ಸಾಮಾಜಿಕ ಜಾಲತಾಣದಲ್ಲಿ “ಬನಾರಸ್‌ನಿಂದ ಗಾಜಿಪುರಕ್ಕೆ ವಂದೇ ಭಾರತ್ ಬಸ್ ಸಂಚಾರ ಆರಂಭವಾಗಿದೆ. ಅದರ ಮೊದಲು ಚಿತ್ರ ಇದು ಎಲ್ಲಾರಿಗೂ ಶೇರ್ ಮಾಡಿ” ಎಂಬ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ಈ ಪೋಸ್ಟ್ ಅನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದು, ಇದು ನಿಜವಾದ ಬಸ್ ಎಂದು ನಂಬಿಕೊಂಡಿದ್ದಾರೆ.
ಈ ವಂದೇ ಭಾರತ್ ಬಸ್ ಎಂದು ಹಂಚಿಕೊಳ್ಳಲಾಗುತ್ತಿರುವ ಪೋಟೋವನ್ನು ಗಮನಿಸಿದಾಗ, ಇದರಲ್ಲಿ ವಂದೇ ಭಾರತ್ ರೈಲು ಮುಂಭಾಗದಿಂದ ನೋಡಲು ಹೇಗೆ ಕಾಣಿಸುತ್ತದೋ ಅದೇ ವಿನ್ಯಾಸವನ್ನ ಈ ವೈರಲ್ ಫೋಟೋದಲ್ಲಿರುವ ವಂದೇ ಭಾರತ್ ಬಸ್‌ನಲ್ಲಿ ಕೂಡ ಕಾಣಬಹುದಾಗಿದೆ. ಹೀಗಾಗಿ ಸಾಕಷ್ಟು ಮಂದಿ ಇದು ನಿಜವೆಂದು ಶೇರ್ ಮಾಡುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ಬನಾರಸ್ ಮತ್ತು ಗಾಜಿಪುರ ನಡುವೆ ವಂದೇ ಭಾರತ್ ಬಸ್ ಸೇವೆ ಆರಂಭವಾಗಿದೆಯೇ ಎಂದು ಹುಡುಕಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲಿಸಿತ್ತು. ಇದಕ್ಕಾಗಿ ಯಾವುದಾದರು ಮಾಧ್ಯಮಗಳು ಅಧಿಕೃತ ವರದಿಯನ್ನ ಪ್ರಕಟಿಸಿವೆ ಎಂದು ಹುಡುಕಿದಾಗ ಅಂತಹ ಯಾವುದೇ ವರದಿಗಳು ಕೂಡ ಕಂಡು ಬಂದಿಲ್ಲ.
ಇನ್ನು ಕೇಂದ್ರ ಸರ್ಕಾರ ಅಥವಾ ಉತ್ತರ ಪ್ರದೇಶ ರಾಜ್ಯ ಸರ್ಕಾರ ಈ ಕುರಿತು ಯಾವುದಾದರೂ ಆದೇಶವನ್ನು ಹೊರಡಿಸಿದೆಯೇ ಅಂತ ಪರಿಶೀಲನೆ ನಡೆಸಿದಾಗ ಯಾವುದೇ ಅದೇಶಗಳು ಕಂಡು ಬಂದಿಲ್ಲ. ಈ ಕುರಿತು ಉತ್ತರ ಪ್ರದೇಶದ ಸಾರಿಗೆ ಸಂಸ್ಥೆ ಕೂಡ ಯಾವುದೇ ಅಧಿಕೃತ ಹೇಳಿಕೆಯನ್ನ ಬಿಡುಗಡೆ ಮಾಡಿಲ್ಲ..
ಇನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ವಂದೇ ಭಾರತ್ ರೈಲಿನ ಚಿತ್ರವೊಂದು ಕಂಡು ಬಂದಿದೆ. ಆ ರೈಲಿನ ಚಿತ್ರದ ಮುಂಭಾಗವೂ ಈ ವೈರಲ್ ಫೋಟೋದಲ್ಲಿನ ಬಸ್‌ನ ಚಿತ್ರವೂ ಒಂದೇ ರೀತಿಯಲ್ಲಿದ್ದು, ವಂದೇ ಭಾರತ್ ರೈಲಿನ ಮುಂಭಾಗ ಚಿತ್ರನ್ನು ತೆಗೆದು ಬಸ್‌ವೊಂದರ ಮುಂಭಾಗದ ಚಿತ್ರಕ್ಕೆ ಜೋಡಿಸಿ ಎಡಿಟ್ ಮಾಡಿದ ನಂತರ ಇದೇ ವಂದೇ ಭಾರತ್ ಬಸ್ ಎಂದು ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : Fact Check | ಪೀರ್ ಪಾಷ ಬಂಗ್ಲಾವೇ ಮೂಲ ಅನುಭವ ಮಂಟಪ ಎಂಬುದಕ್ಕೆ ಯಾವುದೇ ಆಧಾರವಿಲ್ಲ
ವಿಡಿಯೋ ನೋಡಿ : Fact Check | ಪೀರ್ ಪಾಷ ಬಂಗ್ಲಾವೇ ಮೂಲ ಅನುಭವ ಮಂಟಪ ಎಂಬುದಕ್ಕೆ ಯಾವುದೇ ಆಧಾರವಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ