ಬಜೆಟ್‌ ಕುರಿತ ಪ್ರಶ್ನೆಗೆ ಸಿಟ್ಟಾದ ನಿರ್ಮಲ ಸೀತಾರಾಮನ್ ಎಂದು ಹಿಂದಿನ ವರ್ಷದ ವಿಡಿಯೋ ಹಂಚಿಕೆ

ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸಂಸತ್ತಿನಲ್ಲಿ ಸತತ ಆರನೇ ಬಜೆಟ್ ಮಂಡಿಸಿದ್ದಾರೆ. ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ದಕ್ಷಿಣ ಭಾರತದ ಬಹುತೇಕ ಅನುಧಾನಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಅದರಲ್ಲೂ ಗುಜರಾತ್, ಉತ್ತರ ಪ್ರದೇಶದ ರಾಜ್ಯಗಳಿಗೆ ಹಂಚುತ್ತಿರುವ ಅನ್ಯಾಯದ ಕುರಿತು ದಕ್ಷಿಣ ಭಾರತದಾದ್ಯಂತ ಪ್ರತ್ಯೇಕ ರಾಷ್ಟ್ರದ ಕೂಗು ಸಹ ಕೇಳಿ ಬರುತ್ತಿದೆ.

ಇಂತಹ ಸಂದರ್ಭದಲ್ಲಿ ” ಇದನ್ನು ನೋಡಿ. ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ ನಡೆಸಿದ್ದರು ಮತ್ತು ಪತ್ರಕರ್ತರೊಬ್ಬರು ಬಜೆಟ್ ಕುರಿತು ಪ್ರಶ್ನೆ ಕೇಳಿದಾಗ ಅವರು ಅಹಂಕಾರದಿಂದ ಉತ್ತರಿಸುವುದನ್ನು ನೋಡಿ.” ಎಂಬ ನಿರ್ಮಲಾ ಸೀತಾರಾಮನ್ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋ ಕಳೆದ ವರ್ಷದ ಫ್ರೆಬ್ರವರಿ 1, 2023ರ ಬಜೆಟ್‌ ಮಂಡನೆಯ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ನಡೆಸಿದ ಪತ್ರಿಕಾಗೋಷ್ಟಿಗೆ ಸಂಬಂದಿಸಿದ್ದಾಗಿದೆ. ಈ ಕುರಿತು ದ ಎಕನಾಮಿಕ್ಸ್‌ ಟೈಮ್ಸ್‌ “ಬಜೆಟ್ 2023: ಪ್ರತಿಪಕ್ಷಗಳ ಪ್ರತಿಕ್ರಿಯೆ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೌನ” ಎಂಬ ಶಿರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಿಸಿದೆ. ಫೆಬ್ರವರಿ 1, 2023 ರಂದು ಬ್ರೂಟ್ ಇಂಡಿಯಾ ಮತ್ತು ಹಿಂದೂಸ್ತಾನ್ ಟೈಮ್ಸ್ ಇದೇ ರೀತಿಯ ವರದಿಗಳನ್ನು ಪ್ರಕಟಿಸಿವೆ. ವೈರಲ್ ವೀಡಿಯೊ ಮತ್ತು ಕಳೆದ ವರ್ಷದ ಮೂಲ ವೀಡಿಯೊ ನಡುವಿನ ಹೋಲಿಕೆ ಇಲ್ಲಿದೆ:

2023 ರಲ್ಲಿ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ ಫೆಬ್ರವರಿ 1 ರಂದು ಪಿಐಬಿ ಇಂಡಿಯಾದ ಯೂಟ್ಯೂಬ್ ಲೈವ್ ಸ್ಟ್ರೀಮ್ ಕಂಡುಬಂದಿದೆ. ‘ಕೇಂದ್ರ ಬಜೆಟ್ 2023-24: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ನಂತರದ ಸಮ್ಮೇಳನ’ ಎಂಬ ಶೀರ್ಷಿಕೆಯ ಈ ವಿಡಿಯೋದಲ್ಲಿ ಹಣಕಾಸು ಸಚಿವರು ಬಜೆಟ್ ನಂತರದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ.


ಇದನ್ನು ಓದಿ: Fact Check | ಪ.ಬಂಗಾಳದ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಕೇವಲ ಮುಸ್ಲಿಂ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿಲ್ಲ


ವಿಡಿಯೋ ನೋಡಿ: Fact Check | ನಟಿ ಪೂನಂ ಪಾಂಡೆ ಇನ್ನೂ ಸತ್ತಿಲ್ಲ..! | Kannada Fact Check


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *