ವಿರಾಟ್ ಕೊಹ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು AI ಚಿತ್ರ ಹಂಚಿಕೆ

ಇತ್ತೀಚೆಗೆ ನಡೆದ ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾದ  ಬಾಲಿವುಡ್‌ ನಟ-ನಟಿಯರ ಸೇಲ್ಫಿ, ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದ್ದಂತೆ, ಈಗ ಈ ಕಾರ್ಯಕ್ರಮಕ್ಕೆ ಭಾಗವಹಿಸಿಲ್ಲ ಎಂಬ ಕಾರಣಕ್ಕಾಗಿ ಮಹೇಂದ್ರ ಸಿಂಗ್ ದೋನಿ, ರೋಹಿತ್ ಶರ್ಮ ಸೇರಿದಂತೆ ಹಲವು ಕ್ರಿಕೆಟರ್‌ಗಳನ್ನು ಶ್ರೀ ರಾಮನ ಭಕ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ ಕೆಲವು ವಿರಾಟ್‌  ಕೊಹ್ಲಿಯ ಅಭಿಮಾನಿಗಳು “ವಿರಾಟ್ ಕೊಹ್ಲಿ ಅಯೋಧ್ಯೆಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೋಟೋ” ಎಂದು ಕೆಲವು ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸತ್ಯ: ಇದು AI ಸೃಷ್ಟಿಸಿದ ಚಿತ್ರವಾಗಿದ್ದು ನೈಜ ಪೋಟೋ ಅಲ್ಲ. ಈ  ಚಿತ್ರದಲ್ಲಿ ಕೊಹ್ಲಿಯ ಕೈಗಳು ಅವರ ಬಟ್ಟೆಗಳೊಂದಿಗೆ ಬೆರೆತಿರುವುದನ್ನು ನಾವು ಗಮನಿಸಬಹುದು. ಕೊಹ್ಲಿಯ ಬಲಗೈ ಮತ್ತು ಅಂಗೈ ಕೂಡ ವಿರೂಪಗೊಂಡಂತೆ ಕಾಣುತ್ತಿದೆ. ಈ ವೈಪರೀತ್ಯಗಳು ಸಾಮಾನ್ಯವಾಗಿ ಮಾನವನ ಬೆರಳುಗಳು ಮತ್ತು ಕಾಲ್ಬೆರಳುಗಳ ವಿವರಗಳನ್ನು ನಿಖರವಾಗಿ ಮರುಸೃಷ್ಟಿಸಲು ಹೆಣಗಾಡುವ ಕೃತಕವಾಗಿ ರಚಿಸಲಾದ AI ಚಿತ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ಕೊಹ್ಲಿಯೊಂದಿಗೆ ಮಾತುಕತೆ ನಡೆಸುತ್ತಿರುವ ವ್ಯಕ್ತಿಗೆ ಸಹ ಯಾವುದೇ ಕೈಗಳಿಲ್ಲ ಎಂದು ನಾವು ಕಂಡುಕೊಳ್ಳಬುದು;  ಈ ಕುರಿತು ಇನ್ನಷ್ಟು ಖಚಿತ ಪಡಿಸಿಕೊಳ್ಳಲು ಹೈವ್ ಮಾಡರೇಶನ್ ಎಂಬ AI ಪತ್ತೆಹಚ್ಚುವ App ಪ್ರಕಾರ, ಈ ಚಿತ್ರವು 99.9 % AI ರಚಿತವಾಗಿರುವ ಸಾಧ್ಯತೆಯ ಪೋಟೋ ಎಂದು ತಿಳಿಸಿದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕ ಶರ್ಮ ಅಯೋಧ್ಯೆಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅವರಿಗೆ ಆಹ್ವಾನ ಪತ್ರಿಕೆಯನ್ನು ಸಹ ನೀಡಲಾಗಿತ್ತು. ಇದು ಹಲವಾರು ಸುದ್ಧಿ ಮಾದ್ಯಮಗಳಲ್ಲಿ ಸಹ ಬಿತ್ತರವಾಗಿತ್ತು. ಆದರೆ ಅಯೋಧ್ಯೆಯ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಈ ದಂಪತಿಗಳು ಭಾಗವಹಿಸಿದ ಕುರಿತು ಹುಡುಕಲಾಗಿ ಯಾವುದೇ ವರದಿ ಲಭ್ಯವಾಗಿಲ್ಲ.


ಇದನ್ನು ಓದಿ: Fact Check | ಚೀನಾದಲ್ಲಿ ಸ್ವಚ್ಚತಾ ಕಾರ್ಯಕ್ಕಾಗಿ ಕೊಕೊ ಕೋಲಾ ಬಳಸಾಗುತ್ತಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: Fact Check | ವಂದೇ ಭಾರತ್‌ ಹೆಸರಿನಲ್ಲಿ ಯಾವುದೇ ಬಸ್‌ ಸಂಚಾರ ಆರಂಭವಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *