“ನೋಡಿ ಈ ಆನೆ ಹೇಗೆ ಸಂಗೀತದ ಸದ್ದಿಗೆ ಕುಣಿಯುತ್ತಿದೆ ಎಂದು. ಇಂತಹ ಪವಾಡಗಳು ಕೇವಲ ಸನಾತನ ಧರ್ಮದಿಂದ ಮಾತ್ರ ಸಾಧ್ಯ ಮತ್ತು ಸನಾತನ ಧರ್ಮದಿಂದ ಮಾತ್ರ ಪ್ರಾಣಿಗಳನ್ನು ಖುಷಿಯಾಗಿ ಇಡಲು ಸಾಧ್ಯ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವಿಡಿಯೋವನ್ನು ನೋಡಿದಾಗ ಮೊದ ಮೊದಲು ಇದು ನಿಜವಾದ ಆನೆಯಂತೆಯೇ ಕಾಣುತ್ತದೆ. ಹೀಗಾಗಿ ಸಾಕಷ್ಟು ಮಂದಿ ವಿಡಿಯೋವನ್ನು ಸರಿಯಾಗಿ ಗಮನಿಸದೆ ಇದು ನಿಜವೆಂದು ಭಾವಿಸಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗದರೆ ಈ ವಿಡಿಯೋದ ಅಸಲಿಯತ್ತು ಏನು ಎಂಬುದನ್ನು ಪೂರ್ತಿಯಾಗಿ ತಿಳಿಯೋಣ ಬನ್ನಿ..
Only Sanatan Culture can keep animals happy. pic.twitter.com/5ObF0LqOsF
— Eminent Woke (@WokePandemic) February 2, 2024
ಫ್ಯಾಕ್ಟ್‌ಚೆಕ್
ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಕೆಲವೊಂದು ಪ್ರಮುಖ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಇದರ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಲು, ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಲಾಯಿತು. ಈ ವೇಳೆ ಇದೇ ರೀತಿಯಾದ ಹಲವು ಚಿತ್ರಗಳು ಮತ್ತು ವರದಿಗಳು ಕಂಡು ಬಂದವು. ಅದೇ ವೇಳೆಯಲ್ಲಿ ಅನಿಲ್ ಆರ್ಟ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯೊಂದು ಕಾಣಿಸಿಕೊಂಡಿತ್ತು. ಅದನ್ನು ಪರಿಶೀಲಿಸಿದಾಗ ಈ ವಿಡಿಯೋವಿನ ಅಸಲಿಯತ್ತು ಏನು ಎಂಬುದು ತಿಳಿದು ಬಂದಿದೆ.
ಈ ಅನಿಲ್ ಆರ್ಟ್ ಎಂಬ ತಂಡ ಆನೆಗಳ ವೇಷವನ್ನು ಧರಿಸಿ ವಿವಿಧ ಕಡೆಗಳಲ್ಲಿ ಹಲವು ಕಾರ್ಯಕ್ರಮವನ್ನು ನೀಡಿದೆ. ಅದರಲ್ಲಿ ಪ್ರಮುಖ ಆಕರ್ಶಣೆಯೆಂದರೆ ಈ ಆನೆಯ ವೇಷಧಾರಿಗಳು ಇಬ್ಬರು ವೇಷಧಾರಿಗಳು ಧರಿಸುತ್ತಾರೆ. ಮತ್ತು ಅಲ್ಲಿ ಚಂಡೆ ವಾದ್ಯಕ್ಕೆ ಈ ವೇಷಧಾರಿಗಳು ಆನೆಗಳು ಕುಣಿದರೆ ಹೇಗೆ ಕುಣಿಹುದೋ ಅದೇ ರೀತಿಯಲ್ಲಿ ಕುಣಿಯುತ್ತಾರೆ.
View this post on Instagram
ಈ ಆ ವೇಷವು ಹೆಚ್ಚು ಭಾರವಾಗಿರುತ್ತದೆ. ಮತ್ತು ಇದನ್ನು ಧರಿಸಿ ಕುಣಿಯುವುದು ಕೂಡ ಅಷ್ಟು ಸುಲಭವಲ್ಲ. ಹಾಗಾಗಿ ಹೀಗೆ ಆನೆಯ ವೇಷ ಧರಿಸುವವರು ಕೆಲ ದಿನಗಳ ಕಾಲ ತಾಲೀಮು ಕೂಡ ನಡೆಸುತ್ತಾರೆ ಎಂಬ ಮಾಹಿತಿ ಲಭ್ಯಾಗಿದೆ.
ಒಟ್ಟಾರೆಯಾಗಿ ನಕಲಿ ಆನೆಯ ವಿಡಿಯೋವನ್ನು ಬಳಸಿಕೊಂಡು ಸಾಕಷ್ಟು ಮಂದಿ ವಿವಿಧ ರೀತಿಯ ಸುಳ್ಳು ಬರಹಗಳನ್ನು ಪ್ರಕಟಿಸಿದ್ದಾರೆ. ಹಾಗಾಗಿ ಈ ವಿಡಿಯೋ ಸುಳ್ಳು ಪ್ರತಿಪಾದನೆಯಿಂದ ಕೂಡಿದೆ.
ಇದನ್ನೂ ಓದಿ : ಗಾಂಧೀಜಿಯವರು ಬ್ರಿಟೀಷರಿಂದ ತಿಂಗಳಿಗೆ 100 ರೂ. ಪಿಂಚಣಿ ಪಡೆಯುತ್ತಿದ್ದರು ಎಂಬುದು ಸುಳ್ಳು
ಈ ವಿಡಿಯೋ ನೋಡಿ : ಗಾಂಧೀಜಿಯವರು ಬ್ರಿಟೀಷರಿಂದ ತಿಂಗಳಿಗೆ 100 ರೂ. ಪಿಂಚಣಿ ಪಡೆಯುತ್ತಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.