Fact Check | ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ಕೋತಿಯೊಂದು ದಾಳಿ ನಡೆಸಿದೆ ಎಂಬುದು ಸುಳ್ಳು
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕಾರಿಗಳಿಂದ ಸುತ್ತುವರೆದಿರುವ ಕಟ್ಟಡದಿಂದ ಹೊರಬರುವಾಗ ಕೋತಿಯೊಂದು ಅವರ ಮೇಲೆ ದಾಳಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ನಿಜವಾದ ಘಟನೆ ಎಂಬಂತೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋ ಕೂಡ ನಿಜವಾದ ವಿಡಿಯೋದಂತೆ ಕಂಡು ಬಂದಿರುವುದರಿಂದ ಹಲವರು ಇದಕ್ಕೆ ವಿವಿಧ ಬರಹಗಳನ್ನು ಬರೆದುಕೊಂಡು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ವಿಡಿಯೋವನ್ನು ಬಳಸಿಕೊಂಡು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಹೀಗಾಗಿ ವಿಡಿಯೋ ಸಾಕಷ್ಟು ಹಂಚಿಕೆಯನ್ನು ಕಂಡುದ್ದು ಸಾರ್ವಜನಿಕ ವಲಯದಲ್ಲಿ ವಿವಿಧ…
