ಬುದ್ಧ

Fact Check: ಲಾವೋಸ್‌ ನಲ್ಲಿ ಪತ್ತೆಯಾದ ಬೃಹತ್ ಬುದ್ಧನ ಪ್ರತಿಮೆಯನ್ನು ನೇಪಾಳದಲ್ಲಿ ಪತ್ತೆಯಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ

ಬುದ್ಧ ಪೂರ್ಣಿಮೆಗೆ ಕೆಲವೇ ದಿನಗಳು ಬಾಕಿ ಇದ್ದ ಸಂದರ್ಭದಲ್ಲಿ ನೇಪಾಳದಲ್ಲಿ 1200 ವರ್ಷಗಳಷ್ಟು ಹಳೆಯದಾದ ಬೃಹತ್ ಬುದ್ಧನ ಮೂರ್ತಿ ಪತ್ತೆಯಾಗಿದೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಭೂಮಿಯಲ್ಲಿ ಹುದುಗಿದ್ದ ಬೃಹತ್ ಪ್ರತಿಮೆಯನ್ನು ಉತ್ಖನನ ನಡೆಸಿ ಹೊರ ತೆಗೆಯುವುದನ್ನು ನೋಡಬಹುದು. ಇದು ನೇಪಾಳದಲ್ಲಿ ಪತ್ತೆಯಾಗಿದೆ ಎಂದು ಎಲ್ಲೆಡೆ ವೈರಲ್ ಆಗುತ್ತಿದೆ. ನಿಜಕ್ಕೂ ಈ ಬುದ್ಧನ ಮೂರ್ತಿ ನೇಪಾಳದಲ್ಲಿ ಪತ್ತೆಯಾಗಿದೆಯೇ? ಈ ಲೇಖನದ ಮೂಲಕ ಪರಿಶೀಲಿಸೋಣ. 1200 years old Gowtham Buddha statue…

Read More

Fact Check | ಕೇಂದ್ರ ಸರ್ಕಾರ ಪ್ರತೀ ಮನೆಗಳಿಗೆ ಉಚಿತ ವೈ-ಫೈ ಒದಗಿಸುತ್ತದೆ ಎಂಬುದು ಸುಳ್ಳು

ಕೇಂದ್ರ ಸರ್ಕಾರವು ತನ್ನ ಸಂಚಾರ್ ಸಾಥಿ ವೆಬ್ಸೈಟ್‌ನಲ್ಲಿ “ನಿಮ್ಮ ISP (ಇಂಟರ್ನೆಟ್ ಸರ್ವಿಸ್ ಪ್ರೊವೈಡರ್) ಅನ್ನು ತಿಳಿಯಿರಿ” ಸೌಲಭ್ಯದ ಮೂಲಕ ಪ್ರತಿ ಮನೆಗಳಿಗೆ ಉಚಿತ ವೈಫೈಯನ್ನು ಒದಗಿಸುತ್ತಿದೆ. ಈ ಸೌಲಭ್ಯವನ್ನು ನೀವು ಪಡೆಯಿರಿ ಮತ್ತು ಈ ಕುರಿತು ನಿಮ್ಮ ಇತರ ಸ್ನೇಹಿತರಿಗೂ ಹಂಚಿಕೊಳ್ಳಿ ಎಂದು ಇನ್‌ಸ್ಟಾಗ್ರಾಂನ ಕ್ಲಾಸಿಫೈಡ್ ಎಐ ಎಂಬ ಖಾತೆಯಿಂದ ಮಾಹಿತಿಯೊಂದನ್ನು ಹಂಚಿಕೊಳ್ಳಲಾಗಿದೆ. ಈ ಮಾಹಿತಿಯನ್ನು ಆಧರಿಸಿ ಸಾಕಷ್ಟು ಜನ ಸಾರ್ವಜನಿಕರು ಇದು ನಿಜವಿರಬಹುದು ಎಂದು ಭಾವಿಸಿ, ಸಂಚಾರ್‌ ಸಾಥಿ ವೆಬ್‌ಸೈಟ್‌ಗೆ ಭೇಟಿ ನೀಡಿ, ಈ…

Read More

Fact Check | ಸಚಿವ ಎಂ.ಬಿ ಪಾಟೀಲ್‌ ವಿರುದ್ಧ ಮಹೇಶ್‌ ವಿಕ್ರಮ್‌ ಹೆಗ್ಡೆ ಹರಡಿದ್ದ ಸುಳ್ಳು ಸುದ್ದಿ ಮತ್ತೊಮ್ಮೆ ವೈರಲ್‌

ಕರ್ನಾಟಕದ ಕಾಂಗ್ರೆಸ್‌ನ ನಾಯಕ ಹಾಗೂ ಸಚಿವ ಡಾ.ಎಂ.ಬಿ ಪಾಟೀಲ್ ಅವರು, ಸೋನಿಯಾ ಗಾಂಧಿಯವರಿಗೆ 10 ಜುಲೈ 2018ರಂದು BLDEA ( ಬಿಜಾಪುರ ಲಿಂಗಾಯತ ಡಿಸ್ಟ್ರಿಕ್ಟ್ ಎಜುಕೇಶನಲ್ ಅಸೋಸಿಯೇಷನ್)  ಲೆಟರ್ ಹೆಡ್ ಮೂಲಕ ಪತ್ರ ಬರೆದಿದ್ದಾರೆ ಎನ್ನಲಾದ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪತ್ರದಲ್ಲಿ “ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ಹಿಂದುಗಳನ್ನು ವಿಭಜಿಸಿ ಮುಸ್ಲಿಮರನ್ನು ಒಗ್ಗೂಡಿಸುವ ತಂತ್ರವನ್ನು ಅಳವಡಿಸಿಕೊಂಡಿದೆ ಮತ್ತು ಆ ಮೂಲಕ ಯಶಸ್ಸನ್ನ ಸಾಧಿಸಲಿದೆ ಎಂದು ವೈರಲ್‌ ಪತ್ರದಲ್ಲಿ ಉಲ್ಲೇಖಿಸಲಾಗಿದೆ. Look carefully what…

Read More
ಸ್ರೋಕ್

Fact Check: ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ

ಇತ್ತೀಚೆಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅನಾಧಿಕೃತ ಮಾಹಿತಿಗಳು, ವಿವರಣೆಗಳು ಮತ್ತು ಸಲಹೆಗಳನ್ನು ಹಲವರು ನೀಡುತ್ತಿರುತ್ತಾರೆ. ಇವುಗಳನ್ನು ನಂಬಿ ಅನೇಕರು ತೊಂದರೆಗೀಡಾದ ಸನ್ನಿವೇಶಗಳಿವೆ. ಈಗ, ಸ್ನಾನ ಮಾಡುವಾಗ ತಲೆ ಸ್ನಾನ ಮೊದಲು ಮಾಡುವುದರಿಂದ ಮೆದುಳಿನ ನಾಳಗಳಲ್ಲಿ ಹೆಚ್ಚಿದ ರಕ್ತ ಸಂಚಾರವಾಗಿ ಮೆದುಳಿನ ಪಾರ್ಶ್ವವಾಯು ಆಗುವ ಸಾಧ್ಯತೆ ಹೆಚ್ಚಾಗುತ್ತಿವೆ. ಇದನ್ನು ಕೆನಡಿಯನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್‌ ವರದಿ ಮಾಡಿದೆ ಎಂದು ಪ್ರತಿಪಾದಿಸಿದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸ್ನಾನದ ಸರಿಯಾದ ವಿಧಾನವೆಂದರೆ ಜನರು ಮೊದಲು ತಮ್ಮ ಕಾಲುಗಳನ್ನು ಒದ್ದೆ ಮಾಡುವ…

Read More

Fact Check | ಕ್ರೈಸ್ತರಿಂದಾಗಿ ಭಾರತದಲ್ಲಿ ಭಾನುವಾರ ರಜಾ ದಿನ ಬಂದಿದೆ ಎಂಬ ಪ್ರಧಾನಿ ಮೋದಿ ಹೇಳಿಕೆ ಸುಳ್ಳು

“ನಮ್ಮ ದೇಶದಲ್ಲಿ ಭಾನುವಾರ ರಜೆ ಇದೆ. ಬ್ರಿಟಿಷರು ಇಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ, ಕ್ರಿಶ್ಚಿಯನ್ ಸಮುದಾಯದವರು ರಜಾದಿನವನ್ನು ಹೊಂದಿದ್ದರು, ಈ ಸಂಪ್ರದಾಯವು ಅಂದಿನಿಂದ ಪ್ರಾರಂಭವಾಯಿತು. ಭಾನುವಾರ ಹಿಂದೂಗಳೊಂದಿಗೆ ಸಂಬಂಧ ಹೊಂದಿಲ್ಲ, ಭಾನುವಾರದ ರಜೆ ಕ್ರಿಶ್ಚಿಯನ್ ಸಮುದಾಯದೊಂದಿಗೆ ಸಂಬಂಧ ಹೊಂದಿದೆ. ಇದು ಕಳೆದ 200-300 ವರ್ಷಗಳಿಂದ ನಡೆದುಕೊಂಡು ಬಂದಿದೆ. ಈಗ ಒಂದೊಂದು ಜಿಲ್ಲೆಯಲ್ಲಿ ಭಾನುವಾರದ ರಜೆಗೆ ಬೀಗ ಹಾಕಿದ್ದು ಶುಕ್ರವಾರವೇ ರಜೆ ನೀಡಲಾಗುತ್ತಿದೆ” ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ. ಇಲ್ಲಿ ಪ್ರಧಾನಿ ಮೋದಿ ಅವರು ಹೇಳಲು ಹೊರಟಿರುವುದು ಭಾನುವಾರದ…

Read More

Fact Check: ಉತ್ತರ ಗಾಜಾದಿಂದ ಇಸ್ರೇಲ್‌ಗೆ ಸಂಪರ್ಕಿಸುವ ಸುರಂಗದ ಫೋಟೋವನ್ನು ಈಜಿಪ್ಟಿಗೆ ಸಂಪರ್ಕಿಸುವ ಸುರಂಗ ಎಂದು ಹಂಚಿಕೆ

ದಕ್ಷಿಣ ಗಾಜಾದ ರಾಫಾದಿಂದ ಈಜಿಪ್ಟ್‌ಗೆ ಸಂಪರ್ಕಿಸುತ್ತದೆ ಎಂದು ಹೇಳಲಾದ ಭೂಗತ ಸುರಂಗ ಮಾರ್ಗದ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಮೇ 26 ರಂದು, ರಫಾದ ಶಿಬಿರದ ಮೇಲೆ ಇಸ್ರೆಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ 45 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನ ಗಾಯಗೊಂಡಿದ್ದಾರೆ. ಇದರ ನಂತರ, ಇಂಡೋನೇಷಿಯಾದ ಫೀಲ್ಡ್ ಆಸ್ಪತ್ರೆ ಸೇರಿದಂತೆ ರಫಾದ ತಾಲ್ ಅಸ್-ಸುಲ್ತಾನ್ ಪ್ರದೇಶದಲ್ಲಿ ಇಸ್ರೇಲಿ ಸೇನೆಯು ಬಾಂಬ್ ದಾಳಿಯನ್ನು ಮುಂದುವರೆಸಿದೆ. ಸಧ್ಯ, ಸುರಂಗ…

Read More

Fact Check | 2024ರಲ್ಲಿ 9,60,000 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಎಂಬುದು ಸುಳ್ಳು ಮತ್ತು ವಂಚನೆ

“ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಯೋಜನೆ 2024 ಗಾಗಿ ಅಪ್ಲಿಕೇಶನ್‌ಗಳು ಲಭ್ಯವಿದೆ. ಆರ್ಥಿಕ ಕಾರಣಗಳಿಗಾಗಿ ತಮ್ಮದೇ ಆದ ಲ್ಯಾಪ್‌ಟಾಪ್ ಖರೀದಿಸುವ ಸ್ಥಿತಿಯಲ್ಲಿಲ್ಲದ ಮತ್ತು ಅವರ ಶಿಕ್ಷಣದ ಮಟ್ಟದಲ್ಲಿ ಲ್ಯಾಪ್‌ಟಾಪ್ ಅಗತ್ಯವಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯು ಮುಕ್ತವಾಗಿದೆ”  ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತು ವಾಟ್ಸ್‌ಆಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶದಲ್ಲಿ ಇನ್ನೂ ಮುಂದುವರೆದು, “2024 ರಲ್ಲಿ 960,000 ವಿದ್ಯಾರ್ಥಿಗಳಿಗೆ ಅವರ ಕಲಿಕೆಯನ್ನು ಹೆಚ್ಚಿಸಲು ಉಚಿತ ಲ್ಯಾಪ್‌ಟಾಪ್ ನೀಡಲಾಗುವುದು. ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ತಮ್ಮ…

Read More
ಅರವಿಂದ್ ಕೇಜ್ರಿವಾಲ್

Fact Check: ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ 63 ಲಕ್ಷದಷ್ಟು ದುಬಾರಿ ಮಾವಿನ ಹಣ್ಣುಗಳನ್ನು ತಿನ್ನಲು ಖರ್ಚು ಮಾಡಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಅವರ ಕುರಿತು ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ ಒಂದು ತಿಂಗಳಷ್ಟರಲ್ಲಿ ಕೇವಲ ಮಾವಿನ ಹಣ್ಣು ತಿನ್ನಲು 63 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೈರಲ್ ವಿಡಿಯೋವನ್ನು ” ಒಬ್ಬ ಮನುಷ್ಯ ಒಂದು ತಿಂಗಳಿನಲ್ಲಿ 63 ಲಕ್ಷರೂಪಾಯಿಯ ಮಾವಿನ ಹಣ್ಣು  ತಿನ್ನಲು ಸಾಧ್ಯವೆ? ಇದನ್ನು ಜನಸಾಮಾನ್ಯ ಪಕ್ಷದ ಅರವಿಂದ ಕೇಜ್ರಿವಾಲ್ ತಿಹಾರ ಜೈಲಿನಲ್ಲಿ ಕುಳಿತು ಸಾಧನೆ ಮಾಡಿದ್ದಾರೆ…

Read More

ಗಾಂಧಿ ಸಿನಿಮಾ ಬಿಡುಗಡೆಗೂ ಮುನ್ನ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು

ಲೋಕಸಭಾ ಚುನಾವಣೆಯ ಅಂಗವಾಗಿ ಖಾಸಗಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಪ್ರಧಾನಿ ಮೋದಿಯವರು “ಗಾಂಧಿ ಸಿನಿಮಾ ಬಿಡುಗಡೆಯಾಗುವವರೆಗೂ ಮಹಾತ್ಮ ಗಾಂಧಿಯವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ.  ಸ್ವಾತಂತ್ರ್ಯದ ನಂತರದ 75 ವರ್ಷಗಳಲ್ಲಿ ಜಗತ್ತು ಮಹಾನ್ ನಾಯಕನ ಬಗ್ಗೆ ಜಾಗೃತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಭಾರತೀಯ ರಾಜಕೀಯ ನಾಯಕರ ಜವಾಬ್ದಾರಿಯಾಗಿದೆ. ಮಾರ್ಟಿನ್ ಲೂಥರ್ ಕಿಂಗ್ ಮತ್ತು ನೆಲ್ಸನ್ ಮಂಡೇಲಾ ಅವರು ವಿಶ್ವಾದ್ಯಂತ ಪ್ರಸಿದ್ಧ ವ್ಯಕ್ತಿಗಳಾಗಿದ್ದರೆ, ಮಹಾತ್ಮ ಗಾಂಧಿಯನ್ನು ವಿಶ್ವಪ್ರಸಿದ್ಧ ವ್ಯಕ್ತಿಯಾಗಿ ಮಾಡಲು ಭಾರತವು ಉತ್ತಮವಾಗಿ ‘ಕೆಲಸ’ ಮಾಡಬೇಕಿತ್ತು ಎಂದು ವಿಶ್ವವನ್ನು ಸುತ್ತಿದ…

Read More
ರಾಹುಲ್ ಗಾಂಧಿ

Fact Check: ಕಾಂಗ್ರೆಸ್ ಸಂವಿಧಾನವನ್ನು ನಾಶಮಾಡಲು ಬಯಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿಲ್ಲ

ಕಾಂಗ್ರೆಸ್ ಪಕ್ಷವು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶಮಾಡಲು ಬಯಸುತ್ತದೆ ಮತ್ತು ಭಾರತೀಯ ಜನತಾ ಪಕ್ಷವು (ಬಿಜೆಪಿ) ಅದನ್ನು ರಕ್ಷಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿರುವ ವಿಡಿಯೋ ಒಂದು ಈಗ ಸಾಕಷ್ಟಯ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, “ನಮಸ್ಕಾರ, ನಾನು ರಾಹುಲ್ ಗಾಂಧಿ, ಒಂದು ಕಡೆ ಈ ಚುನಾವಣೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆಯಾದರೆ, ಇನ್ನೋಂದು ಕಡೆ, ಕಾಂಗ್ರೆಸ್ ಪಕ್ಷ ಮತ್ತು ಐಎನ್‌ಡಿಐಎ ಮೈತ್ರಿಕೂಟ ಅದನ್ನು ನಾಶಪಡಿಸುತ್ತಿದೆ, ಮತ್ತೊಂದು ಕಡೆ ಆರ್‌ಎಸ್‌ಎಸ್ ಮತ್ತು ಬಿಜೆಪಿಯು 20-25…

Read More