“ಚೀನಾದಾದ್ಯಂತ ಕೊಕೊ ಕೋಲಾವನ್ನು ಬ್ಯಾನ್ ಮಾಡಲಾಗಿದೆ. ಮಾರುಕಟ್ಟೆಯಿಂದಲೂ ವಾಪಸ್ ಪಡೆಯಲಾಗುತ್ತಿದೆ. ಈಗ ಒಳ ಚರಂಡಿ, ಶೌಚ ಗುಂಡಿಗಳ ಸ್ವಚ್ಚತಾ ಕಾರ್ಯಕ್ಕಾಗಿ ಕೊಕೊ ಕೋಲಾವನ್ನು ಬಳಸಲಾಗುತ್ತಿದೆ.” ಎಂದು ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹಬ್ಬಿಸಲಾಗುತ್ತಿದೆ. ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಆದರೆ ಇನ್ನೂ ಕೆಲವು ಮಂದಿ ಚೀನಾದಲ್ಲಿ ಅಲ್ಲಿನ ಸರ್ಕಾರ ಕೊಕೊ ಕೋಲಾವನ್ನು ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಿದೆ. ಲ್ಯಾಬ್ ಫಲಿತಾಂಶದಲ್ಲಿ ವಿಷಯುಕ್ತ ಅಂಶಗಳು ಕಂಡು ಬಂದಿವೆ. ಇದನ್ನ 150 ಕೈದಿಗಳಿಗೆ ಕುಡಿಸಲಾಗಿತ್ತು ಅದರಲ್ಲಿ ಸುಮಾರು 75 ಮಂದಿ ಮೃತ ಪಟ್ಟಿದ್ದಾರೆ. ಹೀಗಾಗಿ ಕೊಕೊ ಕೋಲಾವನ್ನ ಬ್ಯಾನ್ ಮಾಡಿ, ಸ್ವಚ್ಚತಾ ಕಾರ್ಯಕ್ಕಾಗಿ ಬಳಸಲಾಗುತ್ತಿದೆ ಎಂದು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ ಚೀನಾದ ಮಾಧ್ಯಮ ವರದಿ ಮತ್ತು ಅಲ್ಲಿನ ಸರ್ಕಾರದ ಅಧಿಕೃತ ಪ್ರಕಟನೆಗಳ ಕುರಿತು ಪರಿಶೀಲನೆ ನಡೆಸಲಾಯಿತು. ಆದರೆ ಈ ಕುರಿತು ಚೀನಾದ ಮಾಧ್ಯಮಗಳಲ್ಲಾಗಲಿ, ಅಥವಾ ಚೀನಾ ಸರ್ಕಾರದಿಂದಾಗಲಿ ಯಾವುದೇ ರೀತಿಯ ಅಧಿಕೃತ ವರದಿಗಳು ಕಂಡು ಬಂದಿಲ್ಲ.
ಇನ್ನು ಚೀನಾ ಸರ್ಕಾರ ಕೊಕೊ ಕೋಲಾ ಕುರಿತು ಯಾವುದಾದರೂ ಲ್ಯಾಬ್ ಪರೀಕ್ಷೆಯನ್ನು ನಡೆಸಿದೆಯೇ ಎಂದು ಪರಿಶೀಲಿಸಿದಾಗ ಆ ಕುರಿತು ಕೂಡ ಮಾಹಿತಿ ಲಭ್ಯವಾಗಿಲ್ಲ. ಕೈದಿಗಳಿಗೆ ಕೊಕೊ ಕೋಲಾ ನೀಡಿರುವ ಕುರಿತು ಹಾಗೂ ಕೈದಿಗಳು ಸಾವನ್ನಪ್ಪಿರುವ ಕುರಿತು ಕೂಡ ಯಾವುದೇ ವರದಿಗಳು ಕಂಡು ಬಂದಿಲ್ಲ.
ಇನ್ನು ಇದೇ ರೀತಿಯ ಸುದ್ದಿ 2018ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ಆಗಿರುವ ಪ್ರತಿಪಾದನೆ ಸುಳ್ಳು ಎಂಬುದು ಸಾಭೀತಾಗಿದೆ.
ಇದನ್ನೂ ಓದಿ : Fact Check: ಕಾಂಚೀಪುರದ ಪುರಾತದ ದೇವಾಲಯವನ್ನು ಸ್ಟಾಲಿನ್ ಸರ್ಕಾರ ಹೊಡೆಸಿದೆ ಎಂಬುದು ಸಂಪೂರ್ಣ ಸುಳ್ಳು
ಈ ವಿಡಿಯೋ ನೋಡಿ : Fact Check: ಕಾಂಚೀಪುರದ ಪುರಾತದ ದೇವಾಲಯವನ್ನು ಸ್ಟಾಲಿನ್ ಸರ್ಕಾರ ಹೊಡೆಸಿದೆ ಎಂಬುದು ಸಂಪೂರ್ಣ ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.