Fact Check: ಮಾಂಸಹಾರಕ್ಕಿಂತ ಸಸ್ಯಹಾರದಲ್ಲಿ ಹೆಚ್ಚಿನ ಪ್ರೋಟಿನ್ ಸಿಗುತ್ತದೆ ಎಂಬ ಜಾನ್ ಅಬ್ರಹಾಂ ಹೇಳಿಕೆ ದಾರಿತಪ್ಪಿಸುವಂತಿದೆ
ನಾಳೆಯಿಂದ ಮೂರು ದಿನಗಳ ಕಾಲ ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲಿದೆ. ಈ ಬಾರಿ ಸಮ್ಮೇಳನದಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಊಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದ ಏರ್ಪಟ್ಟಿದೆ. ಸಸ್ಯಹಾರ ಮತ್ತು ಮಾಂಸಹಾರ ಎರಡೂ ಊಟಗಳನ್ನು ಬಡಿಸಬೇಕು ಎಂದು ಮಂಡ್ಯ ಸೇರಿದಂತೆ ರಾಜ್ಯದ ಅನೇಕ ಸಂಘಟನೆಗಳು ಒತ್ತಾಯಿಸಿವೆ. “ಸಸ್ಯಹಾರ ಶ್ರೇಷ್ಠ ಮತ್ತು ಮಾಂಸಹಾರ ಕನಿಷ್ಠ” ಎಂಬ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಮಾಂಸಹಾರ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ ಎಂದು ಮಾಂಸಹಾರಕ್ಕೆ ಬೇಡಿಕೆ ಇಟ್ಟಿರುವ ಬಹುತೇಕರ ಅಭಿಪ್ರಾಯವಾಗಿದೆ….