Fact Check | ರಾಷ್ಟ್ರಪತಿ ಭವನದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬುದು ಸುಳ್ಳು

ರಾಷ್ಟ್ರಪತಿ ಭವನದಲ್ಲಿ ಮೂರನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ  ನಿಗೂಢ ಪ್ರಾಣಿಯೊಂದು ಕಂಡು ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಬಹುತೇಕರು ಇದು ಚಿರತೆ ಇರಬಹುದು ಎಂದು ಊಹಿಸಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಆದರೆ ಹಲವರು ರಾಷ್ಟ್ರಪತಿ ಭವನದಲ್ಲಿ ಕಾಡು ಪ್ರಾಣಿಗಳು ಕಂಡು ಬರುವುದು ಅನುಮಾನ ಇದು ಯಾವುದೋ ಸಾಕುಪ್ರಾಣಿ ಇರಬಹುದು ಎಂದು ಹಂಚಿಕೊಳ್ಳುತ್ತಿದ್ದಾರೆ.

ಇದು ನಾಯಿ, ಬೆಕ್ಕು, ಅಥವಾ ಇನ್ಯಾವುದೋ ಪ್ರಾಣಿ ಇರಬಹುದು ಎಂದು ಹಲವರು ಹಂಚಿಕೊಂಡಿದ್ದರು, ವಿಡಿಯೋದಲ್ಲಿ ಪ್ರಾಣಿಯ ಎತ್ತರವನ್ನು ನೋಡಿದವರು ಇದು ಚಿರತೆಯೇ ಎಂದೆ ಭಾವಿಸಿದ್ದರು. ಇದೇ ಕಾರಣದಿಂದ ಹಲವು ಮಾಧ್ಯಮಗಳು ರಾಷ್ಟ್ರಪತಿ ಭವನದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಯಾರ ಬಳಿಯೂ ಯಾವುದೇ ಸ್ಪಷ್ಟನೆಯನ್ನು ತೆಗೆದುಕೊಳ್ಳದೆ ಸುದ್ದಿಯನ್ನು ಹಂಚಿಕೊಂಡಿವೆ. ಹಾಗಿದ್ದರೆ ಇದರ ಅಸಲಿಯತ್ತು ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಕನ್ನಡ ಸುದ್ದಿ ವಾಹಿನಿಯ ಮತ್ತು ಪತ್ರಿಕೆಗಳಲ್ಲಿ ಹಲವು ವರದಿಗಳು ಕಂಡು ಬಂದವು ಅದರಲ್ಲಿ ಕೆಲವೊಂದು ರಾಷ್ಟ್ರಪತಿ ಭವನದಲ್ಲಿ ಕಂಡು ಬಂದಿರುವುದು ಕಾಡುಪ್ರಾಣಿಯಲ್ಲ ಬದಲಿಗೆ ಅದು ಸಾಕು ಪ್ರಾಣಿ ಎಂಬ ಉಲ್ಲೇಖವಿತ್ತು.

ಆದರೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಹುಡುಕಾಟ ನಡೆಸಿದಾಗ ಜೂನ್‌ 10 ರಂದು ರಾತ್ರಿ 8:38ಕ್ಕೆ ದೆಹಲಿ ಪೊಲೀಸ್‌ ಇಲಾಖೆ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಕಂಡು ಬಂದಿದೆ

ಆ ಪೋಸ್ಟ್‌ನಲ್ಲಿ “ಸಾಮಾಜಿಕ ಜಾಲತಾಣ ಮತ್ತು ಕೆಲವೊಂದು ಮಾಧ್ಯಮಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕರ ಸಮಾರಂಭದಲ್ಲಿ ಕಂಡು ಬಂದ ಪ್ರಾಣಿಯನ್ನು ಕಾಡುಪ್ರಾಣಿ ಎಂದು ಉಲ್ಲೇಖಿಸಲಾಗುತ್ತಿದೆ. ಆದರೆ ಇದು ಯಾವುದೇ ಕಾಡುಪ್ರಾಣಿಯಲ್ಲಿ ಇದೊಂದು ಸಮಾನ್ಯ ಸಾಕು ಬೆಕ್ಕು. ಹಾಗಾಗಿ ದಯಮಾಡಿ ಇಂತಹ ಕ್ಷುಲ್ಲಕ ವದಂತಿಯನ್ನು ಹಬ್ಬಬೇಡಿ ಎಂದು ದೆಹಲಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.”

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ರಾಷ್ಟ್ರಪತಿ ಭವನದಲ್ಲಿ ಕಂಡು ಬಂದ ಪ್ರಾಣಿ ಚಿರತೆಯಲ್ಲ ಬೆಕ್ಕು ಎಂಬುದು ಸ್ಪಷ್ಟವಾಗಿದ್ದು ಇಂತಹ ಸುದ್ದಿಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿ..


ಇದನ್ನೂ ಓದಿ :ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂಬುದು ದೇವೇಗೌಡರ ಹೇಳಿಕೆಯೇ ಹೊರತು ಸಿದ್ದರಾಮಯ್ಯನವರದ್ದಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *