ಇತ್ತೀಚೆಗೆ ನಮ್ಮ ಭಾರತದ ಸಂವಿಧಾನವನ್ನು ತಪ್ಪಾಗಿ ಅರ್ಥೈಸುವ ಮೂಲಕ ಸಂವಿಧಾನಕ್ಕೆ ಅಗೌರವ ತರುವಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ಇದರ ಭಾಗವಾಗಿ “ಮೋದಿಯ ಎರಡನೇ ಹೊಡೆತ ಬರಲಿದೆ, 30-A ಕಾಯಿದೆಯನ್ನು ರದ್ದುಗೊಳಿಸಬಹುದು. ನೆಹರೂ ಅವರು ಹಿಂದೂಗಳಿಗೆ ಮಾಡಿದ ದ್ರೋಹವನ್ನು ಸರಿಪಡಿಸಲು ಮೋದಿ ಜಿ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಸಂವಿಧಾನದ 30-A ಕಾನೂನಿನ ಪ್ರಕಾರ – ಹಿಂದೂಗಳು ತಮ್ಮ “ಹಿಂದೂ ಧರ್ಮ” ವನ್ನು ಕಲಿಸಲು/ಬೋಧಿಸಲು ಅವಕಾಶವಿಲ್ಲ. “ಕಾನೂನು 30″ ರ ಪ್ರಕಾರ ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ತಮ್ಮ ಧಾರ್ಮಿಕ ಶಿಕ್ಷಣಕ್ಕಾಗಿ ಇಸ್ಲಾಮಿಕ್, ಸಿಖ್, ಕ್ರಿಶ್ಚಿಯನ್ ಧಾರ್ಮಿಕ ಶಾಲೆಗಳನ್ನು ಪ್ರಾರಂಭಿಸಬಹುದು.” ಎಂಬ ಸಂದೇಶವೊಂದು ಹಲವಾರು ದಿನಗಳಿಂದ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ.
ಈ ಹಿಂದೆ ಇದೇ ಸುದ್ದಿಯನ್ನು ಆರ್ಟಿಕಲ್ 30-A ಕಾಯಿದೆಯ ಪ್ರಕಾರ ಶಾಲಾ-ಕಾಲೇಜುಗಳಲ್ಲಿ ಕುರಾನ್ ಭೋದಿಸಬಹುದು ಆದರೆ ಭಗವದ್ಗೀತೆ ಭೋದಿಸುವಂತಿಲ್ಲ ಎಂದಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿತ್ತು. 2021 ರಲ್ಲಿ ಇದೇ ರೀತಿಯ ಪ್ರತಿಪಾದನೆ ಹೊಂದಿರುವ ಮತ್ತೊಂದು ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೊದಲ್ಲಿ, ನಮ್ಮ ಸಂವಿಧಾನದಲ್ಲಿ ಆರ್ಟಿಕಲ್ 30(ಎ) ಅಂತಹ ಒಂದು ಷರತ್ತು ಇದೆ, ಇದರ ಅನ್ವಯ ಹಿಂದೂಗಳು ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಹಿಂಧು ಧರ್ಮದ ಆಧಾರದ ಮೇಲೆ ಬೋಧನೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಧರ್ಮ ಅಥವಾ ತಮ್ಮದೇ ಆದ ಧಾರ್ಮಿಕ ಸಂಸ್ಥೆಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಆದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ತಮ್ಮ ಮದರಸಾಗಳನ್ನು ನಡೆಸಲು ಮತ್ತು ಧಾರ್ಮಿಕ ಬೋಧನೆಗಳನ್ನು ಒದಗಿಸಲು ಅನುಮತಿಸುವ ಮತ್ತೊಂದು ಷರತ್ತು 30 ರಲ್ಲಿ ಇದೆ. ಎಂದು ಪ್ರತಿಪಾದಿಸಿದ್ದಾರೆ. ಈ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು. ಫ್ಯಾಕ್ಟ್‌ಚೆಕ್: ಸಂವಿಧಾನದಲ್ಲಿ ಆರ್ಟಿಕಲ್ 30(ಎ) ಎಂಬ ಯಾವುದೇ ವಿಧಿ ಅಸ್ತಿತ್ವದಲ್ಲಿಲ್ಲ. ಆರ್ಟಿಕಲ್ 30ರ ಉಪ ಷರತ್ತು ಆರ್ಟಿಕಲ್ 30(1ಎ) ಎಂದಿದೆ. ಆರ್ಟಿಕಲ್ 30(1ಎ) ಹೇಳುವಂತೆ ಎಲ್ಲಾ ಅಲ್ಪಸಂಖ್ಯಾತರು, ಧರ್ಮ ಅಥವಾ ಭಾಷೆಯ ಆಧಾರದ ಮೇಲೆ ಅವರ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಹೊಂದಿರುತ್ತಾರೆ.ಆರ್ಟಿಕಲ್ 30(1ಎ) ಅಲ್ಪಸಂಖ್ಯಾತ ಗುಂಪುಗಳಿಂದ ಸ್ಥಾಪಿಸಲಾದ ಯಾವುದೇ ಶಿಕ್ಷಣ ಸಂಸ್ಥೆಯ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ಮೊತ್ತವನ್ನು ನಿಗದಿಪಡಿಸಬೇಕೆಂದು ತಿಳಿಸುತ್ತದೆ.
ಇದನ್ನು ಓದಿ: Fact Check | ಪೀರ್ ಪಾಷ ಬಂಗ್ಲಾವೇ ಮೂಲ ಅನುಭವ ಮಂಟಪ ಎಂಬುದಕ್ಕೆ ಯಾವುದೇ ಆಧಾರವಿಲ್ಲ
ವಿಡಿಯೋ ನೋಡಿ: Fact Check | ಟಿಪ್ಪು ಸುಲ್ತಾನ್ KRS ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬುದು ಸತ್ಯ