…

Read More
ಸುಪ್ರಿಯಾ ಶ್ರಿನಾಟೆ

Fact Check: ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನಾಟೆ ಅವರು 2012 ರಲ್ಲಿ ಸೋನಿಯಾ ಗಾಂಧಿ ಅವರನ್ನು ಅವಮಾನಿಸಿದ್ದಾರೆ ಎಂಬುದು ಸುಳ್ಳು

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನಾಟೆ ಅವರು 2012 ರಲ್ಲಿ ಸೋನಿಯಾ ಗಾಂಧಿ ಅವರನ್ನು ಅವಮಾನಿಸಿದ್ದಾರೆ ಎಂದು ಹೇಳಲಾದ ಟ್ವಿಟ್‌ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಗಿರುವ ಟ್ವಿಟ್‌ನ ಸ್ಕ್ರೀನ್ ಶಾಟ್ ಏಪ್ರಿಲ್ 24, 2012 ರ ದಿನಾಂಕದ್ದಾಗಿದ್ದು, ಶ್ರಿನಾಟೆ ಸೋನಿಯಾ ಗಾಂಧಿ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. “ಇಟಲಿಯ ಎಲ್ಲಾ ಡ್ಯಾನ್ಸ್ ಬಾರ್ ಗಳು ಮುಚ್ಚಲ್ಪಟ್ಟಿವೆಯೇ?” ಎಂದು ಅವರು ಶೀರ್ಷಿಕೆ ನೀಡಿದ್ದರು ಎಂದು ಹಂಚಿಕೊಳ್ಳಾಗುತ್ತಿದೆ. “ಸೋನಿಯಾ ಗಾಂಧಿ ಇಟಲಿಯಲ್ಲಿ ನೃತ್ಯಗಾರ್ತಿಯಾಗಿದ್ದರು, ನಾನು ಇದನ್ನು…

Read More
ಕಂಗನಾ ರನೌತ್

Fact Check: ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ CISF ಕಾನ್‌ಸ್ಟೆಬಲ್ ಜೊತೆ ಗಾಂಧಿ ಕುಟುಂಬ ಪೋಟೋ ತೆಗೆಸಿಕೊಂಡಿಲ್ಲ

ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಮತ್ತು ಸಂಸದೆ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದು ಕೆಲವು ದಿನಗಳ ನಂತರ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆ ಮಹಿಳೆಯೊಂದಿಗೆ ಚಿತ್ರ ತೆಗೆಸಿಕೊಂಡಿರುವ ಪೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದೆ. ಗಾಂಧಿ ಕುಟುಂಬದೊಂದಿಗೆ ಪೋಸ್ ನೀಡುತ್ತಿರುವ ಮಹಿಳೆ ರನೌತ್‌ಗೆ ಕಪಾಳ ಮೋಕ್ಷ ಮಾಡಿದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಎಂದು ಹೇಳಲಾಗುತ್ತಿದೆ.  ಹಿಂದಿಯಲ್ಲಿ ಚಿತ್ರದೊಂದಿಗೆ ಶೀರ್ಷಿಕೆ ಹೀಗಿದೆ:…

Read More

Fact Check | ಸಚಿವ ಎಂ.ಬಿ ಪಾಟೀಲ್‌ ವಿರುದ್ಧ ಮಹೇಶ್‌ ವಿಕ್ರಮ್‌ ಹೆಗ್ಡೆ ಹರಡಿದ್ದ ಸುಳ್ಳು ಸುದ್ದಿ ಮತ್ತೊಮ್ಮೆ ವೈರಲ್‌

ಕರ್ನಾಟಕದ ಕಾಂಗ್ರೆಸ್‌ನ ನಾಯಕ ಹಾಗೂ ಸಚಿವ ಡಾ.ಎಂ.ಬಿ ಪಾಟೀಲ್ ಅವರು, ಸೋನಿಯಾ ಗಾಂಧಿಯವರಿಗೆ 10 ಜುಲೈ 2018ರಂದು BLDEA ( ಬಿಜಾಪುರ ಲಿಂಗಾಯತ ಡಿಸ್ಟ್ರಿಕ್ಟ್ ಎಜುಕೇಶನಲ್ ಅಸೋಸಿಯೇಷನ್)  ಲೆಟರ್ ಹೆಡ್ ಮೂಲಕ ಪತ್ರ ಬರೆದಿದ್ದಾರೆ ಎನ್ನಲಾದ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪತ್ರದಲ್ಲಿ “ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ಹಿಂದುಗಳನ್ನು ವಿಭಜಿಸಿ ಮುಸ್ಲಿಮರನ್ನು ಒಗ್ಗೂಡಿಸುವ ತಂತ್ರವನ್ನು ಅಳವಡಿಸಿಕೊಂಡಿದೆ ಮತ್ತು ಆ ಮೂಲಕ ಯಶಸ್ಸನ್ನ ಸಾಧಿಸಲಿದೆ ಎಂದು ವೈರಲ್‌ ಪತ್ರದಲ್ಲಿ ಉಲ್ಲೇಖಿಸಲಾಗಿದೆ. Look carefully what…

Read More

Fact Check | ರಾಹುಲ್ ಮತ್ತು ಸೋನಿಯಾ ಗಾಂಧಿಯ ಹಿಂದಿನ ಫೋಟೋ ಯೇಸುಕ್ರಿಸ್ತನದ್ದು ಎಂಬುದು ಸುಳ್ಳು

“ರಾಹುಲ್‌ ಗಾಂಧಿ ತಮ್ಮ ಕೊಠಡಿಯಲ್ಲಿ ಜೀಸಸ್‌ ಫೋಟೋವನ್ನು ಇಟ್ಟುಕೊಳ್ಳುತ್ತಾರೆ. ಆದರೆ ಒಂದೇ ಒಂದು ಹಿಂದೂ ದೇವರ ಫೋಟೋ ಅಲ್ಲಿ ಕಾಣಿಸುವುದಿಲ್ಲ. ಕಾಂಗ್ರೆಸ್‌ನವರಿಗೆ ಹಿಂದೂಗಳ ವೋಟ್‌ ಬೇಕು. ಆದರೆ ಅವರಿಗೆ ಹಿಂದೂಗಳು ಮತ್ತು ಹಿಂದೂಗಳ ದೇವರು ಬೇಡ” ಎಂದು ರಾಹುಲ್‌ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ತೆಗೆದ ಫೋಟೋದಲ್ಲಿ ಕಾಣಿಸಿಕೊಂಡ ಚಿತ್ರವೊಂದನ್ನು ಉಲ್ಲೇಖಿಸಿ ಸಾಕಷ್ಟು ಮಂದಿ ಪೋಸ್ಟ್‌ ಮಾಡುತ್ತಿದ್ದಾರೆ. "Janeudhari Brahmin" Rahul Gandhi has Jesus's picture in his room…. No…

Read More