ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಿಸಿದ ‘ಘರ್ ಘರ್ ಗ್ಯಾರಂಟಿ’ ಅಡಿಯಲ್ಲಿ ಮಹಾಲಕ್ಷ್ಮಿ ಯೋಜನೆಗೆ ಅರ್ಜಿ ನಮೂನೆಯನ್ನು ಸಲ್ಲಿಸಲು ತೆರಳಿದ್ದ ಅಮೇಥಿಯ ಮಹಿಳೆಯೊಬ್ಬರು ದೀರ್ಘ ಸರದಿಯಲ್ಲಿ ನಿಂತು ಬಿಸಿಗಾಳಿಯಿಂದ ಸಾವನ್ನಪ್ಪಿದ್ದಾರೆ. ಎಂದು ಹೇಳುವ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್: ವೈರಲ್ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಕುರಿತು ಕೀವರ್ಡ್ ಹುಡುಕಾಟವನ್ನು ನಡೆಸಿದ ನಂತರ, ಯಾವುದೇ ಕಾಂಗ್ರೆಸ್ ಕಚೇರಿಯ ಬಳಿ ಹಿರಿಯ ಮಹಿಳೆಯೊಬ್ಬರು ಬಿಸಿಗಾಳಿಯ ಶಾಖದ ಅಲೆಯಿಂದ ಸಾವನ್ನಪ್ಪಿದ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ.ಆದರೆ,‘ಘರ್ ಘರ್ ಗ್ಯಾರಂಟಿ’ (ಇಲ್ಲಿ ಮತ್ತು ಇಲ್ಲಿ) ಭಾಗವಾಗಿ ಮಹಾಲಕ್ಷ್ಮಿ ಯೋಜನೆಯಡಿ ತಿಂಗಳಿಗೆ 8,500 ರೂ. ಗ್ಯಾರಂಟಿ ಕಾರ್ಡ್ ಪಡೆಯಲು ಹಲವು ಮಹಿಳೆಯರು ಕಾಂಗ್ರೆಸ್ ಕಚೇರಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.
संदर्भित प्रकरण की जांच से कांग्रेस कार्यालय के पास किसी भी महिला की मृत्यु की बात प्रकाश में नहीं आई है । कृपया भ्रामक खबर प्रसारित न करें ।
— AMETHI POLICE (@amethipolice) June 8, 2024
ಹೆಚ್ಚಿನ ತನಿಖೆಯ ನಂತರ, ಅಮೇಥಿ ಪೊಲೀಸರು ತಮ್ಮ ವಿಚಾರಣೆಯಲ್ಲಿ ಕಾಂಗ್ರೆಸ್ ಕಚೇರಿಯ ಮುಂದೆ ಅಂತಹ ಯಾವುದೇ ಘಟನೆ ನಡೆದಿರುವುದು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದು, ಹಂಚಿಕೊಳ್ಳುತ್ತಿರುವ ಸಂದೇಶ ನಕಲಿ ಎಂದು ದೃಢಪಡಿಸಿದೆ.
ಇದನ್ನು ಓದಿ: ರಾಷ್ಟ್ರಪತಿ ಭವನದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬುದು ಸುಳ್ಳು
ವೀಡಿಯೋ ನೋಡಿ: ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.