Fact Check: ಸುರಂಗವೊಂದಕ್ಕೆ ಸೋನಿಯಾ ಗಾಂಧಿ ಹೆಸರು ಇಡಲಾಗಿದೆ ಎಂದು ಪೋಟೋ ಎಡಿಟ್ ಮಾಡಿ ವೈರಲ್ ಮಾಡಲಾಗುತ್ತಿದೆ
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರಿನ ಸುರಂಗದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸುರಂಗಕ್ಕೆ ಸೋನಿಯಾ ಗಾಂಧಿ ಅವರ ಹೆಸರನ್ನು ಇಡಲಾಗಿದೆ ಎಂದು ಅನೇಕ ಬಳಕೆದಾರರು ಪ್ರತಿಪಾದಿಸುತ್ತಾರೆ. ಈ ಚಿತ್ರವನ್ನು ಶೇರ್ ಮಾಡಿರುವ ಫೇಸ್ಬುಕ್ ಬಳಕೆದಾರರೊಬ್ಬರು, “ಇದು ಎಲ್ಲಿದೆ, ಮತ್ತು ಅದಕ್ಕೆ ಯಾರು ಹೆಸರಿಟ್ಟರು?” ಎಂದು ಕೇಳುತ್ತಾರೆ. ಇದೇ ರೀತಿಯ ಪ್ರತಿಪಾಧನೆಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. (ಆರ್ಕೈವ್ ಮಾಡಿದ ಲಿಂಕ್) ಫ್ಯಾಕ್ಟ್ ಚೆಕ್ ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ, ಅದು ಸುಳ್ಳು ಎಂದು ಕಂಡುಬಂದಿದೆ. ಫೋಟೋದ ರಿವರ್ಸ್ ಇಮೇಜ್ ಹುಡುಕಾಟವನ್ನು…