FACT CHECK : ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಹಚ್ಚಿಕೊಳ್ಳುವುದರಿಂದ ಚರ್ಮವು ಬಿಳಿಯಾಗುತ್ತದೆ ಎಂಬುದು ಸುಳ್ಳು

ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ಚಚೆಯು ಬಿಳಿಯಾಗುತ್ತದೆ ಎಂದು ಹೇಳುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಒಂದು ಬಾರಿ ಹಚ್ಚಿ ನೋಡಿ ನಿಮ್ಮ ಚರ್ಮವು ಚಂದ್ರನಂತೆ ಕಾಂತಿಯುತವಾಗುತ್ತದೆ” ಎಂದು ವಿಡಿಯೋದಲ್ಲಿ ಹೇಳುವುದನ್ನು ಕಾಣಬಹುದು.‌ ಫ್ಯಾಕ್ಟ್‌ಚೆಕ್ ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ಚಚೆಯು ಬಿಳಿಯಾಗುತ್ತದೆ ಎಂಬುದು ಸುಳ್ಳು. ಈ ಬಗ್ಗೆ ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಪರಿಶೀಲನೆ…

Read More
ಕ್ಯಾನ್ಸರ್

Fact Check: ಏಕಾದಶಿಯಲ್ಲಿ ಉಪವಾಸ ಮಾಡುವುದರಿಂದ ಕ್ಯಾನ್ಸರ್‌ ಬರುವುದಿಲ್ಲ ಎಂಬ ಸಂಶೋಧನೆಗೆ ನೊಬೆಲ್‌ ಪ್ರಶಸ್ತಿ ನೀಡಲಾಗಿದೆ ಎಂಬುದು ಸುಳ್ಳು

ಏಕಾದಶಿ ವ್ರತದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ವೈರಲ್ ಆಗುತ್ತಿದೆ.  “ನೀವು ಏಕಾದಶಿ ಉಪವಾಸವನ್ನು ಆಚರಿಸಿದರೆ ನಿಮಗೆ ಕ್ಯಾನ್ಸರ್ ಬರುವುದಿಲ್ಲ. ಒಬ್ಬ ವ್ಯಕ್ತಿಯು ವರ್ಷದಲ್ಲಿ ಕನಿಷ್ಠ 20 ದಿನಗಳ ಕಾಲ ಪ್ರತಿದಿನ 10 ಗಂಟೆಗಳಷ್ಟು ಸಮಯ ಆಹಾರ ಮತ್ತು ಪಾನೀಯ ಸೇವನೆ ಮಾಡದೇ ಇದ್ದರೆ, ಅವನಿಗೆ ಕ್ಯಾನ್ಸರ್ ಬರುವ ಸಾಧ್ಯತೆ 90% ಕಡಿಮೆ ಇರುತ್ತದೆ. ಏಕೆಂದರೆ ದೇಹವು ಹಸಿವಾದಾಗ, ಕ್ಯಾನ್ಸರ್‌ಗೆ ಕಾರಣವಾಗುವ ಜೀವಕೋಶಗಳನ್ನು ನಾಶಮಾಡಲು ಪ್ರಾರಂಭಿಸುತ್ತದೆ. ಈ ಚಿಂತನೆಗೆ ಈ ವರ್ಷ ‘ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ’ ಲಭಿಸಿದೆ….

Read More

FACT CHECK I ಟಾಟಾ ಮೆಮೋರಿಯಲ್ ಆಸ್ಪತ್ರೆ ಟ್ಯಾಪಿಂಗ್ ವ್ಯಾಯಾಮದ ವಿಡಿಯೋ ಬಿಡುಗಡೆ ಮಾಡಿದೆ ಎಂಬುದು ಸುಳ್ಳು

ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯೆಯೊಬ್ಬರು ತಲೆಯ ಮೇಲೆ ಮೆಲುವಾಗಿ ತಟ್ಟಿಕೊಳ್ಳುವ ಹಾಗೂ ಟ್ಯಾಪಿಂಗ್‌ ವ್ಯಾಯಮ ಮಾಡುವ ಬಗ್ಗೆ ಹೇಳುತ್ತಿರುವ ವಿಡಿಯೋ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ವೈರಲ್‌ ವಿಡಿಯೋದಲ್ಲಿ “ಟಾಟಾ ಮೆಮೋರಿಯಲ್ ಆಸ್ಪತ್ರೆಯಿಂದ ಈ ವಿಡಿಯೋ ಬಿಡುಗಡೆ ಮಾಡಲಾಗಿದ್ದು ಎಲ್ಲರೂ ಮೇಲಿನ ವಿಡಿಯೋವನ್ನು ಡಿಲೀಟ್ ಮಾಡದೆ ನೋಡಬೇಕಾಗಿ ವಿನಂತಿ. ಇದು ಬಹಳ ಮುಖ್ಯವಾದ ವಿಷಯ. ಇದನ್ನು ನಿಮ್ಮ ಇತರ ಗುಂಪುಗಳಿಗೂ ಹಂಚಿಕೊಳ್ಳಬೇಕಾಗಿ ವಿನಂತಿ” ಎಂಬ ತಲೆ ಬರಹವನ್ನು ನೀಡಲಾಗಿದೆ.  ಜನರು ಇದನ್ನು ಟಾಟಾ…

Read More

FACT CHECK : ಆಹಾರ ಪದ್ಧತಿಯಿಂದ ಪತ್ನಿಯ ಕ್ಯಾನ್ಸರ್ ಗುಣವಾಗಿದೆ ಎಂದ ಕ್ರಿಕೆಟರ್ ಸಿಧು ಹೇಳಿಕೆಯನ್ನು ತಳ್ಳಿ ಹಾಕಿದ ವೈದ್ಯಕೀಯ ತಜ್ಞರು

“ತನ್ನ ಪತ್ನಿ ನವಜೋತ್ ಕೌರ್ ಸರಳ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಕೇವಲ 40 ದಿನಗಳಲ್ಲಿ ಸ್ಟೇಜ್-4 ‌ ಕ್ಯಾನ್ಸರ್‌ನ್ನು ಮಣಿಸಿದ್ದಾರೆ” ಎಂದು ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ನವಜೋತ್ ಸಿಂಗ್ ಸಿಧು ಶುಕ್ರವಾರ ಹೇಳಿದ್ದಾರೆ . ವೈದ್ಯರು ತನ್ನ ಪತ್ನಿ ಬದುಕುಳಿಯುವ ಬಗ್ಗೆ ಯಾವುದೇ ಭರವಸೆಯನ್ನು ನೀಡದೇ ಕೈಚೆಲ್ಲಿದ್ದರು ಎಂದೂ ಸಿಧು ಹೇಳಿಕೆ ನೀಡಿದ್ದರು. ಕ್ಯಾನ್ಸರ್ ಚಿಕಿತ್ಸೆಗೆ ಕೋಟಿಗಟ್ಟಲೆ ಖರ್ಚು ಮಾಡಬೇಕೆಂದು ಜನರು ಹೇಳುತ್ತಾರೆ. ಆದರೆ, ಬೇವಿನ ಎಲೆಗಳಿಗೆ ಎಷ್ಟು ಖರ್ಚಾಗುತ್ತದೆ ಎಂದು…

Read More

Fact Check I ನಾನ್ ಸ್ಟಿಕ್‌ ಪಾತ್ರೆಗಳು ಆರೋಗ್ಯಕ್ಕೆ ಹಾನಿಕಾರಕವೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ರೀಲ್ಸ್‌ ಹಾಗೂ ಕೆಲವು ಸುದ್ದಿಗಳ ಶೀರ್ಷಿಕೆಗಳ ಪ್ರಕಾರ ಟೆಫ್ಲಾನ್‌ ಅಥವಾ ನಾನ್‌ ಸ್ಟಿಕ್‌ ಪಾತ್ರೆಗಳಲ್ಲಿ ಆಹಾರ ಬೇಯೀಸಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂಬ ಪೋಸ್ಟ್‌ಗಳು ವ್ಯಾಪಕವಾಗಿ ಹರಿದಾಡುತ್ತಿವೆ. “ನಾನ್‌ಸ್ಟಿಕ್‌ ಪಾತ್ರೆಗಳನ್ನು ಬಳಸುವುದರಿಂದ ನಿಮ್ಮ ಮಕ್ಕಳ ದೇಹದಲ್ಲಿ ರಸಾಯನಿಕ ಅಂಶಗಳು ಜೀವನ ಪೂರ್ತಿ ಉಳಿದುಕೊಳ್ಳಬಹುದು. ಈ ಪಾತ್ರೆಗಳನ್ನು ರಸಾಯನಿಕ ಬಳಸಿ ತಯಾರಿಸುವುದರಿಂದ ಇವುಗಳು  ಕ್ಯಾನ್ಸರ್‌ಕಾರಕವಾಗಬಹುದು, ಹಾರ್ಮೋನ್ಸ್‌ ಸಮಸ್ಯೆಗಳಿಗೆ ಹಾಗೂ  ಸಂತಾನಾಭಿವೃದ್ಧಿಗೆ ಬಾಧಕವಾಗಬಹುದು”  ಎಂದು ಹೇಳುವ ಯೂಟ್ಯೂಬ್‌ ವಿಡಿಯೋವೊಂದರಲ್ಲಿ ಹೇಳಲಾಗಿದೆ. Instagram ರೀಲ್‌ವೊಂದರಲ್ಲಿ , ನಾನ್…

Read More

Fact Check : ಬಾಂಗ್ಲಾದೇಶದಲ್ಲಿ ಹಿಜಾಬ್‌ ಧರಿಸಿಲ್ಲ ಎಂದು ಮಹಿಳೆಯನ್ನು ಥಳಿಸಲಾಗಿದೆ ಎಂಬುದು ಸುಳ್ಳು

ಮಹಿಳೆಯೊಬ್ಬಳು ಹಿಜಾಬ್‌ ಧರಿಸದೆ ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ಸುತ್ತುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಯ  ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಟ್ವಿಟರ್‌ನ ವಾಯ್ಸ್ ಆಫ್ ಹಿಂದೂಸ್ ಎಂಬ ಖಾತೆಯಲ್ಲಿ ” ಯಾವುದೇ ಹಿಂದೂ ಹುಡುಗಿ ಹಿಜಾಬ್ ಧರಿಸದೆ ಬಾಂಗ್ಲಾದೇಶದಲ್ಲಿ ನಡೆದಾಡಲು ಸಾಧ್ಯವಿಲ್ಲ. ಮಹಮ್ಮದ್ ಯೂನಸ್‌ರ ಹೊಸ ಬಾಂಗ್ಲಾದೇಶಕ್ಕೆ ಸುಸ್ವಾಗತ, ಈಗ ಬಾಂಗ್ಲಾದೇಶದಲ್ಲಿ ಹಿಂದೂಗಳ ಪರವಾಗಿ ಯಾರೂ ನಿಲ್ಲುವುದಿಲ್ಲ. ಇದು ಅತ್ಯಂತ ಭಯಾನಕವಾದ ದೃಶ್ಯವಾಗಿದ್ದು, ನಾವೆಲ್ಲರೂ #SaveBangladesiHindus ಎಂದು ಮಾತನಾಡಬೇಕಾಗಿದೆ. ” ಗುಂಪೊಂದು…

Read More
Love Marriage

ಪ್ರೇಮ ವಿವಾಹ ಅಥವಾ ನ್ಯಾಯಾಲಯ ವಿವಾಹಗಳಿಗೆ ಪೋಷಕರ ಅನುಮತಿ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ

ಭಾರತದಲ್ಲಿ ಪ್ರೇಮ ವಿವಾಹಗಳು ಇಂದಿಗೂ ಸವಾಲಾಗಿಯೇ ಪರಿಣಮಿಸುತ್ತಿವೆ. ಜಾತಿಗ್ರಸ್ಥ ದೇಶವಾದ ನಮ್ಮಲ್ಲಿ ಅಂತರ್ಜಾತಿ ಅಥವಾ ಅಂತರ್ಧಮಿಯ ವಿವಾಹವಾದರೆಂತೂ ಮನೆಯಿಂದ ತಮ್ಮ ಕುಲದಿಂದ ಹೊರಗಿಡುವ, ಮರ್ಯಾದೆ ಹತ್ಯೆಯಂತಹ ಅಮಾನುಷ, ಅಮಾನವೀಯ ನಡೆಗಳು ಇಂದಿಗೂ ನಮ್ಮ ಸಮಾಜವನ್ನು ಬಾದಿಸುತ್ತಿವೆ. ಇಂದಿಗೂ ತಾವು ಪ್ರೀತಿಸಿದ ಯುವಕ/ಯುವತಿಯನ್ನು ಮದುವೆಯಾಗುವ ಸ್ವತಂತ್ರ್ಯ ನಮ್ಮ ದೇಶದ ಯುಪೀಳಿಗೆಗೆ ಕಷ್ಟಸಾಧ್ಯವಾಗಿದೆ. ಇತ್ತೀಚೆಗೆ ನಮ್ಮ ಸಂವಿಧಾನ ಕಲ್ಪಿಸಿರುವ ಸ್ವೆಷಲ್ ಮ್ಯಾರೆಜ್ ಆಕ್ಟ್‌ ಕೂಡ ಕೆಲವರ ಬಾಯಲ್ಲಿ “ಲವ್‌ ಜಿಹಾದ್” ಎಂದು ಕರೆಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರೇಮ ವಿವಾಹಗಳ ಕುರಿತು…

Read More