ಸಾಮಾಜಿಕ ಜಾಲತಾಣದಲ್ಲಿ “ಇವರು ದಿವಂಗತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಮೊಮ್ಮಗ.. ತಾತನಂತ ಇವರು ಕೂಡ ಅಮೋಘ ಗಾಯಕರಾಗಲಿದ್ದಾರೆ. ಈ ವಿಡಿಯೋ ಎಲ್ಲಾರಿಗೂ ಶೇರ್ ಮಾಡಿ.” ಎಂದು ಬಾಲಕನೊಬ್ಬನ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವು ಮಂದಿ ಇದು ನಿಜವೆಂದು ನಂಬಿದ್ದಾರೆ.
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಸತ್ಯ ಶೋಧನೆಯನ್ನ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಲಾಯಿತು. ಆಗ ಬಾಲಕನಿಗೆ ಸಂಬಂಧ ಪಟ್ಟ ಹಲವು ವಿಡಿಯೋಗಳು, ಸುದ್ದಿಗಳು ಪತ್ತೆಯಾಗಿತ್ತು ಅದರಲ್ಲಿ ಬಾಲಕ ಹೆಸರು ಆದಿತ್ಯ ಸುರೇಶ್ ಎಂದು ಪತ್ತೆಯಾಗಿತ್ತು. ಇನ್ನು ಬಾಲಕನ ಕುರಿತು ಹೆಚ್ಚು ವರದಿಗಳು ಮಲಯಾಲಂ ಭಾಷೆಯಲ್ಲಿದ್ದದ್ದನ್ನು ನಾವು ಕಂಡುಕೊಂಡೆವು.
ಬಳಿಕ ಬಾಲಕನ ಹೆಸರನ್ನು ನಾವು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಾಲಕನ ಕುರಿತು ಕಿರು ಸಾಕ್ಷ್ಯಚಿತ್ರವನ್ನು ಕಂಡುಕೊಳ್ಳಲಾಯಿತು ಅದರಲ್ಲಿ ವೀಡಿಯೋದಲ್ಲಿ ಹಾಡುತ್ತಿರುವ ಬಾಲಕ ಕೇರಳದ ಕೊಲ್ಲಂ ನಗರದ ಬಾಲ ಗಾಯಕ ಆದಿತ್ಯ ಸುರೇಶ್ ಎಂದು ತಿಳಿಯಿದು ಜೊತೆಗೆ ಬಾಲಕ ಹುಟ್ಟಿನಿಂದಲೇ ‘ಬ್ರಿಟಲ್ ಬೋನ್’ ಕಾಯಿಲೆಯಿಂದ ಬಳಲುತ್ತಿರುವುದು ಕಂಡು ಬಂದಿದೆ.
ಇನ್ನು ಈ ಆದಿತ್ಯ ಸುರೇಶ್ ಹಾಡುಗಾರಿಕೆಯಲ್ಲಿ ಒಲವು ಹೊಂದಿದ್ದಾರೆ ಮತ್ತು ಕೇರಳ ಮತ್ತು ದೇಶದ ಇತರ ಭಾಗಗಳಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಸಾಕಷ್ಟು ಜನ ಮನ್ನಣೆಯನ್ನು ಕೂಡ ಈ ಬಾಲ ಗಾಯಕ ಪಡೆದುಕೊಂಡಿದ್ದಾರೆ.. ಇನ್ನು ಈ ಬಾಲ ಗಾಯಕನ ತಂದೆ ಟಿ.ಕೆ.ಸುರೇಶ್ ಮತ್ತು ತಾಯಿ ರೆಂಜಿನಿ ಸುರೇಶ್ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ : Fact Check | ವಂದೇ ಭಾರತ್ ಹೆಸರಿನಲ್ಲಿ ಯಾವುದೇ ಬಸ್ ಸಂಚಾರ ಆರಂಭವಾಗಿಲ್ಲ
ಈ ವಿಡಿಯೋ ನೋಡಿ : Fact Check | ವಂದೇ ಭಾರತ್ ಹೆಸರಿನಲ್ಲಿ ಯಾವುದೇ ಬಸ್ ಸಂಚಾರ ಆರಂಭವಾಗಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ