ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ‘ಈಸ್ ಬಾರ್ 400 ಪಾರ್’ ಅನ್ನು ಪದೇ ಪದೇ ಹೇಳುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ನೋಡಿದ ಬಹುತೇಕರು ಈತ ಬಿಜೆಪಿಯ ಚುನಾವಣ ಘೋಷಣೆಯನ್ನು ಹೇಳಿ ಹೇಳಿ ಮಾನಸಿಕ ಸ್ಥೀಮತತೆಯನ್ನು ಕಳೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದೇ ವಿಡಿಯೋದಲ್ಲಿ ಮತ್ತೊಬ್ಬ ವ್ಯಕ್ತಿ ಘೋಷಣೆ ಕೂಗುತ್ತಿರುವ ವ್ಯಕ್ತಿಯನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತಿರುವುದನ್ನು ಕೂಡ ಚಿತ್ರಿಸಲಾಗಿದೆ. ನಂತರ ಮಾನಸಿಕ ಸ್ಥಿಮಿತತೆ ಕಳೆದುಕೊಂಡ ವ್ಯಕ್ತಿಯನ್ನು ನಿಯಂತ್ರಿಸಲು ವೈದ್ಯರು ಚುಚ್ಚುಮದ್ದು ಕೊಡುವುದನ್ನು ಕೂಡ ವಿಡಿಯೋದಲ್ಲಿ ಗಮನಿಸಬಹುದಾಗಿದೆ.. ಇದೇ ವಿಡಿಯೋವನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದು, ಬಿಜೆಪಿಯ “ಇಸ್ ಬಾರ್ 400 ಪಾರ್” ಎಂದು ಘೋಷಣೆಯನ್ನು ಕೂಗಿದವರಿಗೆ ಬೇಗ ಹುಚ್ಚು ಹಿಡಿಯುವುದರಲ್ಲಿ ಅನುಮಾನವಿಲ್ಲ ಎಂದು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್
ಹೀಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಿದ್ದು, ವೈರಲ್ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶಿಲನೆ ನಡೆಸಿತು. ಈ ವೇಳೆ ಇದೇ ವಿಡಿಯೋದಲ್ಲಿನ ವ್ಯಕ್ತಿಯನ್ನು ಎನ್ಕ್ವೈರ್ ಟುಡೆ ನ್ಯೂಸ್ ಎಂಬ ಸುದ್ದಿ ಮಾಧ್ಯಮವೊಂದು 23 ಮೇ 2024 ರಂದು ಸಂದರ್ಶನ ನಡೆಸಿರುವ ವಿಡಿಯೋವೊಂದು ಕಂಡು ಬಂದಿತು. ಈ ವಿಡಿಯೋದಲ್ಲಿ “ಅಬ್ ಕೀ ಬಾರ್ 400 ಪಾರ್ ವಾಲಿ ರೀಲ್ ಬನಾನೆ ಕೌನ್ ಥಾ?” ಎಂದು ಶೀರ್ಷಿಕೆಯನ್ನು ನೀಡಿ ಸಂದರ್ಶನವನ್ನು ನಡೆಸಿದ್ದು ತಿಳಿದು ಬಂದಿದೆ.
ಈ ಸಂದರ್ಶನದಲ್ಲಿ ಮಾತನಾಡಿದ ವ್ಯಕ್ತಿ ತಮ್ಮ ಹೆಸರು ರಾಜಿಂದರ್ ಥಾಪ್ಪ ಎಂದು ತಿಳಿಸಿದ್ದು, ಇವರು ಈ ವೈರಲ್ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.” ‘ಉಡ್ತಾ ಜಮ್ಮು’ ಎಂಬ ಸಿನಿಮಾ ಮಾಡುವಾಗ ಈ ದೃಶ್ಯವನ್ನು ಚಿತ್ರೀಕರಿಸಿದ್ದೇನೆ” ಎಂದು ಥಾಪ್ಪಾ ಅವರು ತಿಳಿಸಿದ್ದು, ಇದು ನಿಜವಾದ ಘಟನೆ ಅಲ್ಲ ಎಂದು ಕೂಡ ಸ್ಪಷ್ಟ ಪಡಿಸಿದ್ದಾರೆ. ಇದರ ಜೊತಗೆ ಈ ರೀಲ್ ವೈರಲ್ ಆದ ನಂತರ ಜನರು ಈ ಉಡ್ತಾ ಜಮ್ಮು ಚಿತ್ರದ ಸೀಕ್ವೆಲ್ ಮಾಡಲು ವಿನಂತಿಸುತ್ತಿದ್ದಾರೆ ಎಂದು ಸಂದರ್ಶನದಲ್ಲಿ ವಿವರಿಸಿದ್ದಾರೆ.
ಇನ್ನು ಈ ಕುರಿತು ಬೂಮ್ ಲೈವ್‌ಗೆ ಈ ವೈರಲ್ ವೀಡಿಯೊದ ಬಗ್ಗೆ ಥಾಪ್ಪಾ ಹೇಳಿಕೆ ನೀಡಿದ್ದು, “ ಈ ಸ್ಕ್ರಿಪ್ಟ್ ವೀಡಿಯೊವನ್ನು ಸುಮಾರು 2 ವಾರಗಳ ಹಿಂದೆ ಮಾಡಲಾಗಿದೆ. ನಾವು ಚಿತ್ರದ ಶೂಟಿಂಗ್ ಮಾಡುತ್ತಿದ್ದೆವು ಮತ್ತು ಅಷ್ಟರಲ್ಲಿ ನಾನು ಬಿಜೆಪಿ ಕಾರ್ಯಕ್ರಮದಿಂದ ಹಿಂತಿರುಗಿದೆ. ಆಗ ನನಗೆ ಈ ಸನ್ನೀವೇಶವನ್ನು ಚಿತ್ರಿಸುವ ಆಲೋಚನೆ ಬಂತು ಹಾಗಾಗಿ ನನ್ನ ಸ್ನೇಹಿತರೊಂದಿಗೆ ಈ ಮನರಂಜನೆಯ ವೀಡಿಯೊವನ್ನು ಮಾಡಿದ್ದೇನೆ. ಅದು ಇದ್ದಕ್ಕಿದ್ದಂತೆ ವೈರಲ್ ಆಯಿತು. ” ಎಂದು ಹೇಳಿಕೆಯನ್ನು ನೀಡಿದ್ದಾರೆ.
ಒಟ್ಟಾರೆಯಾಗಿ ವೈರಲ್ ಸಂಪೂರ್ಣವಾಗಿ ಪೂರ್ವ ನಿಯೋಜಿತ ಚಿತ್ರೀಕರಣವಾಗಿತ್ತು, ಈ ವಿಡಿಯೋಗೆ ಸಂಬಂಧ ಪಟ್ಟಂತೆ ವಿಡಿಯೋದಲ್ಲಿ ನಟಿಸಿದಂತ ರಾಜಿಂದರ್ ಥಾಪ್ಪ ಅವರೇ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಹಾಗಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸುಳ್ಳು ಬರಹಗಳಿಂದ ಕೂಡಿದೆ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ LLB ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದೆಯೇ ಹೊರತು UPSC ಪರೀಕ್ಷೆಯಲ್ಲಿ ಅಲ್ಲ
ಈ ವಿಡಿಯೋ ನೋಡಿ : ಉತ್ತರ ಪ್ರದೇಶದಲ್ಲಿ LLB ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದೆಯೇ ಹೊರತು UPSC ಪರೀಕ್ಷೆಯಲ್ಲಿ ಅಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ