Fact Check: ಕಾಂಗ್ರೆಸ್ ಸಂವಿಧಾನವನ್ನು ನಾಶಮಾಡಲು ಬಯಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿಲ್ಲ

ರಾಹುಲ್ ಗಾಂಧಿ

ಕಾಂಗ್ರೆಸ್ ಪಕ್ಷವು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶಮಾಡಲು ಬಯಸುತ್ತದೆ ಮತ್ತು ಭಾರತೀಯ ಜನತಾ ಪಕ್ಷವು (ಬಿಜೆಪಿ) ಅದನ್ನು ರಕ್ಷಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿರುವ ವಿಡಿಯೋ ಒಂದು ಈಗ ಸಾಕಷ್ಟಯ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, “ನಮಸ್ಕಾರ, ನಾನು ರಾಹುಲ್ ಗಾಂಧಿ, ಒಂದು ಕಡೆ ಈ ಚುನಾವಣೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆಯಾದರೆ, ಇನ್ನೋಂದು ಕಡೆ, ಕಾಂಗ್ರೆಸ್ ಪಕ್ಷ ಮತ್ತು ಐಎನ್‌ಡಿಐಎ ಮೈತ್ರಿಕೂಟ ಅದನ್ನು ನಾಶಪಡಿಸುತ್ತಿದೆ, ಮತ್ತೊಂದು ಕಡೆ ಆರ್‌ಎಸ್‌ಎಸ್ ಮತ್ತು ಬಿಜೆಪಿಯು 20-25 ಜನರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿದ್ದಾರೆ, ಮೋದಿಜಿಯವರು ಸಂವಿಧಾನವನ್ನು ಉಳಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಬೆಂಬಲ ನೀಡಿ.” ಎಂದು ರಾಹುಲ್ ಗಾಂಧಿಯವರು ಜನರಲ್ಲಿ ವಿನಂತಿಸಿಕೊಂಡಿದ್ದಾರೆ ಎಂದು ಪ್ರತಿಪಾದಿಸಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. 

ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ಕಾಂಗ್ರೆಸ್ ಪಕ್ಷ ಮತ್ತು I.N.D.I.A ಮೈತ್ರಿಕೂಟವು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಮೂಲ ವಿಡಿಯೋದಲ್ಲಿ ಹೇಳಿದ್ದಾರೆ. 

ವೈರಲ್ ವೀಡಿಯೊದಲ್ಲಿ ಹಲವಾರು ಜಂಪ್ ಕಟ್‌ಗಳಿವೆ ಎಂದು ನಾವು ಗಮನಿಸಬಹುದು, ಇದರಲ್ಲಿ ಆಡಿಯೊವನ್ನು ವಿಭಜಿಸಲಾಗಿದೆ ಮತ್ತು ರಾಹುಲ್ ಗಾಂಧಿ ಬಿಜೆಪಿ ಮತ್ತು ಪ್ರಧಾನಿ ಮೋದಿಗೆ ಮತ ನೀಡುವಂತೆ ಜನರನ್ನು ಕೇಳುತ್ತಿದ್ದಾರೆ ಎಂಬ ಸುಳ್ಳು ಹೇಳಿಕೆಯನ್ನು ಮಾಡಲು ವಿಡಿಯೋವನ್ನು ಎಡಿಟ್ ಮಾಡಲಾಗಿದೆ. 

ಮೂಲ ವೀಡಿಯೊವನ್ನು ಏಪ್ರಿಲ್ 25, 2024 ರಂದು ಪೋಸ್ಟ್ ಮಾಡಲಾಗಿದೆ, ಇದರಲ್ಲಿ “ಈ ಚುನಾವಣೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು, ‘ಮಿತ್ರ ಕಾಲ’ದಿಂದ ಹೊರಬಂದು, ‘ಭಾರತೀಯರ ಸರ್ಕಾರ’ ರಚಿಸಿ. ಪ್ರಜಾಪ್ರಭುತ್ವದ ಕಡೆಗೆ ನಿಮ್ಮ ಕರ್ತವ್ಯವನ್ನು ಸಲ್ಲಿಸಿ, ಬನ್ನಿ ಕಾಂಗ್ರೆಸ್‌ಗೆ ಮತ ನೀಡಿ. ಎಂದು ಹೇಳಿದ್ದಾರೆ.

ಮೂಲ ವಿಡಿಯೋದಲ್ಲಿ ರಾಹುಲ್ ಹೀಗೆ ಹೇಳುತ್ತಾರೆ, “ನಮಸ್ಕಾರ, ನಾನು ರಾಹುಲ್ ಗಾಂಧಿ, ಒಂದು ಕಡೆ ಈ ಚುನಾವಣೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆಯಾದರೆ, ಇನ್ನೋಂದು ಕಡೆ, ಕಾಂಗ್ರೆಸ್ ಪಕ್ಷ ಮತ್ತು ಐಎನ್‌ಡಿಐಎ ಮೈತ್ರಿಕೂಟ ಇವನ್ನು ಉಳಿಸಿದರೆ, ಮತ್ತೊಂದು ಕಡೆ ಆರ್‌ಎಸ್‌ಎಸ್ ಮತ್ತು ಬಿಜೆಪಿಯು 20-25 ಜನರನ್ನು ಮಾತ್ರ ಕೋಟ್ಯಾಧಿಪತಿಗಳನ್ನಾಗಿ ಮಾಡಿದ್ದಾರೆ, ನಾವು ರೈತರಿಗೆ ಕಾನೂನುಬದ್ಧ MSP ಅನ್ನು ಒದಗಿಸುತ್ತೇವೆ ಮತ್ತು ಅವರ ಸಾಲವನ್ನು ಮನ್ನಾ ಮಾಡಲಿದ್ದೇವೆ ಕನಿಷ್ಠ ವೇತನ 400, ಇದು ದೇಶವನ್ನು ಬದಲಾಯಿಸುವ ಪ್ರಣಾಳಿಕೆಯಾಗಿದೆ, ಸಂವಿಧಾನವನ್ನು ಉಳಿಸಲು ಕಾಂಗ್ರೆಸ್ ಅನ್ನು ಬೆಂಬಲಿಸಿ.” ಎಂದಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಬಗ್ಗೆ ಮಾತನಾಡುವ ಭಾಗಗಳನ್ನು ಬಿಜೆಪಿ ಮತ್ತು ಮೋದಿಜಿ ಎಂದು ಬದಲಿಸಲಾಗಿದೆ ಮತ್ತು ಅವರು ಬಿಜೆಪಿಯನ್ನು ಟೀಕಿಸುವ ಭಾಗವನ್ನು ಕಾಂಗ್ರೆಸ್ ಎಂದು ಬದಲಾಯಿಸಲಾಗಿದೆ. ಈ ಕೆಳಗೆ ಮೂಲ ವಿಡಿಯೋವನ್ನು ನೀವು ನೋಡಬಹುದು.

ಹೆಚ್ಚುವರಿಯಾಗಿ, ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಜೋಧ್‌ಪುರ ಅಭಿವೃದ್ಧಿಪಡಿಸಿದ ಡೀಪ್‌ಫೇಕ್ ಪತ್ತೆ ಸಾಧನವಾದ Itisaar ಅನ್ನು ಬಳಸಿಕೊಂಡು ನಾವು ವೈರಲ್ ವೀಡಿಯೊವನ್ನು ವಿಶ್ಲೇಷಿಸಿದ್ದೇವೆ, ಇದು ಡೀಪ್‌ಫೇಕ್ ಅಲ್ಲ ಎಂದು ತೋರಿಸಿದೆ, ಆದಾಗ್ಯೂ ಅದು ಕ್ಲಿಪ್‌ನ ಆಡಿಯೊವನ್ನು ಬದಲಾಯಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.


ಇದನ್ನು ಓದಿ: “ಇಸ್‌ ಬಾರ್‌ 400 ಪಾರ್‌” ಎಂದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂಬುದು ಸುಳ್ಳು


ವಿಡಿಯೋ ನೋಡಿ: ಉತ್ತರ ಪ್ರದೇಶದಲ್ಲಿ LLB ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದೆಯೇ ಹೊರತು UPSC ಪರೀಕ್ಷೆಯಲ್ಲಿ ಅಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *