Fact Check: ಬಾಂಗ್ಲಾದೇಶದ ಇಸ್ಲಾಮಿಸ್ಟ್‌ಗಳು ಹಿಂದು ಕುಟುಂಬವನ್ನು ಹತ್ಯೆ ಮಾಡಿದ್ದಾರೆ ಎಂಬುದು ಸುಳ್ಳು

ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡು ಪ್ರತಿದಿನ ಹತ್ತಾರು ಸುಳ್ಳು ಸುದ್ದಿಗಳು ಹರಿಬಿಡಲಾಗುತ್ತಿದೆ. ಆಡಳಿತರೂಢ ಕೇಂದ್ರ ಸರ್ಕಾರ ಕೂಡ ಹಿಂದು-ಮುಸ್ಲಿಂ ಎಂದು ಜನರ ನಡುವೆ ಪ್ರತ್ಯೇಕತೆಯ ವಾದವನ್ನು ಬಿತ್ತಿದ್ದಾರೆ. ಇವುಗಳ ಫಲವಾಗಿ ಮುಂದೊಂದು ದಿನ ಭಾರತದಲ್ಲಿ ಕೋಮುಗಲಭೆಗಳಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.

ಇತ್ತೀಚೆಗೆ,  ಬಾಂಗ್ಲಾದೇಶದ ಸಿರಾಜ್ಗಂಜ್ ನಲ್ಲಿ ಹಿಂದೂ ನಾಯಕ ವಿಕಾಸ್ ಸರ್ಕಾರ್ ಅವರ ಇಡೀ ಕುಟುಂಬವನ್ನು ಇಸ್ಲಾಮಿ ಜಿಹಾದಿಗಳು ಕೊಂದಿದ್ದಾರೆ. ಬಿಕಾಶ್ ಸರ್ಕಾರ್, ಅವರ ಪತ್ನಿ ಸ್ವರ್ಣ ಸರ್ಕಾರ್ ಮತ್ತು ಮಗಳು ಪರ್ಮಿತಾ ಸರ್ಕಾರ್ ತುಶಿ ಅವರನ್ನು ಸಿರಾಜ್ಗಂಜ್ ಜಿಲ್ಲೆಯ ತರಶ್ ಉಪಜಿಲಾದ ಬಟಾಲಾದಲ್ಲಿರುವ ಅವರ ಮನೆಯಲ್ಲಿ ಕೊಲೆ ಮಾಡಲಾಗಿದೆ ಎಂಬ ಸಂದೇಶದ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ಈ ಕುರಿತು ಹಲವು ವರದಿಗಳು ಪ್ರಕಟವಾಗಿದ್ದು, ಬಾಂಗ್ಲಾದೇಶದ ಸಿರಾಜ್ಗಂಜ್‌ನ ತರಶ್ ಉಪಜಿಲಾದಲ್ಲಿ ನಡೆದ ಕ್ರೂರ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರು ಬಿಕಾಶ್ ಅವರ ಸೋದರಳಿಯ ರಾಜೀಬ್ ಭೌಮಿಕ್ ಅವರನ್ನು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಹಣಕಾಸಿನ ವಿವಾದಗಳಿಂದಾಗಿ ರಾಜೀಬ್ ಈ ಕೊಲೆಗಳನ್ನು ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಳು ತಿಳಿಸಿದ್ದಾರೆ.

ಜನವರಿ 31, 2024 ರ ದಿ ಡೈಲಿ ಸ್ಟಾರ್ ವರದಿಯ ಪ್ರಕಾರ, ಸಿರಾಜ್ಗಂಜ್‌ನ ಪೊಲೀಸ್ ವರಿಷ್ಠಾಧಿಕಾರಿ ಅರಿಫುರ್ ರೆಹಮಾನ್ ಮೊಂಡೋಲ್ ಪತ್ರಿಕಾಗೋಷ್ಠಿಯಲ್ಲಿ ಬಂಧಿತ ರಾಜೀಬ್ ಆರಂಭಿಕ ವಿಚಾರಣೆಯ ಸಮಯದಲ್ಲಿ ಕೊಲೆಯನ್ನು ಒಪ್ಪಿಕೊಂಡಿದ್ದಾನೆ ಎಂದು ಉಲ್ಲೇಖಿಸಿದ್ದಾರೆ. ರಜೀಬ್ ತಪ್ಪೊಪ್ಪಿಗೆಯ ಪ್ರಕಾರ, ಬಿಕಾಶ್ ಗೆ 35 ಲಕ್ಷ ರೂ.ಗಳ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿರುವುದು ಕೊಲೆಯ ಹಿಂದಿನ ಉದ್ದೇಶವಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಪ್ರಕಾರ, ರಾಜೀಬ್‌ನ ಆರಂಭಿಕ ಉದ್ದೇಶ ಬಿಕಾಶ್‌ನನ್ನು ಕೊಲ್ಲುವುದಾಗಿತ್ತು ಎಂದು ವರದಿ ಹೇಳಿದೆ. “ಆದಾಗ್ಯೂ, ಬಿಕಾಶ್ ಮನೆಯಲ್ಲಿ ಇಲ್ಲದ ಕಾರಣ ಮೊದಲು ಸ್ವರ್ಣಾ ಮತ್ತು ಪರೋಮಿತಾಳನ್ನು ಕೊಂದನು. ಕೇವಲ 10 ನಿಮಿಷಗಳ ನಂತರ ಮನೆಗೆ ಹಿಂದಿರುಗಿದ ಬಿಕಾಶ್, ರಾಜೀಬ್ ಅವನನ್ನೂ ಕೊಂದ” ಎಂದು ಸಿರಾಜ್‌ಗಂಜ್ ಎಸ್‌ಪಿ ಆರಿಫುರ್ ರೆಹಮಾನ್ ಮೊಂಡೋಲ್ ಹೇಳಿದ್ದಾರೆಂದು ಡೈಲಿ ಸ್ಟಾರ್ ವರದಿ ಮಾಡಿದೆ. ಆದ್ದರಿಂದ ಬಾಂಗ್ಲಾದೇಶದ ಇಸ್ಲಾಮಿಸ್ಟ್‌ಗಳು ಹಿಂದು ಕುಟುಂಬವನ್ನು ಹತ್ಯೆ ಮಾಡಿದ್ದಾರೆ ಎಂಬುದು ಸುಳ್ಳು


ಇದನ್ನು ಓದಿ: Fact Check | ನೈಲ್‌ ನದಿ ಬಳಿಯ ಸರೋವರದಲ್ಲಿ ಮಾನವ ಮುಖದ ಹೋಲಿಕೆಯ ಮೀನು ಪತ್ತೆಯಾಗಿಲ್ಲ


ವಿಡಿಯೋ ನೋಡಿ: Rajasthan Election | ಎಡಿಡೆಟ್ ವಿಡಿಯೋ ಹಂಚಿಕೊಂಡು ಸುಳ್ಳು ಹರಡಿದ ಅಸ್ಸಾಂ ಸಿಎಂ ಹಿಮಂತ ಶರ್ಮಾ | Himanta Sarma


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *