ಅಯೋಧ್ಯೆಯ ಪ್ರಾಣ ಪ್ರತಿಷ್ಟೆ ಸಂದರ್ಭದ ಚಿತ್ರಗಳು ಎಂದು ಬೇರೆ ಸ್ಥಳಗಳ ಪೋಟೋ ಹಂಚಿಕೆ

ಕೆಲವು ದಿನಗಳ ಹಿಂದೆಯಷ್ಟೇ ಅಯೋಧ್ಯೆಯ ರಾಮಲಲ್ಲಾ ಪ್ರಾಣಪ್ರತಿಷ್ಟೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಈ ಕಾರ್ಯಕ್ರಮಕ್ಕೆ ಮೊದಲು ಸಹ ಅನೇಕ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಮತ್ತು ಕಾರ್ಯಕ್ರಮದ ನಂತರ ಸಹ ಈಗ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಇತ್ತೀಚೆಗೆ ಶ್ರೀ ರಾಮನ ಭಕ್ತನೊಬ್ಬ ತನ್ನ ಕೈಗಳ(ತಲೆಕೆಳಗಾಗಿ) ಮೂಲಕ ನಡೆದುಕೊಂಡು ಅಯೋಧ್ಯೆಯನ್ನು ತಲುಪಿದ್ದಾನೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು TV9 ಭಾರತ್‌ವರ್ಷ್‌ ಮತ್ತು ಇಂಡಿಯನ್ ಟಿವಿ ಎಂಬ ಸುದ್ದಿ ಮಾಧ್ಯಮಗಳು ಈ ವಿಡಿಯೋವನ್ನು ಹಂಚಿಕೊಂಡಿವೆ.

ಇದೇ ರೀತಿ,  ಜನವರಿ 22, 2024 ರಂದು ರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಅಯೋಧ್ಯೆಯ ಬೀದಿಗಳಲ್ಲಿ ಹಿಂದೂ ಭಕ್ತರ ಸಾಗರ ಸೇರಿದೆ ಎಂದು ಸಾವಿರಾರು ಜನರು ರಸ್ತೆಯೊಂದರಲ್ಲಿ ನಿಂತಿರುವ ಪೋಟೋವೊಂದು ಈಗ ವೈರಲ್ ಆಗುತ್ತಿದೆ.

ಫ್ಯಾಕ್ಟ್‌ಚೆಕ್: ಬಿಹಾರದ ಸಹರ್ಸ ಜಿಲ್ಲೆಯ ನಿಹಾಲ್ ಸಿಂಗ್ ಎಂಬುವವರು ಜಾರ್ಖಂಡ್‌ನ ಬಸುಕಿನಾಥ್‌ ಬಾಬಾದಾಮ್‌ಗೆ ತಲೆ ಕೆಳಗಾಗಿ ನಡೆದುಕೊಂಡು ಹೋಗುತ್ತಿದ್ದಾರೆ ಎಂದು ಪ್ರಭಾತ್ ಮಿಶನ್ ಮತ್ತು ಅಮರ ಉಜಾಲಾ ಪತ್ರಿಕೆಗಳು ವರದಿ ಮಾಡಿವೆ. ನ್ಯೂಸ್ ಚೆಕ್ಕರ್ ನಿಹಾಲ್‌ ಸಿಂಗ್ ಜೊತೆ ಫೋನ್‌ನಲ್ಲಿ ಮಾತನಾಡಿದಾಗ ಅವರು ನಾನು ಜಾರ್ಖಂಡ್ ರಾಜ್ಯದ ಬಸುಕಿನಾಥ್ ದೇವಾಲಯಕ್ಕೆ ತಲೆಕೆಳಗಾಗಿ ನಡೆದುಕೊಂಡು ಹೋಗುತ್ತಿದ್ದೇನೆ, ಅಯೋಧ್ಯೆಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇನ್ನೂ ರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಅಯೋಧ್ಯೆಯ ಬೀದಿಗಳಲ್ಲಿ ಹಿಂದೂ ಭಕ್ತರ ಸಾಗರ ಸೇರಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ಪೋಟೋ ಜೂನ್ 21,2023ರ ಒರಿಸ್ಸಾದಲ್ಲಿ ನಡೆಯುವ ವಾರ್ಷಿಕ ಪೂರಿ ಜಗನ್ನಾತ ರಥಯಾತ್ರೆಯ ಸಂದರ್ಭದ ಪೋಟೋ ಎಂದು ಒನ್ ಇಂಡಿಯಾ, ಟೈಮ್ಸ್ ಕಂಟೆಂಟ್ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಹಾಗಾಗಿ ಇದು ಅಯೋಧ್ಯೆಗೆ ಸಂಬಂಧಿಸಿದ ಪೋಟೋ ಅಲ್ಲ.


ಇದನ್ನು ಓದಿ: Fact Check: ಕಾಂಚೀಪುರದ ಪುರಾತದ ದೇವಾಲಯವನ್ನು ಸ್ಟಾಲಿನ್ ಸರ್ಕಾರ ಹೊಡೆಸಿದೆ ಎಂಬುದು ಸಂಪೂರ್ಣ ಸುಳ್ಳು


ವಿಡಿಯೋ ನೋಡಿ: Fact Check | ವಂದೇ ಭಾರತ್‌ ಹೆಸರಿನಲ್ಲಿ ಯಾವುದೇ ಬಸ್‌ ಸಂಚಾರ ಆರಂಭವಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *