Fact Check: ಟಿಕ್-ಟಾಕ್ ನ ಸ್ಥಾಪಕ ಎಂದು ಚೀನಾದ ಮೋಟಿವೇಶನಲ್ ಸ್ವೀಕರ್ ವಿಡಿಯೋ ಹಂಚಿಕೆ 

2020ರಲ್ಲಿ  ದೇಶದ ಭದ್ರತೆಯ ವಿಷಯಕ್ಕೆ ಸಂಬಂಧಿಸಿದಂತೆ ಭಾರತವು ಚೀನಾ ಮೂಲದ ಟಿಕ್-ಟಾಕ್ ಅನ್ನು ನಿಷೇದಿಸಿದೆ. ಆದರೆ ಟಿಕ್‌-ಟಾಕ್ ನಿಷೇದಕ್ಕೂ ಮುಂಚೆ ಈ App  ಭಾರತದಾದ್ಯಂತ ಹೆಚ್ಚು ಪ್ರಸಿದ್ದಿಯನ್ನು ಗಳಿಸಿತ್ತು. ಈಗ ಟಿಕ್-ಟಾಗ್ ಗೆ ಸಂಬಂದಿಸಿದಂತೆ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ.

“ಇವರು ಟಿಕ್ ಟಾಕ್ ನ ಸ್ಥಾಪಕ ಮತ್ತು ಅಧ್ಯಕ್ಷ. ಎರಡೂ ಕಾಲಿಲ್ಲದಿದ್ದರೂ ಸಾಧನೆ ಮಾಡಿದ್ದಾರೆ. ಯಾವುದೂ ಅಸಾಧ್ಯವಲ್ಲ.” ಎಂಬ ಶಿರ್ಷಿಕೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ವಿಶೇಷಾಂಗ ಚೇತನರೊಬ್ಬರು ಕಾಲೇಜು ಯುವಕ-ಯುವತಿಯರಿಗೆ ಭಾಷಣ ಮಾಡುವುದು, ಅವರಿಂದ ಗೌರವ ಸ್ವೀಕರಿಸುತ್ತಿದ್ದಾರೆ.

ಫ್ಯಾಕ್ಟ್‌ಚೆಕ್: ಈ ಕುರಿತು “ಟಿಕ್-ಟಾಕ್ ಸ್ಥಾಪಕ ಎಂದು ಗೂಗಲ್ ನಲ್ಲಿ ಹುಡುಕಿದಾಗ ಅನೇಕ ವರದಿಗಳು ಸಿಕ್ಕಿದ್ದು, ಚೀನಾದ ತಂತ್ರಜ್ಞಾನ ದೈತ್ಯ ಬೈಟ್ ಡ್ಯಾನ್ಸ್‌ನ ಪ್ರಾಥಮಿಕ ಸಂಸ್ಥಾಪಕ ಜಾಂಗ್ ಯಿಮಿಂಗ್  ಕಿರು ವಿಡಿಯೋಗಳನ್ನು ಹಂಚಿಕೊಳ್ಳುವ ಟಿಕ್-ಟಾಕ್‌ನ ಸಂಸ್ಥಾಪಕ ಎಂದು ತಿಳಿದು ಬಂದಿದೆ. 

ಇನ್ನೂ ಟಿಕ್-ಟಾಕ್ ನ ಸ್ಥಾಪಕ ಎಂದು ಹಂಚಿಕೊಳ್ಳಲಾಗುತ್ತಿರುವ ವ್ಯಕ್ತಿ ಮೋಟಿವೇಶನಲ್ ಭಾಷಣಕಾರ ಚೆನ್ ಝೌ. ಜೂನ್ 3, 2023 ರ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಲೇಖನವು ಝೌ ಬಗ್ಗೆ ವರದಿ ಮಾಡಿದೆ. “ಚೆನ್ ಝೌ ರೈಲು ಅಪಘಾತದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ನಂತರ ಅವರು ಅಂಗವೈಕಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಸಾರ್ವಜನಿಕ ಭಾಷಣಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು “ಕಾಲುರಹಿತ ಯೋಧ” ಎಂದು ಕರೆಯಲಾಗುತ್ತದೆ. ಶಾಂಡೊಂಗ್ ಪ್ರಾಂತ್ಯದ ಹಳ್ಳಿಯೊಂದರಲ್ಲಿ ಬಡ ಕುಟುಂಬದಲ್ಲಿ ಜನಿಸಿದ 41 ವರ್ಷದ ಚೆನ್ ಝೌ. ಅವನ ಹೆತ್ತವರು ಅವನು ಚಿಕ್ಕ ಹುಡುಗನಾಗಿದ್ದಾಗ ವಿಚ್ಛೇದನ ಪಡೆದರು ಆದ್ದರಿಂದ ಅವನು ಅಜ್ಜನ ಜೊತೆಗೆ ಬೆಳೆದನು.

ವರದಿಯು ಚೆನ್ ಅವರ ಆರ್ಥಿಕ ಹೋರಾಟ, ಜೀವನದಲ್ಲಿ ವಿವಿಧ ಉದ್ಯೋಗಗಳನ್ನು ಪ್ರಯತ್ನಿಸುವುದು ಮತ್ತು ಅಂತಿಮವಾಗಿ ಜನರನ್ನು ಅರ್ಥಪೂರ್ಣ ರೀತಿಯಲ್ಲಿ ತಲುಪುವ ಅವರ ವಿಧಾನದ ಭಾಗವಾಗಿ ಪ್ರೇರಕ ಭಾಷಣಕಾರರಾಗುವುದರ ಬಗ್ಗೆ ವರದಿಯಲ್ಲಿ ವಿವರಿಸಿದ್ದಾರೆ.

2014 ರಲ್ಲಿ, ಟಿಇಡಿಎಕ್ಸ್ ಟಾಕ್ಸ್(TEDx Talks) ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಚೆನ್ ಅವರನ್ನು ಒಳಗೊಂಡ ವೀಡಿಯೊವನ್ನು ಅಪ್ಲೋಡ್ ಮಾಡಿದ್ದು, ಅದರಲ್ಲಿ ಅವರು ಕಾಲುಗಳಿಲ್ಲದಿದ್ದರೂ ಅರ್ಥಪೂರ್ಣ ಜೀವನವನ್ನು ನಡೆಸುವ ಕುರಿತು ಚರ್ಚಿಸಿದ್ದಾರೆ.

ಕೆಳಗೆ, ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ, ಮೋಟಿವೇಶನಲ್ ಸ್ವೀಕರ್ ಚೆನ್ ಝೌ ಮತ್ತು ಟಿಕ್-ಟಾಕ್ ಸಂಸ್ಥಾಪಕ ಜಾಂಗ್ ಯಿಮಿಂಗ್ ನಡುವಿನ ಹೋಲಿಕೆಯನ್ನು ಕಾಣಬಹುದು.


ಇದನ್ನು ಓದಿ: Fact Check: ಶಬರಿಮಲೆಯ ವಾವರ್ ಮಸೀದಿಯೊಳಗಿನ ಬೋರ್ಡ್‌ನಲ್ಲಿ ಅನ್ಯ ದೇವರನ್ನು ಪೂಜಿಸಬೇಡಿ ಎಂದು ಬರೆಯಲಾಗಿಲ್ಲ


ವಿಡಿಯೋ ನೋಡಿ: Fact Check | RSS 52 ವರ್ಷ ರಾಷ್ಟ್ರಧ್ವಜ ಹಾರಿಸದರಿಲು ರಾಷ್ಟ್ರವಿರೋಧಿ ಭಾವನೆಯೇ ಕಾರಣ.! | Kannada Fact check


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *