Fact Check: ಕಾಂಚೀಪುರದ ಪುರಾತದ ದೇವಾಲಯವನ್ನು ಸ್ಟಾಲಿನ್ ಸರ್ಕಾರ ಹೊಡೆಸಿದೆ ಎಂಬುದು ಸಂಪೂರ್ಣ ಸುಳ್ಳು

ಇತ್ತೀಚೆಗೆ ತಮಿಳುನಾಡಿನ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ಮೇಲೆ ದೇವಸ್ಥಾನಗಳನ್ನು ಹೊಡೆಸಲಾಗುತ್ತಿದೆ ಎಂಬ ಸುಳ್ಳು ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇದನ್ನು ಮುನ್ನಲೆಯಾಗಿಟ್ಟುಕೊಂಡು ಸ್ಟಾಲಿನ್‌ರವರನ್ನು ಟೀಕಿಸಲಾಗುತ್ತಿದೆ. ಈ ಹಿಂದೆಯೂ ಚೋಳರ ಕಾಲದ ಶಿವಲಿಂಗವನ್ನು ಸ್ಟಾಲಿನ್ ರವರ ಡಿಎಂಕೆ ಸರ್ಕಾರ ತೆರವುಗೊಳಿಸಿದೆ ಎಂದು ಆರೋಪಿಸಿ ಹಂಚಿಕೊಳ್ಳಲಾಗುತ್ತಿತ್ತು.

ಈಗ, “ತಮಿಳುನಾಡಿನ ಕಾಂಚೀಪುರದ ನಿಮಂತಕರರ್ ರಸ್ತೆಯಲ್ಲಿರುವ ಸಾವಿರ ವರ್ಷಗಳಿಗೂ ಹಳೆಯದಾದ ಪುರಾತನ ಶ್ರೀ ನಲ್ಲ ಕಂಬ ವಿನಾಯಗರ್ ದೇವಸ್ಥಾನವನ್ನು ಸ್ಟಾಲಿನ್ ಸರ್ಕಾರ ಹೊಡೆದುರುಳಿಸಿದೆ” ಎಂದು ಪ್ರತಿಪಾದಿಸಿ ದೇವಸ್ಥಾನವನ್ನು ಹೊಡೆಯುವ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

50 ಸೆಕೆಂಡ್‌ಗಳಿರುವ ಈ ವೀಡಿಯೊವಿನಲ್ಲಿ “ಕಾಂಚಿಪುರಂ ನಿಮಂತಕರರ್ ಬೀದಿಯಲ್ಲಿರುವ ಶ್ರೀ ನಲ್ಲ ಕಂಬ ವಿನಾಯಕರ್ ದೇವಾಲಯವು 1000 (ಸಾವಿರ) ವರ್ಷಗಳಷ್ಟು ಹಳೆಯದು. ಈ ದೇವಾಲಯವನ್ನು ನೆಲಮಟ್ಟಕ್ಕೆ ಕೆಡವಲಾಯಿತು” ಎಂದು ತಮಿಳಿನಲ್ಲಿ ಬರೆಯಲಾಗಿದೆ. ಈ ವಿಡಿಯೋವನ್ನು ಸ್ಟಾಲಿನ್‌ ಸರ್ಕಾರ ಕೆಡವಿದೆ ಎಂದು ತತ್ವಮಸಿ ಮತ್ತು ಬೋಯ್ಲ್ಡ್‌ಅಂಡ ಎಂಬ X ಖಾತೆಯವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್‌: ಈ ಕುರಿತು ಗೂಗಲ್ ರಿವರ್ಸ್‌ ಇಮೇಜ್ ಮೂಲಕ ಹುಡುಕಲಾಗಿ ಈ ದೇವಸ್ಥಾನದ ಹಲವು ಚಿತ್ರಗಳು ಕಂಡು ಬಂದಿದ್ದು. ಮಾಹಿತಿಗಳ ಪ್ರಕಾರ ಈ ದೇವಸ್ಥಾನವೂ ಖಾಸಗಿ ಒಡೆತನದ ದೇವಾಲಯವಾಗಿದ್ದು ತಮಿಳುನಾಡಿನ ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ (HR&CE)ಯ ಅಡಿಯಲ್ಲಿ ಬರುವುದಿಲ್ಲ.

ಈ ಕುರಿತು ಭೂಮ್ ಲೈವ್‌ನವರು ದೇವಸ್ಥಾನದ ಟ್ರಸ್ಟಿಗಳಾದ ಕೆ.ಸೇಂಥಿಲ್ ಕುಮಾರ್ ಅವರನ್ನು ಮಾತನಾಡಿಸಿದ್ದು ಅವರು “ಇದು 140 ವರ್ಷಗಳಷ್ಟು ಹಳೆಯದಾದ ದೇವಾಲಯ, ಇದು ನಮ್ಮ ಸ್ವಂತ ಆಸ್ತಿ ಮತ್ತು ಐದು ತಲೆಮಾರುಗಳಿಂದ ಬಂದಿದೆ; ನಾವೆಲ್ಲರೂ ಈ ದೇವಾಲಯವನ್ನು ನಿರ್ವಹಿಸುವುದನ್ನು ಮುಂದುವರೆಸಿದ್ದೇವೆ. ದೇವಾಲಯವನ್ನು ಕೆಡವುವ ಮೊದಲು ಡಿಸೆಂಬರ್ 8, 2023 ರಂದು ‘ಬಾಲಾಲಯಂ’ ಆಚರಣೆ ನಡೆಸಿ ಕಡೆವಲಾಗಿದೆ. ವೈರಲ್ ವೀಡಿಯೊದಲ್ಲಿನ ದೃಶ್ಯಗಳು ಜನವರಿ 2, 2024 ರಂದು ನಡೆಸಲಾದ ಕೆಡವುವಿಕೆಯ ದೃಶ್ಯಗಳಾಗಿವೆ ಎಂದು ಅವರು ಹೇಳಿದರು. “ದೇವಾಲಯವು ಕೆಟ್ಟ ಸ್ಥಿತಿಯಲ್ಲಿತ್ತು ಮತ್ತು ಹಾನಿಗೊಳಗಾಗಿತ್ತು, ಅದಕ್ಕಾಗಿಯೇ ಅದನ್ನು ಕೆಡವಬೇಕಾಯಿತು, ಅದನ್ನು ಮತ್ತೆ ಪುನರ್ನಿರ್ಮಾಣ ಮಾಡಬೇಕಾಗಿತ್ತು. ನಾವು ಪ್ರಸ್ತುತ ಹಳೆಯ ದೇವಾಲಯದ ಸ್ಥಳದಲ್ಲಿಯೇ ಹೊಸ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ನಾವು ದೇವಾಲಯದ ರಚನೆ ಮತ್ತು ವಿನ್ಯಾಸಕ್ಕಾಗಿ ಉಲ್ಲೇಖಗಳನ್ನು ನೀಡಿದ ವಾಸ್ತುಶಿಲ್ಪಿಯವರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಮುಂದಿನ ವಾರ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಲಾಗುವುದು ಎಂದು ಕುಮಾರ್ ಹೇಳಿದರು.ಕುಮಾರ್ ಅವರು ಡಿಸೆಂಬರ್ 8, 2023 ರಿಂದ ದೇವಾಲಯವನ್ನು ಕೆಡವಲು ನಿರ್ಧರಿಸುವ ಮೊದಲು ಅಂದು ನಡೆದ ‘ಬಾಲಾಲಯಂ’ ಆಚರಣೆಯ YouTube ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಬಾಲಾಲಯವು ದೇವಾಲಯ ಅಥವಾ ದೇವತೆಗೆ ಯಾವುದೇ ರಚನಾತ್ಮಕ ಬದಲಾವಣೆಯನ್ನು ಮಾಡುವ ಮೊದಲು ಮಾಡುವ ಆಚರಣೆಯಾಗಿದೆ.

ಆದ್ದರಿಂದ ಸಧ್ಯ ಸ್ಟಾಲಿನ್ ಅವರ ಡಿಎಂಕೆ ಸರ್ಕಾರ ಪುರಾತನ ದೇವಾಲಯವನ್ನು ಹೊಡೆಸುತ್ತಿದೆ ಎಂಬುದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು ಸ್ಟಾಲಿನ್ ಅವರ ವಿರೋಧಿಗಳು ಹರಡುತ್ತಿರುವ ಸುಳ್ಳು ಸುದ್ದಿಗಳಾಗಿವೆ.


ಇದನ್ನು ಓದಿ: Fact Check: ತಮಿಳುನಾಡಿನ DMK ಸರ್ಕಾರವು ಪ್ರಾಚೀನ ಶಿವಲಿಂಗವನ್ನು ದೇವಾಲಯದಿಂದ ತೆರವುಗೊಳಿಸಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: ಸಂವಿಧಾನದ 30-A ಕಾನೂನಿನ ಪ್ರಕಾರ – ಹಿಂದೂಗಳು ತಮ್ಮ ಧರ್ಮವನ್ನು ಬೋಧಿಸಲು ಅವಕಾಶವಿಲ್ಲ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *