Fact Check | ದೇಶದ ಸಂಪತ್ತಿನಲ್ಲಿ ಮುಸ್ಲಿಮರು ಮೊದಲ ಹಕ್ಕುದಾರರಾಗಿದ್ದಾರೆಂದು ಯೋಗಿ ಆದಿತ್ಯನಾಥ್ ಹೇಳಿಲ್ಲ

“ದೇಶದ ಸಂಪತ್ತಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಮೊದಲ ಆದ್ಯತೆ ನೀಡಲಾಗಿ ಮತ್ತು ಅವರೇ ಮೊದಲ ಹಕ್ಕುದಾರರಾಗಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಹೇಳಿದ್ದಾರೆ” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಬಹುತೇಕರು ಇದು ನಿಜವಿರಬಹುದು ಎಂದು ವ್ಯಾಪಕವಾಗಿ ಹಂಣಚಿಕೊಳ್ಳುತ್ತಿದ್ದಾರೆ.

ಇನ್ನು, ಈ ವಿಡಿಯೋದಲ್ಲಿ ಯೋಗಿ ಆದಿತ್ಯನಾಥ್‌ ಅವರೇ ಮಾತನಾಡುವುದನ್ನು ನೋಡಬಹುದಾಗಿದೆ. ಇದರಲ್ಲಿ ಅವರದ್ದೇ ಧ್ವನಿ ಇರುವುದರಿಂದ ಅವರೇ ಈ ಮಾತುಗಳನ್ನು ಹೇಳಿದ್ದಾರೆ ಎಂಬ ಅರ್ಥದಲ್ಲಿ ವ್ಯಾಪಕವಾಗಿ ಸುದ್ದಿತಯನ್ನು ಹಂಚಿಕೊಳ್ಳಲಾತ್ತಿದೆ. ಇದರ ಜೊತೆಗೆ ಇನ್ನೂ ಕೆಲವರು ಬಿಜೆಪಿ ತಮ್ಮ ತಪ್ಪನ್ನು ತಿದ್ದಿಕೊಂಡು ಹೊಸ ನಿಲುವುಗಳನ್ನು ತೆಳೆದಿದ್ದಾರೆ. ಮತ್ತು ಯೋಗಿ ಆದಿತ್ಯಾನಾಥ್‌ ಸರ್ಕಾರ ಮುಸ್ಲಿಂರನ್ನು ವೋಟ್‌ ಬ್ಯಾಂಕ್‌ಗಾಗಿ ಬಳಸಿಕೊಳ್ಳಲು ಪ್ರಯತ್ನವನ್ನು ಪಡುತ್ತಿದೆ ಎಂದು ಸಾಕಷ್ಟು ಮಂದಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಇದು ನಿಒವೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್‌

ವೈರಲ್‌ ಆಗುತ್ತಿರುವ ವೈರಲ್‌ ಕ್ಲಿಪ್‌ ಕುರಿತು ಮತ್ತು ಪೋಸ್ಟ್‌ನಲ್ಲಿ ಉಲ್ಲೇಖವಾದ ಬರಹಗಳನ್ನು ಪರಿಶೀಲಿಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು ಇದಕ್ಕಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ರಾಜಸ್ತಾನ್‌ ಪತ್ರಿಕಾ ಎಂಬ ಸುದ್ದಿ ಸಂಸ್ಥೆಯೊಂದು ವಿಡಿಯೋ ಹಂಚಿಕೊಂಡಿರುವುದು ಪತ್ತೆಯಾಗಿದೆ. ಏಪ್ರಿಲ್‌ 24ರಂದು  ವಿಡಿಯೋವನ್ನು ಈ ಸುದ್ದಿ ಸಂಸ್ಥೆ ತನ್ನ ಯೂಟ್ಯುಬ್‌ನಲ್ಲಿ ಹಂಚಿಕೊಂಡಿದೆ. ಇದರಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಎಂಬ ಶೀರ್ಷಿಕೆ ಕಂಡು ಬಂದಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಹುಡುಕಾಟ ನಡೆಸಿದಾಗ ಏಷ್ಯನ್ ನ್ಯೂಸ್ ಇಂಟರ್‌ನ್ಯಾಶನಲ್ (ANI) ಸುದ್ದಿ ಸಂಸ್ಥೆಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಅವರು ನೀಡಿದ ಹೇಳಿಕೆಯ ಪೂರ್ಣ ಆವೃತ್ತಿಯ ವಿಡಿಯೋ ಪತ್ತೆಯಾಗಿದೆ. 4:06 ನಿಮಿಷದ ಆ ವಿಡಿಯೋದಲ್ಲಿ “ಡಾ. ಮನಮೋಹನ್ ಸಿಂಗ್ ಅವರು ಭಾರತದ ಪ್ರಧಾನಿಯಾಗಿದ್ದಾಗ, ನಮ್ಮ ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಯಾವ ಆಧಾರದ ಮೇಲೆ ಹೇಳಿದ್ದರು, ನೀವು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವೆ ಹಾಗೂ ಮುಸ್ಲಿಮರು ಮತ್ತು ಮುಸ್ಲಿಮೇತರರು? ಎಂದು ದೇಶವನ್ನು ವಿಭಜಿಸಲು ಬಯಸಿದ್ದೀರಿ” ಎಂದು ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿರುವುದನ್ನು ನೋಡಬಹುದಾಗಿದೆ.

ಇನ್ನು, ಇದೇ ರೀತಿಯಾಗಿ ಈ ಹಿಂದೆ ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಹೇಳಿಕೆಯನ್ನು ನೀಡಿದ್ದರು.ಇದು ತಪ್ಪು ಮಾಹಿತಿಯಿಂದ ಕೂಡಿತ್ತು ಎಂದು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಈ ಕುರಿತು ಈ ಹಿಂದೆಯೇ ವರದಿ ಮಾಡಿತ್ತು. ಅದನ್ನು ನೀವು ಇಲ್ಲಿ ನೋಡಬಹುದಾಗಿದೆ..

ಒಟ್ಟಾರೆಯಾಗಿ ಹೇಳುವುದಾದರೆ ಯೋಗಿ ಆದಿತ್ಯನಾಥ್‌ ಅವರು ಮುಸಲ್ಮಾನರು ದೇಶದ ಸಂಪತ್ತಿನಲ್ಲಿ ಮೊದಲ ಹಕ್ಕು ಪಡೆದಿದ್ದಾರೆಂದು ಹೇಳಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ.


ಇದನ್ನೂ ಓದಿ : ಮನಮೋಹನ್ ಸಿಂಗ್ ಅವರ 18 ವರ್ಷಗಳ ಹಳೆಯ ಭಾಷಣದ ಕುರಿತು ಸುಳ್ಳು ಹೇಳಿದ ಪ್ರಧಾನಿ ಮೋದಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *